'ತೆಲುಗು ಭಾಷಿಕರಿಗೆ ಹೆಮ್ಮೆಯ ಕ್ಷಣ': ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ JD Vance ಪತ್ನಿ Usha Vance ಗೆ ಆಂಧ್ರ ಸಿಎಂ Chandrababu Naidu ಅಭಿನಂದನೆ

ಅಮೆರಿಕದಲ್ಲಿ ತೆಲುಗು ಮೂಲ ಹೊಂದಿರುವ ಉಷಾ ವಾನ್ಸ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಇದು ಜಗತ್ತಿನ ಎಲ್ಲಾ ತೆಲುಗು ಜನರಿಗೆ ಹೆಮ್ಮೆಯ ವಿಷಯವಾಗಿದೆ. ಅವರನ್ನು ಆಂಧ್ರ ಪ್ರದೇಶಕ್ಕೆ ಆಹ್ವಾನಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ..
Chandrababu Naidu, Usha Vance and JD Vance
ಸಿಎಂ ಚಂದ್ರಬಾಬು ನಾಯ್ಡು, ಉಷಾ ವಾನ್ಸ್ ಹಾಗೂ ಜೆಡಿ ವಾನ್ಸ್
Updated on

ಅಮರಾವತಿ: ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೆಡಿ ವಾನ್ಸ್ ಅವರ ಪತ್ನಿ ಉಷಾ ವಾನ್ಸ್ ಅವರನ್ನು ಮುಖ್ಯಮಂತ್ರಿ ಚಂದ್ರಬಾಬು ಅಭಿನಂದಿಸಿದ್ದು, ಇದು 'ತೆಲುಗು ಭಾಷಿಕರಿಗೆ ಹೆಮ್ಮೆಯ ಕ್ಷಣ' ಎಂದು ಶ್ಲಾಘಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಚಂದ್ರಬಾಬು ನಾಯ್ಡು, 'ಅಮೆರಿಕದಲ್ಲಿ ತೆಲುಗು ಮೂಲ ಹೊಂದಿರುವ ಉಷಾ ವಾನ್ಸ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಇದು ಜಗತ್ತಿನ ಎಲ್ಲಾ ತೆಲುಗು ಜನರಿಗೆ ಹೆಮ್ಮೆಯ ವಿಷಯವಾಗಿದೆ. ಅವರನ್ನು ಆಂಧ್ರ ಪ್ರದೇಶಕ್ಕೆ ಆಹ್ವಾನಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ' ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಡೊನಾಲ್ಡ್ ಟ್ರಂಪ್ ಅವರನ್ನೂ ಕೂಡ ಚಂದ್ರಬಾಬು ನಾಯ್ಡು ಅಭಿನಂಧಿಸಿದರು.

38 ವರ್ಷದ ಉಷಾ ಅಮೆರಿಕದ ಎರಡನೇ ಮಹಿಳೆಯಾಗಲಿದ್ದಾರೆ. ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿ ವ್ಯಾನ್ಸ್ ಪತ್ನಿ ಉಷಾ ವಾನ್ಸ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ.

Chandrababu Naidu, Usha Vance and JD Vance
ಗೆದ್ದ ಟ್ರಂಪ್: ಭಾರತ ಮೂಲದ ಉಷಾ ಚಿಲುಕುರಿ ಅಮೆರಿಕದ ಎರಡನೇ ಮಹಿಳೆ; ಆಂಧ್ರ ಗ್ರಾಮಸ್ಥರ ನಿರೀಕ್ಷೆ ಏನು?

ಆಂಧ್ರಪ್ರದೇಶದಲ್ಲಿ ಬೇರೂರಿರುವ ಉಷಾ ವಾನ್ಸ್ ಅವರು ಅಮೆರಿಕದ ಎರಡನೇ ಕಮಾಂಡ್ ಆಗಿ ಸೇವೆ ಸಲ್ಲಿಸಿದ ಮೊದಲ ತೆಲುಗು ಮಹಿಳೆಯಾಗಿದ್ದಾರೆ ಮತ್ತು ಅವರ ಗೆಲುವು ಐತಿಹಾಸಿಕ ಕ್ಷಣವಾಗಿದೆ ಎಂದು ಚಂದ್ರಬಾಬು ನಾಯ್ಡು ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಶ್ವಾದ್ಯಂತ ತೆಲುಗು ಸಮುದಾಯಕ್ಕೆ ಇದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದ ಚಂದ್ರಬಾಬು, ಆಂಧ್ರಪ್ರದೇಶಕ್ಕೆ ಭೇಟಿ ನೀಡಲು ಅವರನ್ನು (ಜೆಡಿ ವಾನ್ಸ್ ಮತ್ತು ಉಷಾ) ಆಹ್ವಾನಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಅಂದಹಾಗೆ ಉಷಾ ಅವರು ಜೆಡಿ ವ್ಯಾನ್ಸ್ ಅವರ ಪತ್ನಿಯಾಗಿದ್ದು, ಉಷಾ ಅವರು ಮೂಲತಃ ಆಂಧ್ರ ಪ್ರದೇಶ ಮೂಲದವರು. ಅವರ ಕುಟುಂಬದ ಪೂರ್ವಜರು ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಸಿದ್ಧ ಗೋದಾವರಿ ಪಟ್ಟಣ ತಣುಕು ಬಳಿ ಇರುವ ವಡ್ಲೂರು ಗ್ರಾಮವಾಗಿದೆ. ಇದು ಜಿಲ್ಲಾ ಕೇಂದ್ರ ಭೀಮಾವರಂನಿಂದ ಸುಮಾರು 35 ಕಿಮೀ ದೂರದಲ್ಲಿದೆ.

ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆಡಿ ವಾನ್ಸ್ ಆಂಧ್ರ ಮೂಲದ ಉಷಾ ಅವರನ್ನು ಮದುವೆಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com