ಮಹಾರಾಷ್ಟ್ರ: ರಸಗೊಬ್ಬರ ಘಟಕದಲ್ಲಿ ಅನಿಲ ಸೋರಿಕೆ, ಮೂವರು ಸಾವು

ಜಿಲ್ಲೆಯ ಕಡೆಗಾಂವ್ ತಹಸಿಲ್‌ನ ಶಾಲ್ಗಾಂವ್ ಎಂಐಡಿಸಿಯಲ್ಲಿರುವ ಮ್ಯಾನ್ಮಾರ್ ಕೆಮಿಕಲ್ ಕಂಪನಿಯಲ್ಲಿ ಗುರುವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಸಾಂಗ್ಲಿ/ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ರಸಗೊಬ್ಬರ ಘಟಕದ ರಿಯಾಕ್ಟರ್‌ ಸ್ಫೋಟಗೊಂಡ ನಂತರ ಅನಿಲ ಸೋರಿಕೆಯಾದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಜಿಲ್ಲೆಯ ಕಡೆಗಾಂವ್ ತಹಸಿಲ್‌ನ ಶಾಲ್ಗಾಂವ್ ಎಂಐಡಿಸಿಯಲ್ಲಿರುವ ಮ್ಯಾನ್ಮಾರ್ ಕೆಮಿಕಲ್ ಕಂಪನಿಯಲ್ಲಿ ಗುರುವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ರಸಗೊಬ್ಬರ ಘಟಕದ ರಿಯಾಕ್ಟರ್ ಸ್ಫೋಟಗೊಂಡು ಅನಿಲ ಸೋರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಅನಿಲ ಸೋರಿಕೆಯಿಂದಾಗಿ ಘಟಕದಲ್ಲಿದ್ದ ಸುಮಾರು 12 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಮತ್ತು ಒಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಕಡೆಗಾಂವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಗ್ರಾಮ್ ಶೆವಾಲೆ ಅವರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕೊಡಗು: ನೋಂದಣಿಯಾಗದ ಹೋಮ್ ಸ್ಟೇ ನಲ್ಲಿ ಅನಿಲ ಸೋರಿಕೆ; ಯುವತಿ ಸಾವು

ಸೋರಿಕೆಯಾದ ಅನಿಲ ಅಮೋನಿಯಾ ಎಂದು ಶಂಕಿಸಲಾಗಿದೆ ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಘುಗೆ ಹೇಳಿದ್ದಾರೆ.

ಗಾಯಾಳುಗಳ ಪೈಕಿ ಏಳು ಮಂದಿಯನ್ನು ಕರಾದ್‌ನ ಸಹ್ಯಾದ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರು ಐಸಿಯುನಲ್ಲಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಸಾವನ್ನಪ್ಪಿದ ಇಬ್ಬರು ಮಹಿಳೆಯರನ್ನು ಸಾಂಗ್ಲಿ ಜಿಲ್ಲೆಯ ಯೆತ್‌ಗಾಂವ್‌ನ ಸುಚಿತಾ ಉತಾಲೆ(50) ಮತ್ತು ಸತಾರಾ ಜಿಲ್ಲೆಯ ಮಸೂರ್‌ನ ನೀಲಂ ರೆತ್ರೆಕರ್(26) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com