ಬಿಹಾರ: ರೈಲು ಬೋಗಿ ಜೋಡಣೆ ನಡುವೆ ಸಿಲುಕಿ ಕಾರ್ಮಿಕ ನಜ್ಜುಗುಜ್ಜು; ಸಾವು

ಈ ಭಯಾನಕ ಘಟನೆಯನ್ನು ನೋಡಿದ ಪ್ರಯಾಣಿಕರು ಕೂಗುತ್ತಿದ್ದಂತೆಯೇ, ರೈಲು ಚಾಲಕ ರೈಲಿನಿಂದ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
Mr Rao was crushed by the moving engine and died on the spot.
ರೈಲಿನ ಬೋಗಿಗಳ ನಡುವೆ ಸಿಲುಕಿ ಸಾವನ್ನಪ್ಪಿದ್ದ ವ್ಯಕ್ತಿ
Updated on

ಬಿಹಾರ: ರೈಲು ಬೋಗಿ ಜೋಡಿಸುವಾಗ ಸಂಭವಿಸಿದ ಅಪಘಾತದಿಂದಾಗಿ ರೈಲ್ವೆ ಪೋರ್ಟರ್ ಒಬ್ಬರು ಮೃತಪಟ್ಟಿರುವ ಘಟನೆ ಬಿಹಾರದ ಗುಸರಾಯ್‌ನ ಬರೌನಿ ಜಂಕ್ಷನ್‌ನಲ್ಲಿ ಶನಿವಾರ ನಡೆದಿದೆ. ಮೃತನನ್ನು ಅಮರ್ ಕುಮಾರ್ ರಾವ್ ಎಂದು ಗುರುತಿಸಲಾಗಿದೆ. ಈತ ಸೊನಾಪುರ ರೈಲ್ವೆ ವಲಯ ವ್ಯಾಪ್ತಿಯ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಲಕ್ನೋ-ಬರೌನಿ ಎಕ್ಸ್‌ಪ್ರೆಸ್ (ಸಂಖ್ಯೆ: 15204) ಲಕ್ನೋ ಜಂಕ್ಷನ್‌ನಿಂದ ಆಗಮಿಸುತ್ತಿದ್ದಂತೆ ಬರೌನಿ ಜಂಕ್ಷನ್‌ನ 5 ನೇ ಪ್ಲಾಟ್‌ಫಾರ್ಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾವ್ ಸಾವನ್ನಪ್ಪಿದ್ದಾರೆ. ರೈಲಿನ ಬೋಗಿ ಜೋಡಿಸುವಾಗ ರೈಲಿನ ಇಂಜಿನ್ ಅನಿರೀಕ್ಷಿತವಾಗಿ ಹಿಮ್ಮುಖವಾಗಿ ಚಲಿಸಿದ್ದು, ಬೋಗಿಗಳ ನಡುವೆ ಅವರು ಸಿಲುಕಿ ನಜ್ಜುಗುಜ್ಜಾಗಿ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.

Mr Rao was crushed by the moving engine and died on the spot.
Watch | ಪಾಕಿಸ್ತಾನ: ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಪ್ರಬಲ ಸ್ಫೋಟ; 24 ಸಾವು, 46 ಮಂದಿಗೆ ಗಾಯ

ಈ ಭಯಾನಕ ಘಟನೆಯನ್ನು ನೋಡಿದ ಪ್ರಯಾಣಿಕರು ಕೂಗುತ್ತಿದ್ದಂತೆಯೇ, ರೈಲು ಚಾಲಕ ರೈಲಿನಿಂದ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಈ ಅಪಘಾತದ ಭಯಾನಕ ದೃಶ್ಯಗಳನ್ನು ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಎರಡು ಬೋಗಿಗಳ ನಡುವೆ ರಾವ್ ಸಿಲುಕಿರುವುದು ಕಂಡುಬಂದಿದೆ. ಈ ಸಂಬಂಧ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com