ಸನಾತನ ಧರ್ಮ ರಕ್ಷಣೆಗಾಗಿ 'ನರಸಿಂಹ ವಾರಾಹಿ ಬ್ರಿಗೇಡ್‍' ಸ್ಥಾಪಿಸಿದ ಡಿಸಿಎಂ ಪವನ್ ಕಲ್ಯಾಣ್!

ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಆದರೆ ನನ್ನ ನಂಬಿಕೆಯಲ್ಲಿ ನಾನು ದೃಢವಾಗಿರುತ್ತೇನೆ. ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
Pawan Kalyan
ಪವನ್ ಕಲ್ಯಾಣ್
Updated on

ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸನಾತನ ಧರ್ಮವನ್ನು ರಕ್ಷಿಸಲು 'ನರಸಿಂಹ ವಾರಾಹಿ ಬ್ರಿಗೇಡ್' ಅನ್ನು ರಚಿಸಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸನಾತನ ಧರ್ಮವನ್ನು ರಕ್ಷಿಸುವ ನಿಟ್ಟಿನಲ್ಲಿ ತಮ್ಮ ಪಕ್ಷವಾದ ಜನಸೇನೆಯು ನರಸಿಂಹ ವಾರಾಹಿ ವಿಭಾಗವನ್ನು ಸ್ಥಾಪಿಸಲಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಹೊಸ ಬ್ರಿಗೇಡ್‌ನ ಉದ್ದೇಶವನ್ನು ವಿವರಿಸಿದ ಕಲ್ಯಾಣ್, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಆದರೆ ನನ್ನ ನಂಬಿಕೆಯಲ್ಲಿ ನಾನು ದೃಢವಾಗಿರುತ್ತೇನೆ. ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಸನಾತನ ಧರ್ಮವನ್ನು ರಕ್ಷಿಸಲು ನನ್ನ ಪಕ್ಷದೊಳಗೆ 'ನರಸಿಂಗ್ ವಾರಾಹಿ ಬ್ರಿಗೇಡ್' ಎಂಬ ಮೀಸಲಾದ ವಿಭಾಗವನ್ನು ಸ್ಥಾಪಿಸುತ್ತಿದ್ದೇನೆ ಎಂದರು. ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದ ನೈವೇದ್ಯದಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ಇತ್ತೀಚಿನ ವಿವಾದದ ನಂತರ ಈ ಬೆಳವಣಿಗೆ ನಡೆದಿದೆ. ಕಳೆದ ತಿಂಗಳು, ಉಪಮುಖ್ಯಮಂತ್ರಿ ಅವರು ಸನಾತನ ಧರ್ಮವನ್ನು ರಕ್ಷಿಸಲು ಮತ್ತು ಅದರ ನಂಬಿಕೆಗಳನ್ನು ಅವಮಾನಿಸುವ ಚಟುವಟಿಕೆಗಳನ್ನು ನಿಲ್ಲಿಸಲು ಬಲವಾದ ರಾಷ್ಟ್ರೀಯ ಕಾನೂನನ್ನು ಮಾಡುವಂತೆ ಪ್ರತಿಪಾದಿಸಿದ್ದರು.

ತಿರುಪತಿಯಲ್ಲಿ ನಡೆದ ವಾರಾಹಿ ಘೋಷಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸನಾತನ ಧರ್ಮವನ್ನು ರಕ್ಷಿಸಲು ಮತ್ತು ಅದರ ನಂಬಿಕೆಗಳಿಗೆ ಹಾನಿಯಾಗದಂತೆ ತಡೆಯಲು ಬಲವಾದ ರಾಷ್ಟ್ರೀಯ ಕಾಯಿದೆಯ ಅಗತ್ಯವಿದೆ. ಈ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕು ಮತ್ತು ಭಾರತದಾದ್ಯಂತ ಏಕರೂಪವಾಗಿ ಅನ್ವಯಿಸಬೇಕು. ಕಾನೂನಿನ ಅನುಷ್ಠಾನದ ಮೇಲ್ವಿಚಾರಣೆಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸನಾತನ ಧರ್ಮ ಸಂರಕ್ಷಣಾ ಮಂಡಳಿಯನ್ನು ಸ್ಥಾಪಿಸಲು ಪ್ರಸ್ತಾಪಿಸಿದ ಅವರು, ಅದರ ಚಟುವಟಿಕೆಗಳಿಗೆ ಮೀಸಲಾದ ಹಣವನ್ನು ಒದಗಿಸಬೇಕು. ದೇವಾಲಯದ ನೈವೇದ್ಯ ಮತ್ತು ಪ್ರಸಾದದಲ್ಲಿ ಬಳಸುವ ಪದಾರ್ಥಗಳ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸನಾತನ ಧರ್ಮದ ಪ್ರಮಾಣೀಕರಣದ ಅಗತ್ಯವನ್ನು ಅವರು ಒತ್ತಿ ಹೇಳಿದರು.

Pawan Kalyan
ನಮ್ಮಲ್ಲಿ ಹೆಣ್ಣನ್ನ ಕೀಳಾಗಿ ನೋಡ್ತಾರೆ; ಹಿಂದೂಗಳಲ್ಲಿ ಪೂಜಿಸುತ್ತಾರೆ: ಮಕ್ಕಳೊಂದಿಗೆ ಸನಾತನ ಧರ್ಮಕ್ಕೆ ಮುಸ್ಲಿಂ ಮಹಿಳೆ ಮತಾಂತರ!

ಜನಸೇನಾ ಪಕ್ಷದ ಮುಖ್ಯಸ್ಥರು ಐಎಸ್ ಜಗನ್ನಾಥಪುರದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದೊಂದಿಗಿನ ತಮ್ಮ ಸಂಬಂಧದ ಕುರಿತು ಮಾತನಾಡಿದರು. ಇದನ್ನು ಅವರು 2009ರಿಂದ ಬೆಂಬಲಿಸುತ್ತಿದ್ದಾರೆ. ದೇಗುಲದ ಅಭಿವೃದ್ಧಿಗೆ 4.5 ಕೋಟಿ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದ್ದು, ರಕ್ಷಣಾ ಗೋಡೆ ನಿರ್ಮಾಣ, ಮಂದಿರ ನಿರ್ಮಾಣವೂ ಸೇರಿದೆ. ದೇವಸ್ಥಾನದ ಬಳಿ ಅನಧಿಕೃತವಾಗಿ ಉತ್ಖನನ ನಡೆಸಿರುವ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com