ದೆಹಲಿ: ವಾಯು ಗುಣಮಟ್ಟ ತೀವ್ರ ಕುಸಿತ, GRAP-III ನಿರ್ಬಂಧ, ಪ್ರಮುಖ ಮಾಲಿನ್ಯ ವಿರೋಧಿ ಕ್ರಮ ಜಾರಿ

ನಿರ್ಮಾಣ ಚಟುವಟಿಕೆಗಳ ನಿಷೇಧ ಮತ್ತು BS-III ಪೆಟ್ರೋಲ್ ಮತ್ತು BS-IV ಡೀಸೆಲ್ ವಾಹನಗಳ ಬಳಕೆಗೆ ನಿರ್ಬಂಧಿಸಲಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ನಿರ್ಬಂಧಗಳು ಜಾರಿಗೆ ಬರಲಿವೆ.
Delhi air pollution
ದೆಹಲಿಯ ವಾಯುಮಾಲಿನ್ಯonline desk
Updated on

ದೆಹಲಿ: ದೆಹಲಿಯ ಗಾಳಿಯ ಗುಣಮಟ್ಟ ಸತತ ಎರಡನೇ ದಿನವೂ "ತೀವ್ರ" ಕುಸಿತ ದಾಖಲಾಗಿದ್ದು, ಕೇಂದ್ರ ಮಾಲಿನ್ಯ ನಿಗಾ ಸಂಸ್ಥೆ ಮೂರನೇ ಹಂತದ GRAP ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಿದೆ.

ನಿರ್ಮಾಣ ಚಟುವಟಿಕೆಗಳ ನಿಷೇಧ ಮತ್ತು BS-III ಪೆಟ್ರೋಲ್ ಮತ್ತು BS-IV ಡೀಸೆಲ್ ವಾಹನಗಳ ಬಳಕೆಗೆ ನಿರ್ಬಂಧಿಸಲಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ನಿರ್ಬಂಧಗಳು ಜಾರಿಗೆ ಬರಲಿವೆ.

ಮಾಲಿನ್ಯದ ಅಪಾಯಕಾರಿ ಮಟ್ಟಗಳ ಕಾರಣ, ಮುಂದಿನ ಆದೇಶದವರೆಗೆ ಪ್ರಾಥಮಿಕ ಶಾಲೆಗಳಿಗೆ ದೈಹಿಕ ತರಗತಿಗಳನ್ನು ನಡೆಸಲಾಗುವುದಿಲ್ಲ, ಆದರೆ ಆನ್‌ಲೈನ್ ತರಗತಿಗಳನ್ನು ಮುಂದುವರಿಸಬಹುದು ಎಂದು ದೆಹಲಿ ಸರ್ಕಾರ ಘೋಷಿಸಿದೆ.

ನಗರದಲ್ಲಿ ಕಳೆದ 24-ಗಂಟೆಗಳ ವಾಯು ಗುಣಮಟ್ಟ ಸೂಚ್ಯಂಕವು (AQI), ಪ್ರತಿದಿನ ಸಂಜೆ 4 ಗಂಟೆಗೆ ದಾಖಲಾಗಿದ್ದು, ಹಿಂದಿನ ದಿನ 418 ರಿಂದ 424 ರಷ್ಟಿತ್ತು.

Delhi air pollution
ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ: ಕೇಂದ್ರ ಸರ್ಕಾರ ಕಠಿಣ ಕ್ರಮ; ತ್ಯಾಜ್ಯ ಸುಡುವ ರೈತರಿಗೆ ದುಪ್ಪಟ್ಟು ದಂಡ!

ದೆಹಲಿಯ 39 ಮೇಲ್ವಿಚಾರಣಾ ಕೇಂದ್ರಗಳಲ್ಲಿ, ಗಾಳಿಯ ಗುಣಮಟ್ಟ 27 "ತೀವ್ರ" ವಿಭಾಗದಲ್ಲಿ ವರದಿಯಾಗಿದೆ. ಈ ಪ್ರದೇಶಗಳ ಪೈಕಿ ಆನಂದ್ ವಿಹಾರ್, ಅಶೋಕ್ ವಿಹಾರ್, ಅಯಾ ನಗರ, ಬವಾನಾ, ದ್ವಾರಕಾ ಸೆಕ್ಟರ್ 8, IGI ವಿಮಾನ ನಿಲ್ದಾಣ, ITO, ಜಹಾಂಗೀರ್‌ಪುರಿ, ಮಂದಿರ್ ಮಾರ್ಗ್, ಮುಂಡ್ಕಾ, ನಜಾಫ್‌ಗಢ್, ನರೇಲಾ, ನೆಹರು ನಗರ, ಉತ್ತರ ಕ್ಯಾಂಪಸ್, ಪಟಪರ್‌ಗಂಜ್ ಮತ್ತು ಪಂಜಾಬಿ ಬಾಗ್ ಸೇರಿವೆ.

ನಿಯಮಗಳ ಉಲ್ಲಂಘನೆ ಮಾಡಿದರೆ 20,000 ರೂ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಮಾಲಿನ್ಯ ನಿಗಾ ಸಂಸ್ಥೆ ಎಚ್ಚರಿಕೆ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com