ನವದೆಹಲಿ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನ ಎರಡನೇ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ದೆಹಲಿಯಲ್ಲಿ ನಡೆಯಲಿದೆ.
ಚಿನ್ಮಯ ಮಿಷನ್‌ನ ಗ್ಲೋಬಲ್ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದಜಿ ಅವರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭಾರತೀಯ ಮುದ್ರಣ ಮಾಧ್ಯಮದ ಪ್ರಮುಖ ಸಂಸ್ಥೆ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥಾಪಕ ರಾಮನಾಥ್ ಗೋಯೆಂಕಾ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಬರಹಗಾರರನ್ನು ಗೌರವಿಸುವುದಕ್ಕಾಗಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಗೌರವಿಸುವುದಕ್ಕಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕಾಲ್ಪನಿಕವಲ್ಲದ ವಿಭಾಗದಲ್ಲಿ ಒಟ್ಟು ನಾಲ್ಕು ಪುಸ್ತಕಗಳು ಪ್ರಶಸ್ತಿ ಕಣದಲ್ಲಿವೆ - ಸೋಹಿನಿ ಚಟ್ಟೋಪಾಧ್ಯಾಯ ಅವರ ದಿ ಡೇ ಐ ಬಿಕಾಮ್ ಎ ರನ್ನರ್, ಸಾಂತಾ ಖುರೈ ಅವರ ಯೆಲ್ಲೋ ಸ್ಪ್ಯಾರೋ, ಎಚ್-ಪಾಪ್: ಕುನಾಲ್ ಪುರೋಹಿತ್ ಅವರ ದಿ ಸೀಕ್ರೆಟಿವ್ ವರ್ಲ್ಡ್ ಆಫ್ ಹಿಂದುತ್ವ ಪಾಪ್ ಸ್ಟಾರ್ಸ್ ಮತ್ತು ನೀರ್ಜಾ ಚೌಧರಿ ಅವರ ಹೌವ್ ಪ್ರೈಮಿನಿಸ್ಟರ್ ಡಿಸೈಡ್ಸ್.
ಕಾಲ್ಪನಿಕ ವಿಭಾಗದಲ್ಲಿ ಮೂರು ಸ್ಪರ್ಧಿಗಳಿದ್ದು, ಕಾನನ್ ಗಿಲ್ ಅವರ ಆಕ್ಟ್ಸ್ ಆಫ್ ಗಾಡ್, ಐಶ್ವರ್ಯಾ ಝಾ ಅವರ ದಿ ಸೆಂಟ್ ಆಫ್ ಫಾಲನ್ ಸ್ಟಾರ್ಸ್ ಮತ್ತು ಚೆತ್ನಾ ಮಾರೂ ಅವರ ವೆಸ್ಟರ್ನ್ ಲೇನ್.
Advertisement