ಮಹಾರಾಷ್ಟ್ರ ಗೆದ್ದ ಮಹಾಯುತಿ, ಜಾರ್ಖಂಡ್ ಉಳಿಸಿಕೊಂಡ INDIA

ಮಹಾಯುತಿ ನೇತೃತ್ವದಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ ಸಹಭಾಗಿತ್ವವು ಪ್ರಬಲ ರಾಜ್ಯವಾದ ಮಹಾರಾಷ್ಟ್ರದ 288 ಸ್ಥಾನಗಳಲ್ಲಿ 218 ರಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತ ಮೈತ್ರಿಕೂಟದ ಪರ ಜನರ ಅಲೆಯನ್ನು ತೋರಿಸುತ್ತದೆ.
Shiv Sena workers celebrate as the early trends show the BJP-led Mahayuti is all set to win the Maharashtra elections
ಬಿಜೆಪಿ ನೇತೃತ್ವದ ಮಹಾಯುತಿ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲುವಿನ ಸೂಚನೆ ನೀಡುತ್ತಿದ್ದಂತೆ ಶಿವಸೇನೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಾರೆ.
Updated on

ನವದೆಹಲಿ: ಭಾರತೀಯ ಜನತಾ ಪಕ್ಷದ ನೇತೃತ್ವದ ಮಹಾಯುತಿ ಮೈತ್ರಿಯು ಮಹಾರಾಷ್ಟ್ರದಲ್ಲಿ ಗೆಲುವಿನ ನಗೆ ಬೀರಿದೆ. ಮಹಾ ವಿಕಾಸ್ ಅಘಾಡಿ ವಿರುದ್ಧ ಪ್ರಬಲ ಗೆಲುವು ಸಾಧಿಸಿದೆ, ಪ್ರತಿಪಕ್ಷ ಇಂಡಿಯಾ ಬಣವು ಜಾರ್ಖಂಡ್ ಗೆಲುವಿಗೆ ಸಿದ್ಧವಾಗಿದೆ ಎಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಟ್ರೆಂಡ್ ಗಳು ಸೂಚಿಸಿವೆ.

ಮಹಾಯುತಿ ನೇತೃತ್ವದಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ ಸಹಭಾಗಿತ್ವವು ಪ್ರಬಲ ರಾಜ್ಯವಾದ ಮಹಾರಾಷ್ಟ್ರದ 288 ಸ್ಥಾನಗಳಲ್ಲಿ 218 ರಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತ ಮೈತ್ರಿಕೂಟದ ಪರ ಜನರ ಅಲೆಯನ್ನು ತೋರಿಸುತ್ತದೆ. ಕಾಂಗ್ರೆಸ್, ಎನ್‌ಸಿಪಿ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಕಾಂಗ್ರೆಸ್ ಪಾಲುದಾರರಾದ ಎನ್ ಸಿಪಿ(ಎಸ್‌ಪಿ) ಮತ್ತು ಶಿವಸೇನೆ (ಯುಬಿಟಿ) ಕೇವಲ 50 ಸ್ಥಾನಗಳಲ್ಲಿ ಮುಂದಿದೆ.

81 ಸ್ಥಾನಗಳ ಜಾರ್ಖಂಡ್ ಅಸೆಂಬ್ಲಿಯಲ್ಲಿ, ಬಿಜೆಪಿ 26 ಸ್ಥಾನಗಳಲ್ಲಿ ಮುಂದಿದೆ, ಜೆಎಂಎಂ 30 ಸ್ಥಾನಗಳಲ್ಲಿ, ಕಾಂಗ್ರೆಸ್ 13, ಆರ್‌ಜೆಡಿ 5 ಮತ್ತು ಸಿಪಿಐ-ಎಂಎಲ್ ಒಂದರಲ್ಲಿ ವಿಪಕ್ಷಗಳ ಮೈತ್ರಿಗಿಂತ ಮುಂದಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಉಪನಾಯಕರಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಸಕೋಲಿ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ ಮತ್ತು ಶಿವಸೇನೆ (ಯುಬಿಟಿ) ನಾಯಕ ಮತ್ತು ಹಾಲಿ ಶಾಸಕ ಆದಿತ್ಯ ಠಾಕ್ರೆ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

Shiv Sena workers celebrate as the early trends show the BJP-led Mahayuti is all set to win the Maharashtra elections
ಅಜಿತ್ ಪವಾರ್ ಮಹಾರಾಷ್ಟ್ರ ಸಿಎಂ ಆಗಬೇಕು: ಪತ್ನಿ ಸುನೇತ್ರಾ ಪವಾರ್

ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 149 ವಿಧಾನಸಭಾ ಸ್ಥಾನಗಳಲ್ಲಿ, ಶಿವಸೇನೆ 81 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ 101 ಅಭ್ಯರ್ಥಿಗಳನ್ನು, ಶಿವಸೇನೆ (ಯುಬಿಟಿ) 95 ಮತ್ತು ಎನ್‌ಸಿಪಿ (ಎಸ್‌ಪಿ) 86 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಪೂರ್ವ ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ 30, ಕಾಂಗ್ರೆಸ್ 14, ಆರ್‌ಜೆಡಿ 5 ಮತ್ತು ಸಿಪಿಐ-ಎಂಎಲ್ ಒಂದರಲ್ಲಿ ಮುಂದಿದೆ. ಬಿಜೆಪಿ 24ರಲ್ಲಿ ಮುಂದಿದೆ. ಮುಖ್ಯಮಂತ್ರಿ ಸೊರೆನ್ ಅವರ ಬರ್ಹೈತ್ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ, ಎನ್‌ಡಿಎ ಮಿತ್ರಪಕ್ಷ ಎಜೆಎಸ್‌ಯು ಪಕ್ಷದ ಮುಖ್ಯಸ್ಥ ಸುದೇಶ್ ಮಹ್ತೋ ಸಿಲ್ಲಿಯಲ್ಲಿ ಜೆಎಂಎಂನ ಅಮಿತ್ ಕುಮಾರ್‌ಗಿಂತ ಹಿಂದೆ ಉಳಿದಿದ್ದಾರೆ.

ನಾಲಾದಿಂದ ಜೆಎಂಎಂನ ಸ್ಪೀಕರ್ ರವೀಂದ್ರ ನಾಥ್ ಮಹತೋ, ಮಹಾಗಾಮಾದಿಂದ ಕಾಂಗ್ರೆಸ್‌ನ ದೀಪಿಕಾ ಪಾಂಡೆ ಸಿಂಗ್, ಜಮ್ತಾರಾದಿಂದ ಸೀತಾ ಸೊರೆನ್ (ಸಿಎಂ ಹೇಮಂತ್ ಸೊರೆನ್ ಅವರ ಅತ್ತಿಗೆ), ಸಿಲ್ಲಿಯಿಂದ ಎಜೆಎಸ್‌ಯು ಪಕ್ಷದ ಮುಖ್ಯಸ್ಥ ಸುದೇಶ್ ಮಹತೋ ಇತರ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com