ನಮ್ಮದು ರಾಜ್ಯವಾಗಿತ್ತು... ಈಗ ಎಲ್ಲವನ್ನು ಕಿತ್ತುಕೊಳ್ಳಲಾಗಿದೆ: ಒಮರ್ ಅಬ್ದುಲ್ಲಾ

"ಹೊಸದಾಗಿ ಚುನಾಯಿತವಾದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೊದಲ ಅಧಿವೇಶನವು ಅಲ್ಪಾವಧಿಯದ್ದಾಗಿದೆ. ಆದರೆ ಕಾರ್ಯಸೂಚಿಯ ದೃಷ್ಟಿಯಿಂದ ಇದು ಐತಿಹಾಸಿಕವಾಗಿದೆ" ಎಂದರು.
Omar Abdullah
ಒಮರ್ ಅಬ್ದುಲ್ಲಾ
Updated on

ಶ್ರೀನಗರ: ವಿಧಾನಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆಯ ನಿರ್ಣಯ ಅಂಗೀಕರಿಸಿದ ನಂತರ ಜನರು "ತಮ್ಮ ಧ್ವನಿ ಕಂಡುಕೊಂಡಿದ್ದಾರೆ" ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಸದನದಲ್ಲಿ ಲೆಫ್ಟಿನೆಂಟ್ ಗವರ್ನರ್ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಒಮರ್ ಅಬ್ದುಲ್ಲಾ, "ಹೊಸದಾಗಿ ಚುನಾಯಿತವಾದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೊದಲ ಅಧಿವೇಶನವು ಅಲ್ಪಾವಧಿಯದ್ದಾಗಿದೆ. ಆದರೆ ಕಾರ್ಯಸೂಚಿಯ ದೃಷ್ಟಿಯಿಂದ ಇದು ಐತಿಹಾಸಿಕವಾಗಿದೆ" ಎಂದರು.

ಜಮ್ಮು ಮತ್ತು ಕಾಶ್ಮೀರವು ಒಂದು ರಾಜ್ಯವಾಗಿದ್ದು ಮತ್ತು ವಿಶೇಷ ಸ್ಥಾನಮಾನವನ್ನು ಹೊಂದಿತ್ತು. ಆದರೆ ಈಗ ಎಲ್ಲವನ್ನು ಕಿತ್ತುಕೊಳ್ಳಲಾಗಿದೆ. 370ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದೆ" ಎಂದು ಹೇಳಿದರು.ಒಮರ್ ಅಬ್ದುಲ್ಲಾ

Omar Abdullah
ವಿಶೇಷ ಸ್ಥಾನಮಾನ ನಿರ್ಣಯ: ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಸತತ ಮೂರನೇ ದಿನವೂ ಗದ್ದಲ-ಕೋಲಾಹಲ; ಬಿಜೆಪಿ ಶಾಸಕರ ಪ್ರತಿಭಟನೆ

"ಬಹಳ ಸಮಯದ ನಂತರ ಸದನದಲ್ಲಿ ಈ ರೀತಿ ಮಾತನಾಡುವ ಅವಕಾಶ ಸಿಕ್ಕಿದೆ. 2014ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿಯಾಗಿ ಮತ್ತು 2018ರಲ್ಲಿ ಪ್ರತಿಪಕ್ಷವಾಗಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ್ದೆ. ಅಂದಿನಿಂದ ಇಂದಿನವರೆಗೆ ತುಂಬಾ ಬದಲಾವಣೆಯಾಗಿದೆ ಮತ್ತು ನಾವು ಬಹಳಷ್ಟು ಕಳೆದುಕೊಂಡಿದ್ದೇವೆ" ಎಂದು ಬೇಸರ ವ್ಯಕ್ತಪಡಿಸಿದರು.

ನೂತನ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ಇಂದು ಅಂತ್ಯಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com