ಯೋಗಿ ಆದಿತ್ಯನಾಥ್ ಭೇಟಿಯಾದ The Sabarmati Report ನಟ ವಿಕ್ರಾಂತ್ ಮಾಸ್ಸೆ

ವಿಕ್ರಾಂತ್ ಮಾಸ್ಸೆ ಅವರ ಚಲನಚಿತ್ರ ದಿ ಸಬರಮತಿ ವರದಿ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮುಖ್ಯಮಂತ್ರಿಯವರ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇಬ್ಬರ ಫೋಟೋವನ್ನೂ ಶೇರ್ ಮಾಡಲಾಗಿದೆ.
 'The Sabarmati Report' actor Vikrant Massey meets Yogi
ಯೋಗಿ ಆದಿತ್ಯನಾಥ್- The Sabarmati Report ನಟ ವಿಕ್ರಾಂತ್ ಮಾಸ್ಸೆ ಭೇಟಿ online desk
Updated on

ಲಖನೌ: ದಿ ಸಬರ್ ಮತಿ ರಿಪೋರ್ಟ್ (The Sabarmati Report) ಚಿತ್ರದ ನಟ ವಿಕ್ರಾಂತ್ ಮಾಸ್ಸೆ ಇಂದು ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು.

ಸ್ವತಃ ಸಿಎಂ ಯೋಗಿ ಆದಿತ್ಯನಾಥ್ ಟ್ವಿಟರ್ ನಲ್ಲಿ ಮಾಸ್ಸೆ ಅವರನ್ನು ಭೇಟಿ ಮಾಡಿರುವುದರ ಬಗ್ಗೆ ಟ್ವಿಟರ್ ನಲ್ಲಿ ಬರೆದಿದ್ದಾರೆ.

ವಿಕ್ರಾಂತ್ ಮಾಸ್ಸೆ ಅವರ ಚಲನಚಿತ್ರ ದಿ ಸಬರಮತಿ ವರದಿ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮುಖ್ಯಮಂತ್ರಿಯವರ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇಬ್ಬರ ಫೋಟೋವನ್ನೂ ಶೇರ್ ಮಾಡಲಾಗಿದೆ.

The Sabarmati Report ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಚ್ಚುಗೆಯನ್ನು ಪಡೆದಿದೆ, ಚಿತ್ರ ಘಟನೆಯ ಹಿಂದಿನ "ಸತ್ಯವನ್ನು ಬಹಿರಂಗಪಡಿಸಿದೆ" ಎಂದು ಶ್ಲಾಘಿಸಿದ್ದರು. "ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ" ಎಂದು ಮೋದಿ ಹೇಳಿದ್ದರು.

 'The Sabarmati Report' actor Vikrant Massey meets Yogi
ಸತ್ಯ ಹೊರಬರುತ್ತಿದೆ: The Sabarmati Report ಸಿನಿಮಾ ಹೊಗಳಿದ ಪ್ರಧಾನಿ ಮೋದಿ

ಕೇಂದ್ರ ಗೃಹ ಸಚಿವ ಅಮಿತ್ ಶಾ, X ನಲ್ಲಿ ಚಲನಚಿತ್ರವನ್ನು ಶ್ಲಾಘಿಸಿ ಬರೆದಿದ್ದರು. "ಸಬರಮತಿ ವರದಿಯು ಅಪ್ರತಿಮ ಧೈರ್ಯದಿಂದ ನಿರ್ದಿಷ್ಟ ವ್ಯವಸ್ಥೆಯನ್ನು ವಿರೋಧಿಸುತ್ತದೆ ಮತ್ತು ಪ್ರಸಂಗದ ಹಿಂದಿನ ಸತ್ಯವನ್ನು ಬೆಳಕಿಗೆ ಒಡ್ಡುತ್ತದೆ. ಶಕ್ತಿಯುತ ವ್ಯವಸ್ಥೆಯು ಎಷ್ಟೇ ಪ್ರಯತ್ನಿಸಿದರೂ ಅದು ಸತ್ಯವನ್ನು ಶಾಶ್ವತವಾಗಿ ಕತ್ತಲೆಯಲ್ಲಿ ಮರೆಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com