ಜಮ್ಮು: ಉಗ್ರರ ಕುರಿತು ಹೇಳಿಕೆ; ಫಾರೂಕ್ ಅಬ್ದುಲ್ಲಾ ವಿರುದ್ಧ ರಾಷ್ಟ್ರೀಯ ಬಜರಂಗ ದಳ ಪ್ರತಿಭಟನೆ

ಭಯೋತ್ಪಾದಕರನ್ನು ಕೊಲ್ಲಬಾರದು, ಅವರ ಹಿಂದೆ ಯಾರು ಇದ್ದಾರೆ ಎಂಬುದನ್ನು ಕಂಡುಹಿಡಿಯಬೇಕು ಎಂದು ಪಾರೂಕ್ ಅಬ್ದುಲ್ಲಾ ಇತ್ತೀಚಿಗೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
protests against Farooq Abdullah
ಫಾರೂಕ್ ಅಬ್ದುಲ್ಲಾ ವಿರುದ್ಧ ಪ್ರತಿಭಟನೆ ಚಿತ್ರ
Updated on

ಜಮ್ಮು: ಉಗ್ರರ ಕುರಿತು ರಾಷ್ಟ್ರೀಯ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಇತ್ತೀಚಿಗೆ ನೀಡಿದ ಹೇಳಿಕೆ ವಿರೋಧಿಸಿ ರಾಷ್ಟ್ರೀಯ ಬಜರಂಗ ದಳ ಸೋಮವಾರ ಪ್ರತಿಭಟನೆ ನಡೆಸಿತು. ಕಣಿವೆಯಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪಾಕಿಸ್ತಾನ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಭಯೋತ್ಪಾದಕರನ್ನು ಕೊಲ್ಲಬಾರದು, ಅವರ ಹಿಂದೆ ಯಾರು ಇದ್ದಾರೆ ಎಂಬುದನ್ನು ಕಂಡುಹಿಡಿಯಬೇಕು ಎಂದು ಪಾರೂಕ್ ಅಬ್ದುಲ್ಲಾ ಇತ್ತೀಚಿಗೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಪಾಕಿಸ್ತಾನ ಪ್ರೇರಿತ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರಾಡಳಿತಪ್ರದೇಶದಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿರುವ ಸ್ಥಳೀಯರ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಉಗ್ರ ಚಟುವಟಿಕೆಯಲ್ಲಿ ಪಾಕಿಸ್ತಾನದ ಪಾತ್ರ ಹಾಗೂ ಅಬ್ದುಲ್ಲಾ ಅವರ ಹೇಳಿಕೆಯನ್ನು ಆರ್ ಬಿಡಿ ಅಧ್ಯಕ್ಷ ರಾಕೇಶ್ ಕುಮಾರ್ ಹಾಗೂ ಸಂಘಟನೆಯ ಸದಸ್ಯರು ಖಂಡಿಸಿದರು.

protests against Farooq Abdullah
ಭಯೋತ್ಪಾದಕರನ್ನು ಹತ್ಯೆ ಮಾಡಬಾರದು, ಅವರ ಹಿಂದೆ ಯಾರಿದ್ದಾರೆ ತಿಳಿಯಬೇಕು: ಫಾರೂಕ್ ಅಬ್ದುಲ್ಲಾ

ಪಾಕಿಸ್ತಾನ ಪ್ರೇರಿತ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರಾಡಳಿತಪ್ರದೇಶದಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿರುವ ಸ್ಥಳೀಯರ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಉಗ್ರ ಚಟುವಟಿಕೆಯಲ್ಲಿ ಪಾಕಿಸ್ತಾನದ ಪಾತ್ರ ಹಾಗೂ ಅಬ್ದುಲ್ಲಾ ಅವರ ಹೇಳಿಕೆಯನ್ನು ಆರ್ ಬಿಡಿ ಅಧ್ಯಕ್ಷ ರಾಕೇಶ್ ಕುಮಾರ್ ಹಾಗೂ ಸಂಘಟನೆಯ ಸದಸ್ಯರು ಖಂಡಿಸಿದರು.

ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ರಚನೆಯಾದ ನಂತರ ಅನೇಕ ಬಾರಿ ಉಗ್ರರ ಚಟುವಟಿಕೆಗಳು ಹೆಚ್ಚಾಗಿವೆ. ಪ್ರತಿಯೊಬ್ಬರು ಇದನ್ನು ನೋಡುತ್ತಿದ್ದಾರೆ. ಉಗ್ರರ ಕುರಿತ ಅಬ್ದುಲ್ಲಾ ಅವರ ಹೇಳಿಕೆ ಖಂಡಿಸಿ ರಾಷ್ಟ್ರೀಯ ಬಜರಂಗ ದಳ ಪ್ರತಿಭಟನೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com