ಗುಜರಾತ್: ಬೃಹತ್ ಕಾರ್ಯಾಚರಣೆ; 700 ಕೆಜಿ ಡ್ರಗ್ಸ್, 8 ಇರಾನಿಗರು NCB ವಶಕ್ಕೆ

ಕಾರ್ಯಾಚರಣೆ ವೇಳೆ ಸುಮಾರು 700 ಕೆಜಿಯಷ್ಟು ಮೆಥಾಂಫೆಟಮೈನ್‌ನ ಬೃಹತ್ ಸಾಗಾಣೆಯನ್ನು ಭಾರತೀಯ ಜಲಗಡಿಯಲ್ಲಿ ತಡೆಯಲಾಯಿತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಇರಾನಿಯನ್ನರು ಎಂದು ಹೇಳಿಕೊಳ್ಳುವ ಎಂಟು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
anti narcotics operation
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ
Updated on

ಅಹಮದಾಬಾದ್: ಮಾದಕ ದ್ರವ್ಯ ನಿಗ್ರಹ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ ಕರಾವಳಿಯ ಭಾರತೀಯ ಪ್ರಾದೇಶಿಕ ಜಲಪ್ರದೇಶದಿಂದ ಸುಮಾರು 700 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದು ಎಂಟು ಇರಾನ್ ಪ್ರಜೆಗಳನ್ನು ಬಂಧಿಸಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಹಿತಿ ನೀಡಿದ್ದು, ಗುಪ್ತಚರ ಮಾಹಿತಿಯ ಆಧಾರದ ಮೇಲೆ 'ಸಾಗರ್ ಮಂಥನ್ - 4' ಎಂಬ ಹೆಸರಿನಡಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಇದು ಕಡಲ ಗಸ್ತು ಸ್ವತ್ತುಗಳನ್ನು ಸಜ್ಜುಗೊಳಿಸುವ ಮೂಲಕ ನೌಕಾಪಡೆಯು ಹಡಗನ್ನು ಗುರುತಿಸಿ ವಶಕ್ಕೆ ಪಡೆದಿದೆ.

ಕಾರ್ಯಾಚರಣೆ ವೇಳೆ ಸುಮಾರು 700 ಕೆಜಿಯಷ್ಟು ಮೆಥಾಂಫೆಟಮೈನ್‌ನ ಬೃಹತ್ ಸಾಗಾಣೆಯನ್ನು ಭಾರತೀಯ ಜಲಗಡಿಯಲ್ಲಿ ತಡೆಯಲಾಯಿತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಇರಾನಿಯನ್ನರು ಎಂದು ಹೇಳಿಕೊಳ್ಳುವ ಎಂಟು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು NCB ತಿಳಿಸಿದೆ.

ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿಯಾಗಿ ಕಾರ್ಯಾಚರಣೆ ನಡೆಸಿತ್ತು.

anti narcotics operation
ಗುಜರಾತ್‌ನಲ್ಲಿ 5000 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ: ಮೂವರು ಫಾರ್ಮಾ ಕಂಪನಿಗಳ ನಿರ್ದೇಶಕರು ಸೇರಿ ಐವರ ಬಂಧನ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕಾರ್ಯಾಚರಣೆಯು ದೂರದೃಷ್ಟಿ, ಸರ್ಕಾರದ ಬದ್ಧತೆ ಮತ್ತು ಅದನ್ನು ಸಾಧಿಸುವಲ್ಲಿ ನಮ್ಮ ಏಜೆನ್ಸಿಗಳ ನಡುವಿನ ತಡೆರಹಿತ ಸಮನ್ವಯಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com