ಮಾಲೇಗಾಂವ್‌ ಸ್ಫೋಟ ಆಧಾರಿತ ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಸಮ್ಮತಿ!

ಈ ಪ್ರಕರಣದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ಬಿ.ಪಿ. ಕೊಲಾಬಾವಲ್ಲಾ ಮತ್ತು ಸೋಮಶೇಖರ್ ಸುಂದರೇಶನ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿತು.
Match Fixing  ಸಿನಿಮಾದ ಫೋಸ್ಟರ್
Match Fixing ಸಿನಿಮಾದ ಫೋಸ್ಟರ್Poster of the Match Fixing-The Nation at Stake
Updated on

ಮುಂಬೈ: 2008ರಲ್ಲಿ ಸಂಭವಿಸಿದ ಮಾಲೇಗಾಂವ್ ಸ್ಫೋಟ ಆಧಾರಿತ ಹಿಂದಿ ಸಿನಿಮಾ' Match Fixing-The Nation at Stake ಬಿಡುಗಡೆಗೆ ತಡೆಯಾಜ್ಞೆ ನೀಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಅದೊಂದು ಕಾಲ್ಪನಿಕ ಕೆಲಸದ ಚಿತ್ರವಾಗಿದೆ ಎಂದು ಹೇಳಿದೆ.

ಈ ಪ್ರಕರಣದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ಬಿ.ಪಿ. ಕೊಲಾಬಾವಲ್ಲಾ ಮತ್ತು ಸೋಮಶೇಖರ್ ಸುಂದರೇಶನ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿತು.

ವಿಚಾರಣೆ ವೇಳೆ ಚಿತ್ರ ಪರಿಣಾಮ ಮತ್ತು ಪ್ರಭಾವ ಬೀರಲಿದೆ ಎಂದು ಪುರೋಹಿತ್ ಆರೋಪಿಸಿದ್ದರು. ಚಿತ್ರವು ಕೇಸರಿ ಭಯೋತ್ಪಾದನೆಯನ್ನು ಬಿಂಬಿಸುತ್ತದೆ. ನವೆಂಬರ್ 15 ರಂದು ಬಿಡುಗಡೆಯಾಗಲಿರುವ ಚಿತ್ರವು ತನ್ನ ವರ್ಚಸ್ಸನ್ನು ಹಾಳು ಮಾಡಲಿದೆ ಎಂದು ಪುರೋಹಿತ್ ನ್ಯಾಯಾಲಯದಲ್ಲಿ ಹೇಳಿದರು.

Match Fixing-The Nation at Stake ಸಿನಿಮಾ ಈಗಾಗಲೇ ಮಾರುಕಟ್ಟೆಯಲ್ಲಿರುವ ಪುಸ್ತಕ ಆಧಾರಿತ ಕಾಲ್ಪನಿಕ ಕೆಲಸವಾಗಿದೆ ಎಂದು ಚಿತ್ರ ನಿರ್ಮಾಪಕರು ನ್ಯಾಯಾಲಯಕ್ಕೆ ತಿಳಿಸಿದರು. ಇದೊಂದು ಕಾಲ್ಪನಿಕ ಚಿತ್ರವಾಗಿದ್ದು, ಮೃತಪಟ್ಟಿರುವ ಅಥವಾ ಜೀವಂತವಾಗಿರುವ ಯಾವುದೇ ವ್ಯಕ್ತಿಗೆ ಸಂಬಂಧಿಸಿಲ್ಲ ಎಂದು ಚಿತ್ರದ ಆರಂಭದಲ್ಲಿಯೇ ಹೇಳಲಾಗಿದೆ ಎಂದು ನಿರ್ಮಾಪಕರು disclaimer ಸಲ್ಲಿಸಿದರು.

ವಾದ ವಿವಾದ ಆಲಿಸಿದ ನ್ಯಾಯಾಧೀಶರು, ಕೆಲವೊಂದು ಸಣ್ಣಪುಟ್ಟ ಬದಲಾವಣೆಗೆ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಕಾಲ್ಪನಿಕ ಆಧಾರಿತ ಚಿತ್ರವಾಗಿರುವುದರಿಂದ ವಿಚಾರಣೆಗೆ ಭಯ ಪಡಬೇಕಾದ ಅಗತ್ಯವಿಲ್ಲ. ದೂರುದಾರರ ಇಡೀ ಆತಂಕ ಸಂಪೂರ್ಣವಾಗಿ ತಪ್ಪು ತಿಳುವಳಿಕೆಯಿಂದ ಕೂಡಿದೆ ಎಂದು ಹೇಳಿ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

Match Fixing  ಸಿನಿಮಾದ ಫೋಸ್ಟರ್
2008 ಮಾಲೇಗಾಂವ್ ಸ್ಫೋಟ ಪ್ರಕರಣ: 9 ವರ್ಷಗಳ ಬಳಿಕ ಲೆ.ಕ. ಪುರೋಹಿತ್ ಜೈಲಿನಿಂದ ಬಿಡುಗಡೆ

ನವೆಂಬರ್ 20 ರಂದು ಮಹಾರಾಷ್ಟ್ರ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗಾದರೂ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಪುರೋಹಿತ್ ಪರ ವಕೀಲರು ವಾದಿಸಿದರು. ಆದಾಗ್ಯೂ, ಚುನಾವಣೆಯೊಂದಿಗೆ ಸಿನಿಮಾ ಏನು ಸಂಬಂಧ ಹೊಂದಿದೆ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com