ರಾಜಸ್ಥಾನ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿಯಿಂದ ಚುನಾವಣಾ ಅಧಿಕಾರಿ ಮೇಲೆ ಹಲ್ಲೆ

ಕಾಂಗ್ರೆಸ್ ಬಂಡಾಯ ನಾಯಕ ನರೇಶ್ ಮೀನಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮಾಲ್ಪುರ ಉಪವಿಭಾಗಾಧಿಕಾರಿ ಅಮಿತ್ ಚೌಧರಿ ಅವರ ಕಾಲರ್ ಹಿಡಿದು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಚುನಾವಣಾ ಅಧಿಕಾರಿ ಮೇಲೆ ಹಲ್ಲೆ
ಚುನಾವಣಾ ಅಧಿಕಾರಿ ಮೇಲೆ ಹಲ್ಲೆ
Updated on

ಜೈಪುರ: ರಾಜಸ್ಥಾನದ ಡಿಯೋಲಿ-ಉನಿಯಾರಾ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಬುಧವಾರ ಏರಿಯಾ ಮ್ಯಾಜಿಸ್ಟ್ರೇಟ್ ಆಗಿ ಚುನಾವಣಾ ಕರ್ತವ್ಯದಲ್ಲಿದ್ದ ಉಪವಿಭಾಗಾಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯವರೆಗೆ ಶೇ.25ರಷ್ಟು ಮತದಾನವಾಗಿದೆ.

ಕಾಂಗ್ರೆಸ್ ಬಂಡಾಯ ನಾಯಕ ನರೇಶ್ ಮೀನಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮಾಲ್ಪುರ ಉಪವಿಭಾಗಾಧಿಕಾರಿ ಅಮಿತ್ ಚೌಧರಿ ಅವರ ಕಾಲರ್ ಹಿಡಿದು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚುನಾವಣಾ ಅಧಿಕಾರಿ ಮೇಲೆ ಹಲ್ಲೆ
ಜಾರ್ಖಂಡ್ ವಿಧಾನಸಭೆ ಚುನಾವಣೆ: ಇದೇನಿದು ಬಿಜೆಪಿ ಎಬ್ಬಿಸಿರುವ ರೋಟಿ-ಬೇಟಿ-ಮಾಟಿ ಕೂಗು?

ಸಾಮ್ರಾವತಾ ಗ್ರಾಮದ ನಿವಾಸಿಗಳು ಉಪಚುನಾವಣೆ ಬಹಿಷ್ಕಾರಿಸುವುದಾಗಿ ಘೋಷಿಸಿದ್ದರು. ಗ್ರಾಮಸ್ಥರಿಗೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಬೆಂಬಲ ವ್ಯಕ್ತಪಡಿಸಿದರು.

ಆದರೆ ಉಪಚುನಾವಣೆಯ ಏರಿಯಾ ಮ್ಯಾಜಿಸ್ಟ್ರೇಟ್ ಚೌಧರಿ ಅವರು ಮತ ಚಲಾಯಿಸುವಂತೆ ಜನರನ್ನು ಮನವೊಲಿಸಲು ಗ್ರಾಮಕ್ಕೆ ಹೋದಾಗ, ಪಕ್ಷೇತರ ಅಭ್ಯರ್ಥಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಟೋಂಕ್ ಕಲೆಕ್ಟರ್ ಸೌಮ್ಯ ಝಾ ಅವರು ತಿಳಿಸಿದ್ದಾರೆ.

"ಈ ಗ್ರಾಮವು ಪ್ರಸ್ತುತ ನಗರ ಕೋಟೆ ತಹಸಿಲ್ ಅಡಿಯಲ್ಲಿ ಬರುತ್ತದೆ. ತಮ್ಮ ಗ್ರಾಮವನ್ನು ಸಮೀಪದ ಉಣಿಯಾರ ತಹಸಿಲ್ ಅಡಿಯಲ್ಲಿ ತರಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com