ಜಮ್ಮು-ಕಾಶ್ಮೀರ BJP ರಾಜ್ಯಾಧ್ಯಕ್ಷರಾಗಿ ಸತ್ ಶರ್ಮಾ ನೇಮಕ

ರವೀಂದರ್ ರೈನಾ ಅವರು 2018ರಿಂದ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿ ಬಹಳ ಹಿಂದೆಯೇ ಮುಗಿದಿತ್ತು. ಇದೀಗ ಪಕ್ಷವು ಸತ್ ಶರ್ಮಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ.
Sat Sharma
ಸತ್ ಶರ್ಮಾ
Updated on

ನವದೆಹಲಿ: ಜಮ್ಮು-ಕಾಶ್ಮೀರದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಸತ್ ಶರ್ಮಾ ಅವರು ನೇಮಕಗೊಂಡಿದ್ದಾರೆ.

ರವೀಂದರ್ ರೈನಾ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿದೆ.

ರವೀಂದರ್ ರೈನಾ ಅವರು 2018ರಿಂದ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿ ಬಹಳ ಹಿಂದೆಯೇ ಮುಗಿದಿತ್ತು. ಇದೀಗ ಪಕ್ಷವು ಸತ್ ಶರ್ಮಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಶರ್ಮಾ ಅವರು ಅನುಭವಿ ಸಂಘಟನೆಯ ವ್ಯಕ್ತಿಯಾಗಿದ್ದಾರೆ. ಮುಂಬರುವ ದಿನ ಮತ್ತು ವಾರಗಳಲ್ಲಿ ಪಕ್ಷವು ಮತ್ತಷ್ಟು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರನ್ನು ಬದಲಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com