ಮುಂಬೈ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಮಹಾರಾಷ್ಟ್ರ ಚುನಾವಣಾ ಅಖಾಡದಲ್ಲೂ ಸದ್ದು ಮಾಡುತ್ತಿವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಯಾವಾಗಲೂ ಹುಸಿಯಾಗುತ್ತಿವೆ ಎಂದು ಶಿವಸೇನೆ ನಾಯಕಿ ಮನಿಶಾ ಕಯಾಂಡೆ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣ, ಹಿಮಾಚಲ ಸೇರಿದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ಬೇರೆ ಬೇರೆ ರಾಜ್ಯಗಳಲ್ಲಿ ಮಹಿಳೆಯರಿಗೆ ಸ್ವಲ್ಪ ಹಣ ನೀಡುವ ಯೋಜನೆ ಕುರಿತು ಮಾತನಾಡಿದ ಮನಿಶಾ ಕಯಾಂಡೆ, ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ರೂ. 2,000, ತೆಲಂಗಾಣದಲ್ಲಿ 'ಮಹಾಲಕ್ಷ್ಮಿ ಯೋಜನೆಯಡಿ 1,500 ರೂ. ಮತ್ತು ಹಿಮಾಚಲ ಪ್ರದೇಶದಲ್ಲಿ ಮಹಿಳೆಯರಿಗೆ ರೂ.1,500 ನೀಡುತ್ತಿರುವುದಾಗಿ ಕಾಂಗ್ರೆಸ್ ನವರು ಹೇಳಿಕೊಳ್ಳುತ್ತಿದ್ದಾರೆ. ಇವುಗಳನ್ನು ನಿಲ್ಲಿಸಿದರೆ ಅವರ ಎಲ್ಲಾ ಐದು ಗ್ಯಾರಂಟಿಗಳು ಸುಳ್ಳಾಗಲಿವೆ ಎಂದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (MVA) ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ ರೂ.3,000 ನೀಡುವ ಮಹಾಲಕ್ಷ್ಮಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಾಲಕ್ಷ್ಮಿ ಹಾಗೂ ಉಚಿತ ಬಸ್ ಪ್ರಯಾಣದ ಯೋಜನೆಯನ್ನು ಘೋಷಿಸಿದ್ದರು.
ಜೊತೆಗೆ ರೂ. 3 ಲಕ್ಷವರೆಗಿನ ಎಲ್ಲಾ ರೈತರ ಕೃಷಿ ಸಾಲ ಮನ್ನಾ,ಜಾತಿ ಆಧಾರಿತ ಸಮೀಕ್ಷೆ, ಎಲ್ಲಾ ಕುಟುಂಬಗಳಿಗೆ ರೂ. 25 ಲಕ್ಷ ಆರೋಗ್ಯ ವಿಮೆ ಯೋಜನೆ, ಯುವ ಜನತೆಗೆ ತಿಂಗಳಿಗೆ ರೂ.4,000 ಆರ್ಥಿಕ ನೆರವು ನೀಡುವ ಯೋಜನೆಯನ್ನು ಕಾಂಗ್ರೆಸ್ ಘೋಷಿಸಿದೆ.
ನವೆಂಬರ್ 20 ರಂದು 288 ಕ್ಷೇತ್ರದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ 23 ರಂದು ಮತ ಎಣಿಕೆ ಘೋಷಣೆಯಾಗಲಿದೆ.
Advertisement