ಜೈಪುರ: ರಾಜಸ್ಥಾನದಲ್ಲಿ ನಡೆದ ಉಪ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಮಘಡ, ಡಿಯೊಲಿ, ಉನಿಯಾರಾ, ಖಿನ್ವಸರ್, ಜುಂಜುನು ಮತ್ತು ಸಲುಂಬರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜೇತರಾಗಿದ್ದು, ದೌಸಾವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.
ಚೋರಾಸಿ ಕ್ಷೇತ್ರವನ್ನು BAP ಉಳಿಸಿಕೊಂಡಿದೆ. ಚೋರಾಸಿಯಲ್ಲಿ BAP ಪಕ್ಷದ ಅನಿಲ್ ಕುಮಾರ್ ಕಟಾರ 24, 370 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಅವರು 89, 161 ಮತಗಳನ್ನು ಪಡೆದರೆ, ಅವರ ಸಮೀಪದ ಬಿಜೆಪಿ ಅಭ್ಯರ್ಥಿ ಕರಿಲಾಲ್ 64,791 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಪಡೆದಿದೆ. ಕೈ ಅಭ್ಯರ್ಥಿ ಮಹೇಶ್ ರೋಟ್ 15, 915 ಮತಗಳನ್ನು ಪಡೆದಿದ್ದಾರೆ.
ಸಲಂಬರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾ ಅಮೃತಲಾಲ್ ಮೀನಾ 12,85 ಅಂತರದಲ್ಲಿ ಗೆದಿದ್ದಾರೆ. ದೌಸಾದಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಸಚಿವ ಕಿರೋರಿ ಲಾಲ್ ಮೀನಾ ಅವರ ಸಹೋದರ ಜಗಮೋಹನ್ ಮೀನಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ದೀನ್ ದಯಾಳ್ ಬೈರ್ವಾ ಸೋಲಿಸಿದ್ದಾರೆ. ಖಿನ್ವಸಾರ್‌ನಲ್ಲಿ ಹನುಮಾನ್ ಬೇನಿವಾಲ್ ಅವರ ಪತ್ನಿ ಕನಿಕಾ ಬೇನಿವಾಲ್ ಅವರನ್ನು ಬಿಜೆಪಿಯ ರೇವಂತ್ರಾಮ್ ದಂಗಾ 13,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
ಜುಂಜುನು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಭಂಬು ಡಿಯೋಲಿ-ಉನಿಯಾರಾದಿಂದ ರಾಜೇಂದ್ರ ಗುರ್ಜರ್ ರಾಮಗಢದಿಂದ ಸುಖವಂತ್ ಸಿಂಗ್ ಗೆಲುವು ಸಾಧಿಸಿದ್ದಾರೆ. 21 ವರ್ಷಗಳ ನಂತರ ಕಾಂಗ್ರೆಸ್ ಸೋಲನುಭವಿಸಿದ ಜುಂಜುನುದಿಂದ ಅಚ್ಚರಿಯ ಫಲಿತಾಂಶ ಬಂದಿದೆ. 2003ರಲ್ಲಿ ಬಿಜೆಪಿಯ ಸುಮಿತ್ರಾ ಸಿಂಗ್ ಇಲ್ಲಿಂದ ಗೆದ್ದಿದ್ದರು. ಅಂದಿನಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು.
Advertisement