ಆಮ್ ಆದ್ಮಿ ಪಕ್ಷದ ಮಹೇಶ್ ಕುಮಾರ್ ಖಿಂಚಿ ದೆಹಲಿಯ ನೂತನ ಮೇಯರ್

ಚುನಾವಣೆಯಲ್ಲಿ ಒಟ್ಟು 265 ಮತಗಳು ಚಲಾವಣೆಯಾಗಿವೆ. ಅದರಲ್ಲಿ ಎರಡನ್ನು "ಅಸಿಂಧು" ಎಂದು ಘೋಷಿಸಲಾಗಿದೆ. "ಮಾನ್ಯ" ಮತಗಳಲ್ಲಿ, ಎಎಪಿ ಅಭ್ಯರ್ಥಿ 133 ಮತಗಳನ್ನು ಗಳಿಸಿದ್ದು ಇದು ಬಿಜೆಪಿ ಅಭ್ಯರ್ಥಿಗಿಂತ ಕೇವಲ ಮೂರು ಹೆಚ್ಚಿನ ಮತಗಳಾಗಿವೆ.
AAP Mahesh Kumar Khinchi
ಮಹೇಶ್ ಕುಮಾರ್ ಖಿಂಚಿ (ಸಂಗ್ರಹ ಚಿತ್ರ)online desk
Updated on

ನವದೆಹಲಿ: ದೆಹಲಿ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಮಹೇಶ್ ಕುಮಾರ್ ಖಿಂಚಿ ಗೆಲುವು ಸಾಧಿಸಿದ್ದಾರೆ. ದೀರ್ಘ ವಿಳಂಬದ ಚುನಾವಣೆಗೆ ಗುರುವಾರದಂದು ಮತದಾನ ನಡೆಯಿತು.

ಕರೋಲ್ ಬಾಗ್‌ನ ದೇವ್ ನಗರ ವಾರ್ಡ್‌ನ ಎಎಪಿ ಕೌನ್ಸಿಲರ್ ಖಿಂಚಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಿಶನ್ ಲಾಲ್ (ಶಕುರ್‌ಪುರ ವಾರ್ಡ್) ಅವರನ್ನು ಮಣಿಸಿದ್ದಾರೆ.

ಚುನಾವಣೆಯಲ್ಲಿ ಒಟ್ಟು 265 ಮತಗಳು ಚಲಾವಣೆಯಾಗಿವೆ. ಅದರಲ್ಲಿ ಎರಡನ್ನು "ಅಸಿಂಧು" ಎಂದು ಘೋಷಿಸಲಾಗಿದೆ. "ಮಾನ್ಯ" ಮತಗಳಲ್ಲಿ, ಎಎಪಿ ಅಭ್ಯರ್ಥಿ 133 ಮತಗಳನ್ನು ಗಳಿಸಿದ್ದು ಇದು ಬಿಜೆಪಿ ಅಭ್ಯರ್ಥಿಗಿಂತ ಕೇವಲ ಮೂರು ಹೆಚ್ಚಿನ ಮತಗಳಾಗಿವೆ.

ಏತನ್ಮಧ್ಯೆ, ಮೇಯರ್ ಮುಂದಿನ ವರ್ಷ ಏಪ್ರಿಲ್ ವರೆಗೆ ಮಾತ್ರ ಹುದ್ದೆಯಲ್ಲಿರುವುದರಿಂದ ಕಾಂಗ್ರೆಸ್ ಸದನದಿಂದ ಹೊರನಡೆದಿದೆ. ಆದಾಗ್ಯೂ, ಎಂಟು ಕಾಂಗ್ರೆಸ್ ಕೌನ್ಸಿಲರ್‌ಗಳಲ್ಲಿ ಒಬ್ಬರು ಎಎಪಿಗೆ ಮತ ಹಾಕಲು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ರಾಜೀನಾಮೆ ನೀಡಿದ ಕಾಂಗ್ರೆಸ್ ಸದಸ್ಯೆ ಸಬಿಲಾ ಬೇಗಂ, ಈ ಹಿಂದೆ 2022ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಪಕ್ಷಾಂತರಗೊಂಡಿದ್ದು, ಹಳೆಯ ಪಕ್ಷಕ್ಕೆ ಮರಳಿದ್ದರು.

ಹೊಸ ಮೇಯರ್‌ಗೆ ಇಷ್ಟು ಕಡಿಮೆ ಅವಧಿ ಏಕೆ?

MCD ನಿಯಮಗಳ ಪ್ರಕಾರ, ಮೇಯರ್ ಚುನಾವಣೆಗಳನ್ನು ಪ್ರತಿ ವರ್ಷ ಏಪ್ರಿಲ್‌ನಲ್ಲಿ ಐದು ವರ್ಷಗಳ ಅವಧಿಗೆ ನಡೆಯಲಿದೆ. ಸರದಿ ಆಧಾರದ ಮೇಲೆ ತಲಾ ಒಂದೊಂದು ವರ್ಷದ ಅವಧಿಯನ್ನು ಒಳಗೊಂಡಿರುತ್ತದೆ.

ಮೊದಲ ವರ್ಷದಲ್ಲಿ, ಈ ಹುದ್ದೆ ಮಹಿಳೆಗೆ ಮೀಸಲಾಗಿದ್ದರೆ, ಎರಡನೇ ವರ್ಷದಲ್ಲಿ, "ಮುಕ್ತ" ವರ್ಗದಿಂದ ಅಭ್ಯರ್ಥಿಯನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಮೂರನೇ ವರ್ಷ ಮೀಸಲು ವರ್ಗದ ಅಭ್ಯರ್ಥಿಗೆ ಮತ್ತು ಅಂತಿಮ ಎರಡು ವರ್ಷಗಳು "ಮುಕ್ತ" ವರ್ಗಕ್ಕೆ ಮೇಯರ್ ಹುದ್ದೆಯನ್ನು ನೀಡಲಾಗುತ್ತದೆ.

2022 ರ ಡಿಸೆಂಬರ್‌ನಲ್ಲಿ ಬಿಜೆಪಿಯ 15 ವರ್ಷಗಳ ಎಂಸಿಡಿ ಅವಧಿಯನ್ನು ಎಎಪಿ ಕೊನೆಗೊಳಿಸಿದ ನಂತರ ಇದು ಮೂರನೇ ಮೇಯರ್ ಚುನಾವಣೆಯಾಗಿರುವುದರಿಂದ, ದಲಿತರಾದ ಖಿಂಚಿ ಅವರನ್ನು ಎಎಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು.

ಆದಾಗ್ಯೂ, ಎಎಪಿ ಮತ್ತು ಬಿಜೆಪಿ ನಡುವಿನ ನಿರಂತರ ಸಂಘರ್ಷದಿಂದಾಗಿ ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಚುನಾವಣೆಗಳನ್ನು ನಿಗದಿತ ಸಮಯಕ್ಕೆ ನಡೆಸಲು ಸಾಧ್ಯವಾಗದ ಕಾರಣ ಅವರ ಅವಧಿಯು ಏಪ್ರಿಲ್ 2025 ರಲ್ಲಿ ಮುಕ್ತಾಯಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com