ಪಾಲಕ್ಕಾಡ್ hit-and-run; ಪಾದಾಚಾರಿಗಳಿಗೆ ಗುದ್ದಿ ಕಾರು ಎಸ್ಕೇಪ್.. ಇಬ್ಬರ ದಾರುಣ ಸಾವು!

ಅಷ್ಟೇನು ಟ್ರಾಫಿಕ್ ಇಲ್ಲದ ರಸ್ತೆಯಲ್ಲಿ ರಸ್ತೆದಾಟಲು ಇಬ್ಬರು ವ್ಯಕ್ತಿಗಳು ನಿಂತಿದ್ದು, ಈ ವೇಳೆ ಲಾರಿ ಮುಂದಕ್ಕೆ ಹೋಗಿದೆ.
Two pedestrians killed by speeding car
ಹಿಟ್ ಅಂಡ್ ರನ್
Updated on

ಕೊಚ್ಚಿನ್: ಕೇರಳದ ಪಾಲಕ್ಕಾಡ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರೊಂದು ಪಾದಾಚಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗುದ್ದಿ ಪರಾರಿಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ.

ಪಾಲಕ್ಕಾಡ್‌ನ ಕೊಡುವಾಯೂರಿನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ವ್ಯಕ್ತಿಗಳು ರಸ್ತೆ ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ರಸ್ತೆ ಮೇಲೆ ಅಷ್ಟೇನು ಟ್ರಾಫಿಕ್ ಇಲ್ಲದ ರಸ್ತೆಯಲ್ಲಿ ರಸ್ತೆದಾಟಲು ಇಬ್ಬರು ವ್ಯಕ್ತಿಗಳು ನಿಂತಿದ್ದು, ಈ ವೇಳೆ ಲಾರಿ ಮುಂದಕ್ಕೆ ಹೋಗಿದೆ. ಇದೇ ಸಂದರ್ಭದಲ್ಲಿ ಫುಟ್ ಪಾತ್ ಮೇಲೆ ನಿಂತಿದ್ದ ವ್ಯಕ್ತಿಗಳ ಮೇಲೆ ಏಕಾಏಕಿ ಕಪ್ಪುಬಣ್ಣದ ಕಾರೊಂದು ವೇಗವಾಗಿ ಬಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ರಭಸಕ್ಕೆ ಇಬ್ಬರು ವ್ಯಕ್ತಿಗಳು ಗಾಳಿಯಲ್ಲಿ 10 ಅಡಿ ಮೇಲೆ ಹಾರಿ ಸುಮಾರು ದೂರಕ್ಕೆ ಹಾರಿ ಬಿದ್ದಿದ್ದಾರೆ.

Two pedestrians killed by speeding car
ಪುತ್ತೂರು: ಸರಣಿ ಅಪಘಾತ: 20 ಜನರಿಗೆ ಗಾಯ, ಹಲವು ವಾಹನಗಳು ಜಖಂ

ಕನಿಷ್ಟ ಪಕ್ಷ ಅವರಿಗೆ ಏನಾಗಿದೆ ಎಂಬುದನ್ನೂ ನೋಡದ ಕಾರು ಚಾಲಕ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಬಿದ್ದ ರಭಸಕ್ಕೆ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ದಾಖಲಾಗಿದ್ದ ಈ ಅಪಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಪಾನಮತ್ತ ಕಾರು ಚಾಲಕನ ಬಂಧನ

ಇನ್ನು ಪಾನಮತ್ತನಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಚಾಲಕನನ್ನು ಕೇರಳ ಪೊಲೀಸರು ಬಂಧಿಸಿದ್ದು, ಎಳವಂಚೇರಿ ಮೂಲದ ಪ್ರೇಮನಾಥ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com