ಜೀವಮಾನದ ಸಾಧನೆಗಾಗಿ ರಸ್ಕಿನ್ ಬಾಂಡ್ ಗೆ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ

90 ವರ್ಷ ವಯಸ್ಸಿನ ಬಾಂಡ್, ತಮ್ಮ 17 ನೇ ವಯಸ್ಸಿನಲ್ಲಿ ತಮ್ಮ ಮೊದಲ ಪುಸ್ತಕ ದಿ ರೂಮ್ ಆನ್ ದಿ ರೂಫ್ ನ್ನು ಬರೆದಿದ್ದರು. ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಪ್ರಬಂಧಗಳು ಸೇರಿದಂತೆ 500 ಕ್ಕೂ ಹೆಚ್ಚು ಶೀರ್ಷಿಕೆಗಳ ಮೂಲಕ ಮಕ್ಕಳಿಗೆ ಸಂತೋಷವನ್ನು ತಂದಿದ್ದಾರೆ.
Ruskin Bond and Neerja Chowdhury - two of the winners of the Ramnath Goenka Sahithya Samman
ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ರಸ್ಕಿನ್ ಬಾಂಡ್-ನೀರಜ್ ಚೌಧರಿ
Updated on

ನವದೆಹಲಿ: ನವದೆಹಲಿಯಲ್ಲಿ ಇಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಲೇಖಕ ರಸ್ಕಿನ್ ಬಾಂಡ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

90 ವರ್ಷ ವಯಸ್ಸಿನ ಬಾಂಡ್, ತಮ್ಮ 17 ನೇ ವಯಸ್ಸಿನಲ್ಲಿ ತಮ್ಮ ಮೊದಲ ಪುಸ್ತಕ ದಿ ರೂಮ್ ಆನ್ ದಿ ರೂಫ್ ನ್ನು ಬರೆದಿದ್ದರು. ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಪ್ರಬಂಧಗಳು ಸೇರಿದಂತೆ 500 ಕ್ಕೂ ಹೆಚ್ಚು ಶೀರ್ಷಿಕೆಗಳ ಮೂಲಕ ಮಕ್ಕಳಿಗೆ ಸಂತೋಷವನ್ನು ತಂದಿದ್ದಾರೆ. ಅವರ ಹಲವಾರು ಕೃತಿಗಳು ಮೆಚ್ಚುಗೆ ಪಡೆದ ಚಲನಚಿತ್ರಗಳಾಗಿ ರೂಪಾಂತರಗೊಂಡಿವೆ.

ಬಾಂಡ್ ಮಸ್ಸೂರಿಯಿಂದ ವೀಡಿಯೊ ಸಂದೇಶವನ್ನು ಕಳುಹಿಸಿದ್ದು, "ಇದು ನಿಜವಾಗಿಯೂ ನನಗೆ ಸಂತೋಷದ ಕ್ಷಣವಾಗಿದೆ. ಇಲ್ಲಿ ನಾನು ನನ್ನ 91 ನೇ ವರ್ಷದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ ಮತ್ತು ನಾನು ನಿಮ್ಮೊಂದಿಗೆ ಇರಬೇಕೆಂದು ನಾನು ಬಯಸುತ್ತೇನೆ. ನಾನು ನನ್ನ ಪ್ರೀತಿಯ ಮೊಮ್ಮಗಳು ಸೃಷ್ಟಿಯನ್ನು ಕಳುಹಿಸುತ್ತಿದ್ದೇನೆ ಉಲ್ಲೇಖ ಮತ್ತು ಗೌರವಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಐಶ್ವರ್ಯಾ ಝಾ ದಿ ಸೆಂಟ್ ಆಫ್ ಫಾಲನ್ ಸ್ಟಾರ್ಸ್ ಗಾಗಿ ಫಿಕ್ಷನ್‌ಗಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಗೆದ್ದಿದ್ದಾರೆ.

ಹಿರಿಯ ಪತ್ರಕರ್ತೆ ನೀರ್ಜಾ ಚೌಧರಿ ಅವರು How Prime Ministers Decide ಎಂಬ ಕಾಲ್ಪನಿಕವಲ್ಲದ ಕೃತಿಗಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜವಾಹರಲಾಲ್ ನೆಹರು ನಂತರ ಮತ್ತು ನರೇಂದ್ರ ಮೋದಿಯ ಮೊದಲು ಆರು ಭಾರತೀಯ ಪ್ರಧಾನ ಮಂತ್ರಿಗಳು ದೇಶವನ್ನು ರೂಪಿಸಿದ ಪ್ರಮುಖ ನಿರ್ಧಾರಗಳನ್ನು ಹೇಗೆ ಮಾಡಿದರು ಎಂಬುದನ್ನು ಚೌಧರಿ ಅವರ ಕೃತಿ ತೋರಿಸುತ್ತದೆ.

Ruskin Bond and Neerja Chowdhury - two of the winners of the Ramnath Goenka Sahithya Samman
ಸ್ವಚ್ಛ ಭಾರತ ಯೋಜನೆ ನಂತರ ಭಾರತ ಹಿಂದೆಂದಿಗಿಂತಲೂ ಸ್ವಚ್ಛ: ಬ್ರಿಟಿಷ್ ಲೇಖಕ ರಸ್ಕಿನ್ ಬಾಂಡ್

"ರಾಮನಾಥ್ ಗೋಯೆಂಕಾ ಅವರು ಟ್ರೆಂಡ್ ಸೆಟ್ಟರ್ ಆಗಿದ್ದರು ಎಂದು ನೀರ್ಜಾ ಚೌಧರಿ ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಹೇಳಿದರು, ಸಾಹಿತ್ಯ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದರು. ಚಿನ್ಮಯ ಮಿಷನ್‌ನ ಗ್ಲೋಬಲ್ ಹೆಡ್ ಸ್ವಾಮಿ ಸ್ವರೂಪಾನಂದಜಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com