ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು "ವೋಟ್ ಜಿಹಾದ್" ಹೇಳಿಕೆ ನೀಡಿ, ಬ್ರಿಟಿಷರ ವಿರುದ್ಧ ಹೋರಾಡುವ ಬದಲು ನಮ್ಮ ಸೈದ್ಧಾಂತಿಕ ಪೂರ್ವಜರು ಬ್ರಿಟಿಷರಿಗೆ "ಪ್ರೇಮ ಪತ್ರ" ಬರೆದಿದ್ದರು ಎಂಬ ಮಾತುಗಳಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
ನಿನ್ನೆ ನಡೆದ ಸಾರ್ವಜನಿಕ ಸಭೆಯಲ್ಲಿ ಒವೈಸಿ ಅವರು ಪ್ರಧಾನಿ ನರೇಂದ್ರ ಮೋದಿಯವರ “ಏಕ್ ಹೈ ಟು ಸೇಫ್ ಹೈ” ಘೋಷಣೆಯು ವೈವಿಧ್ಯತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಈ ಬಾರಿ ಮತದಾನ ನಡೆಯಲಿರುವ ಮಹಾರಾಷ್ಟ್ರದಲ್ಲಿ "ಮತ ಜಿಹಾದ್" ಆರಂಭವಾಗಿದೆ ಎಂದು ಫಡ್ನವಿಸ್ ಶನಿವಾರ ಪ್ರತಿಪಾದಿಸಿದ್ದು, ಇದನ್ನು "ಧರ್ಮ ಯುದ್ಧ"ದ ಮತದಿಂದ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.
ದೇವೇಂದ್ರ ಫಡ್ನವೀಸ್ ಹೇಳಿಕೆಯನ್ನು ಟೀಕಿಸಿದ ಓವೈಸಿ, "ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದ್ದರು, ಈಗ ಫಡ್ನವಿಸ್ ಅವರು ಜಿಹಾದ್ ಬಗ್ಗೆ ನಮಗೆ ಕಲಿಸುತ್ತಿದ್ದಾರೆ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವಿಸ್ ಒಟ್ಟಾಗಿ ಕುಳಿತು ಚರ್ಚೆ ನಡೆಸಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದರು.
"ಧರ್ಮಯುದ್ಧ-ಜಿಹಾದ್" ಹೇಳಿಕೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಓವೈಸಿ ಹೇಳಿದ್ದಾರೆ.
"ಪ್ರಜಾಪ್ರಭುತ್ವದಲ್ಲಿ 'ವೋಟ್ ಜಿಹಾದ್ ಮತ್ತು ಧರ್ಮಯುದ್ಧ' ಎಲ್ಲಿಂದ ಬಂತು? ಶಾಸಕರನ್ನು ಖರೀದಿಸಿದ ನಿಮ್ಮನ್ನು ನಾವು ಕಳ್ಳ ಎಂದು ಕರೆಯಬೇಕೇ?" ಎಂದು ಪ್ರಶ್ನಿಸಿದರು.
ಫಡ್ನವಿಸ್ ಜಿಹಾದ್ ಬಗ್ಗೆ ಮಾತನಾಡುವಾಗ, ಅವರ ನಾಯಕ ಬ್ರಿಟಿಷರಿಗೆ "ಪ್ರೇಮ ಪತ್ರ" ಬರೆಯುತ್ತಿದ್ದರು, ಆದರೆ "ನಮ್ಮ ಸ್ವಾತಂತ್ರ್ಯ ಹೋರಾಟಗಾರರು ವಿದೇಶಿ ಆಡಳಿತಗಾರರೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ ಎಂದರು.
Advertisement