ಅತಿಯಾದ ಚಳಿ ನಡುವೆ ದೆಹಲಿ ಗಾಳಿ ವಿಷಪೂರಿತ: ವಾಯು ಗುಣಮಟ್ಟ ಸೂಚ್ಯಂಕ ಹೊಸ ದಾಖಲೆ

ದಿನವಿಡೀ ದಟ್ಟವಾದ ಮಂಜು ಇದ್ದು, ಆರ್ದ್ರತೆಯ ಮಟ್ಟವು ಬೆಳಗ್ಗೆ ಶೇಕಡಾ 84ರಷ್ಟಿತ್ತು. ದಿನದ ಗರಿಷ್ಠ ತಾಪಮಾನವು 25 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಗೊಳ್ಳುವ ನಿರೀಕ್ಷೆಯಿದೆ.
A view of India Gate shrouded by dense smog at Kartavya Path in New Delhi on Tuesday.
ದೆಹಲಿಯ ಇಂಡಿಯಾ ಗೇಟ್ ಬಳಿ ದೃಶ್ಯ
Updated on

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಬುಧವಾರ ವಿಷಕಾರಿ ಗಾಳಿಯ ಹೊದಿಕೆ ದಟ್ಟವಾಗಿ ಆವರಿಸಿ ಮಂಜು ಕವಿಯಿತು. "ತೀವ್ರ" ವಿಭಾಗದಲ್ಲಿ 426 ರ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ದಾಖಲಿಸಿದ್ದು, ನಗರದಲ್ಲಿ ಈ ಋತುಮಾನದಲ್ಲಿ ಅತಿ ತಂಪಾದ ಹವಾಮಾನವನ್ನು ಹೊಂದಿತ್ತು.

ನಿನ್ನೆ ಮಂಗಳವಾರ ರಾತ್ರಿ ನಗರದ ಕನಿಷ್ಠ ತಾಪಮಾನವು 11.1 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ದಟ್ಟವಾದ ಮಂಜಿನ ಜೊತೆಗೆ ತಾಪಮಾನದಲ್ಲಿ ಕುಸಿತ ಕಂಡುಬಂತು. ಇಂದು ಬೆಳಗ್ಗೆ 8.30 ರ ಹೊತ್ತಿಗೆ ಗೋಚರತೆ 500 ಮೀಟರ್‌ಗೆ ಇಳಿಕೆಯಾಗಿದೆ.

ದಿನವಿಡೀ ದಟ್ಟವಾದ ಮಂಜು ಇದ್ದು, ಆರ್ದ್ರತೆಯ ಮಟ್ಟವು ಬೆಳಗ್ಗೆ ಶೇಕಡಾ 84ರಷ್ಟಿತ್ತು. ದಿನದ ಗರಿಷ್ಠ ತಾಪಮಾನವು 25 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಗೊಳ್ಳುವ ನಿರೀಕ್ಷೆಯಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ ದೆಹಲಿಯಲ್ಲಿ ಇಂದು ಬೆಳಗ್ಗೆ 9 ಗಂಟೆಗೆ AQI 426 ಇತ್ತು.

400 ಅಥವಾ ಹೆಚ್ಚಿನ AQI ನ್ನು "ತೀವ್ರ" ಎಂದು ವರ್ಗೀಕರಿಸಲಾಗಿದೆ, ಇದು ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತದೆ. ರಾಷ್ಟ್ರ ರಾಜಧಾನಿಯ 38 ಮೇಲ್ವಿಚಾರಣಾ ಕೇಂದ್ರಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಕೆಂಪು ವಲಯದಲ್ಲಿವೆ. ಲೋಧಿ ರೋಡ್ ನಿಲ್ದಾಣವು "ಅತ್ಯಂತ ಕಳಪೆ" ವಿಭಾಗದಲ್ಲಿ AQI ಕೆಂಪು ಭಾಗದಲ್ಲಿಲ್ಲ. ದೆಹಲಿಯ ಗಾಳಿಯ ಗುಣಮಟ್ಟವು ಭಾನುವಾರದಂದು "ತೀವ್ರ ಪ್ಲಸ್" ವರ್ಗವನ್ನು ಮೊದಲ ಬಾರಿಗೆ ಉಲ್ಲಂಘಿಸಿದೆ, ಇದು ಮೊನ್ನೆ ಸೋಮವಾರ ಬೆಳಗ್ಗೆ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ಹಂತ IV ನಿರ್ಬಂಧಗಳ ಅನುಷ್ಠಾನಕ್ಕೆ ಕಾರಣವಾಯಿತು.

A view of India Gate shrouded by dense smog at Kartavya Path in New Delhi on Tuesday.
ದೆಹಲಿ ವಾಯು ಗುಣಮಟ್ಟ ತೀವ್ರ ಕಳಪೆ: ವರ್ಕ್ ಫ್ರಮ್ ಹೋಮ್ ಗೆ ಕೇಂದ್ರ ಸರ್ಕಾರದ ಸಿಬ್ಬಂದಿ ಆಗ್ರಹ

ವಾಯು ಗುಣಮಟ್ಟ ನಿರ್ವಹಣಾ ಆಯೋಗವು (CAQM) BS-VI ವಾಹನಗಳನ್ನು ಹೊರತುಪಡಿಸಿ ದೆಹಲಿ ಮತ್ತು ಎನ್ ಸಿಆರ್ ಜಿಲ್ಲೆಗಳ ಗಡಿಯಲ್ಲಿ ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ನಾಲ್ಕು ಚಕ್ರಗಳ ಡೀಸೆಲ್ ಲೈಟ್ ಮೋಟಾರು ವಾಹನಗಳ (LMVs) ಕಾರ್ಯಾಚರಣೆಯ ಮೇಲೆ ನಿಷೇಧ ಸೇರಿದಂತೆ ಹೆಚ್ಚುವರಿ ನಿರ್ಬಂಧಗಳನ್ನು ಜಾರಿಗೊಳಿಸಿದೆ.

ಡೀಸೆಲ್ ಚಾಲಿತ ಮಧ್ಯಮ ಮತ್ತು ಭಾರೀ ಸರಕುಗಳ ವಾಹನಗಳು ದೆಹಲಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ, ಅಗತ್ಯ ಸರಕುಗಳನ್ನು ಸಾಗಿಸುವುದನ್ನು ಹೊರತುಪಡಿಸಿ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಟ್ರಕ್‌ಗಳನ್ನು ಮಾತ್ರ ಅನುಮತಿಸಲಾಗಿದೆ.

GRAP ತೀವ್ರತೆಯ ಆಧಾರದ ಮೇಲೆ ಗಾಳಿಯ ಗುಣಮಟ್ಟವನ್ನು ನಾಲ್ಕು ಹಂತಗಳಾಗಿ ವರ್ಗೀಕರಿಸುತ್ತದೆ: ಹಂತ 1 - "ಕಳಪೆ" (AQI 201-300), ಹಂತ 2 - "ಅತ್ಯಂತ ಕಳಪೆ" (AQI 301-400), ಹಂತ 3 - "ತೀವ್ರ" ( AQI 401-450), ಮತ್ತು ಹಂತ 4 - "ತೀವ್ರ ಪ್ಲಸ್" (AQI ಮೇಲಿನದು 450)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com