ಜಿಎಸ್‌ಟಿಯಿಂದ ಸರ್ಕಾರಕ್ಕೆ ಆದಾಯ ನಷ್ಟ: ಪ್ರಧಾನಿ ಸಲಹಾ ಮಂಡಳಿ ಮುಖ್ಯಸ್ಥ ಬಿಬೇಕ್ ಡೆಬ್ರಾಯ್

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಯಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಅಧ್ಯಕ್ಷ ಬಿಬೇಕ್ ದೆಬ್ರಾಯ್ ಹೇಳಿತ್ತಾರೆ.
ಬಿಬೇಕ್ ದೆಬ್ರಾಯ್
ಬಿಬೇಕ್ ದೆಬ್ರಾಯ್
Updated on

ಕೋಲ್ಕತ್ತಾ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಯಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ ಎಂದು ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಅಧ್ಯಕ್ಷ ಬಿಬೇಕ್ ದೆಬ್ರಾಯ್ ಹೇಳಿತ್ತಾರೆ. ಇದು ಒಂದು ದರದೊಂದಿಗೆ ಆದಾಯ ತಟಸ್ಥವಾಗಿರಬೇಕು. ಆದಾಗ್ಯೂ, ಜಿಎಸ್‌ಟಿಯು ವಿಷಯಗಳನ್ನು ಹೆಚ್ಚು ಸುಲಭಗೊಳಿಸಿದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದರು.

 ಕೋಲ್ಕತ್ತಾ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಎಸ್‌ಟಿಯು ಸಾಕಷ್ಟು ಸರಳೀಕರಣಕ್ಕೆ ಕಾರಣವಾಗಿದೆ ಎಂದರು. ಆದರ್ಶ ಜಿಎಸ್‌ಟಿ ಒಂದೇ ದರವನ್ನು ಹೊಂದಿದೆ ಮತ್ತು ಆದಾಯ ತಟಸ್ಥವಾಗಿರಲು ಉದ್ದೇಶಿಸಲಾಗಿದೆ. GST ಅನ್ನು ಮೊದಲು ಪರಿಚಯಿಸಿದಾಗ, ಸರಾಸರಿ ದರವು ಕನಿಷ್ಠ ಶೇಕಡ 17ರಷ್ಟು ಆಗಿರಬೇಕು. 

ಆದರೆ ಪ್ರಸ್ತುತ ದರ ಶೇಕಡ 11.4ರಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಎಸ್‌ಟಿಯಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ. ಜನರೊಂದಿಗೆ ಜಿಎಸ್‌ಟಿ ಕೌನ್ಸಿಲ್‌ನ ಸದಸ್ಯರೂ ಕೂಡ ಶೇ.28ರಷ್ಟು ತೆರಿಗೆ ದರ ಇಳಿಕೆ ಮಾಡಬೇಕೆಂದು ಬಯಸುತ್ತಿದ್ದಾರೆ ಎಂದರು. ಆದರೆ ಶೂನ್ಯ ಮತ್ತು ಶೇಕ 3ರಷ್ಟು ತೆರಿಗೆ ದರಗಳು ಹೆಚ್ಚಾಗುವುದನ್ನು ಯಾರೂ ಬಯಸುವುದಿಲ್ಲ. ಹಾಗಾಗಿ ನಾವು ಎಂದಿಗೂ ಸರಳೀಕೃತ ಜಿಎಸ್‌ಟಿಯನ್ನು ಹೊಂದುವುದಿಲ್ಲ ಎಂದರು.

ಮೊಬೈಲ್ ಆ್ಯಪ್‌ನಲ್ಲಿ ಜಿಎಸ್‌ಟಿ ಬಿಲ್‌ಗಳನ್ನು ಅಪ್‌ಲೋಡ್ ಮಾಡುವ ಮೂಲಕ 1 ಕೋಟಿ ರೂಪಾಯಿವರೆಗಿನ ಬಹುಮಾನಗಳನ್ನು ಗೆಲ್ಲುವ ಯೋಜನೆಯಾದ ಮೇರಾ ಬಿಲ್ ಮೇರಾ ಅಧಿಕಾರ್ ಅಪ್ಲಿಕೇಶನ್ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗಲಿದೆ. ಈ ಅಪ್ಲಿಕೇಶನ್ iOS ಮತ್ತು Android ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ. ಇದನ್ನು ಮೊದಲು ಗುಜರಾತ್, ಹರಿಯಾಣ, ಅಸ್ಸಾಂ, ಪುದುಚೇರಿ, ದಮನ್ ಮತ್ತು ದಿಯು ಮತ್ತು ದಾದ್ರಾ ನಗರ ಹವೇಲಿಯಲ್ಲಿ ಪ್ರಾರಂಭಿಸಲಾಗುವುದು. 

ಇದರ ಅಡಿಯಲ್ಲಿ 10 ಸಾವಿರದಿಂದ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಕಸ್ಟಮ್ಸ್ ಮತ್ತು ಅಬಕಾರಿ ಮಂಡಳಿ (ಸಿಬಿಐಸಿ) ತಿಳಿಸಿದೆ. ಖರೀದಿಯ ಮೇಲೆ ಜಿಎಸ್‌ಟಿ ಬಿಲ್‌ಗಳನ್ನು ಸಂಗ್ರಹಿಸಲು ಗ್ರಾಹಕರನ್ನು ಉತ್ತೇಜಿಸವ ಕಾರ್ಯ ಇದಾಗಿದೆ. ಕನಿಷ್ಠ ಖರೀದಿ 200 ರೂ. ಒಬ್ಬ ವ್ಯಕ್ತಿಯು ಒಂದು ತಿಂಗಳಲ್ಲಿ ಗರಿಷ್ಠ 25 ಬಿಲ್‌ಗಳನ್ನು ಅಪ್‌ಲೋಡ್ ಮಾಡಬಹುದು. ಬಿಲ್ ಇತರ ವಿವರಗಳೊಂದಿಗೆ ಮಾರಾಟಗಾರರ GSTIN ಅನ್ನು ಕಳುಹಿಸಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com