ಆಗ್ರಾ: IAF ಯುದ್ಧ ವಿಮಾನ ಪತನ, ಪೈಲಟ್ ಪಾರು

ಯುದ್ಧ ವಿಮಾನವು ಪಂಜಾಬ್‌ನ ಆದಂಪುರದಿಂದ ಟೇಕಾಫ್ ಆಗಿದ್ದು, ಆಗ್ರಾಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
MiG-29 fighter jet has crashed near Agra, Uttar Pradesh
IAF ಮಿಗ್-29 ಯುದ್ಧ ವಿಮಾನ ಪತನPhoto | PTI
Updated on

ಆಗ್ರಾ: ಉತ್ತರ ಪ್ರದೇಶದ ಆಗ್ರಾ ಬಳಿ ಮಿಗ್-29 ಯುದ್ಧ ವಿಮಾನ ಸೋಮವಾರ ಪತನಗೊಂಡಿದ್ದು, ಅದೃಷ್ಟವಶಾತ್ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ವಿಮಾನದಿಂದ ಹೊರಬಿದ್ದಿದ್ದಾರೆ.

ಯುದ್ಧ ವಿಮಾನವು ಪಂಜಾಬ್‌ನ ಆದಂಪುರದಿಂದ ಟೇಕಾಫ್ ಆಗಿದ್ದು, ಆಗ್ರಾಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಯುದ್ಧ ವಿಮಾನವು ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಹೊತ್ತಿ ಉರಿದಿದೆ. ಪೈಲಟ್ ಸೇರಿದಂತೆ ಇಬ್ಬರು ವಿಮಾನದಿಂದ ಹಾರುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಘಟನೆ ಕುರಿತು ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com