ರಾಮಗಢ: ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಭಾನುವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದು, ಅವರನ್ನು 'ನಾಚಿಕೆಯಿಲ್ಲದವರು' ಎಂದು ಕರೆದಿದ್ದಾರೆ ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮುಸ್ಲಿಮರಿಗೆ "ಬೆನ್ನು ಚೂರಿ ಹಾಕುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ನಾಲ್ಕು ವಿಧಾನಸಭಾ ಸ್ಥಾನಗಳ ಉಪ ಚುನಾವಣೆ ಪ್ರಚಾರದ ವೇಳೆ ಅಲ್ಪಸಂಖ್ಯಾತ ಸಮುದಾಯ ತಲುಪಲು ನಿತೀಶ್ ಪ್ರಯತ್ನ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, ಹೌದು, ನಿಜಕ್ಕೂ ನಿತೀಶ್ ಕುಮಾರ್ ಮುಸ್ಲಿಮರ ಬೆನ್ನಿಗೆ ಚೂರಿ ಹಾಕುವ ಸಾಕಷ್ಟು ಕೆಲಸ ಮಾಡಿದ್ದಾರೆ. ಮುಸ್ಲಿಂರ ಬೆಂಬಲದೊಂದಿಗೆ 2015ರಲ್ಲಿ ಸರ್ಕಾರ ರಚಿಸಿದ್ದ ನಿತೀಶ್, ಎರಡು ವರ್ಷಗಳ ನಂತರ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಚಾರ ಎಂದರು.
ಪ್ರಶಾಂತ್ ಕಿಶೋರ್ ಒಂದು ಕಾಲದಲ್ಲಿ ನಿತೀಶ್ ಗೆ ಆಪ್ತರಾಗಿದ್ದರು. ಸಿಎಎ ವಿಚಾರದಲ್ಲಿ ನಿತೀಶ್ ಜೊತೆಗೆ ಭಿನ್ನಾಭಿಪ್ರಾಯದ ನಂತರ ಜೆಡಿಯು ಪಕ್ಷದಿಂದ ಹೊರಹಾಕಲಾಗಿತ್ತು. ಬಿಹಾರ ಸಿಎಂ "ಮುಸ್ಲಿಮರನ್ನು ಅನರ್ಹಗೊಳಿಸುವ ಬೆದರಿಕೆಯ ಕಾನೂನನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಿತೀಶ್ ಕುಮಾರ್ ಅವರು ಒಂದೆರಡು ವರ್ಷಗಳ ಹಿಂದೆ ಮಹಾಘಟಬಂಧನ್‌ಗೆ ಹಿಂತಿರುಗಿದಾಗ ಮುಸ್ಲಿಮರು ಮತ್ತೆ ಅವರನ್ನು ಬೆಂಬಲಿಸಿದ್ದರು. ಈಗ ಅವರ ಪಕ್ಷವು ಕೇಂದ್ರದ ಸರ್ಕಾರದಲ್ಲಿ ಪಾಲುದಾರರಾಗಿದ್ದು, ಅವರ ನಾಯಕರು ಕೇಂದ್ರದಲ್ಲಿ ಸಚಿವರಾಗಿದ್ದು, ವಿವಾದಾತ್ಮಕ ವಕ್ಫ್ ಮಸೂದೆಯನ್ನು ತರಲಾಗಿದೆ. ನಿತೀಶ್ ಕುಮಾರ್ ನಾಚಿಕೆಯಿಲ್ಲದ ವ್ಯಕ್ತಿ. ಅವರನ್ನು ಅಧಿಕಾರದಿಂದ ಹೊರಹಾಕಲು ಬಿಹಾರದ ಜನ ಬಯಸುತ್ತಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
Advertisement