ಮುಂಬೈ: ಮಹಾರಾಷ್ಟ್ರ ಸಿಎಂ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಜನರು ದ್ವೇಷ ಮತ್ತು ಸೇಡಿನ ರಾಜಕಾರಣವನ್ನು ತಿರಸ್ಕರಿಸಿದ್ದಾರೆ, ಕಲ್ಯಾಣ ಮತ್ತು ಅಭಿವೃದ್ಧಿಯ ರಾಜಕೀಯವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಭಿವೃದ್ಧಿ ಮತ್ತು ಕಲ್ಯಾಣ ಕ್ರಮಗಳ ನಡುವೆ ಸಮತೋಲನವನ್ನು ಸಾಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದು ಐತಿಹಾಸಿಕ ದಿನ; ಮಹಾಯುತಿಗೆ ಪ್ರಚಂಡ ಗೆಲುವು ನೀಡಲು ಜನರು ಚುನಾವಣೆಯ ಮೂಲಕ ಶಿವಸೇನೆ ಮತ್ತು ಎನ್‌ಸಿಪಿ ಯಾರಿಗೆ ಸೇರಿದ್ದು ಎಂಬುದನ್ನು ನಿರ್ಧರಿಸಿದ್ದಾರೆ ಎಂದು ಶಿಂಧೆ ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಇದುವರೆಗೆ 24 ಸ್ಥಾನಗಳನ್ನು ಗೆದ್ದಿದ್ದು ಮತ್ತು ಇತರ 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ಕ್ರಮವಾಗಿ 15 ಮತ್ತು 14 ಸ್ಥಾನಗಳನ್ನು ಗಳಿಸಿವೆ.
ಸಿಂಧುದುರ್ಗ ಜಿಲ್ಲೆಯ ಕಂಕಾವ್ಲಿ ವಿಧಾನಸಭಾ ಕ್ಷೇತ್ರವನ್ನು 58,007 ಮತಗಳ ಅಂತರದಿಂದ ಉಳಿಸಿಕೊಂಡಿರುವ ಹಾಲಿ ಶಾಸಕ ನಿತೇಶ್ ರಾಣೆ, ಕೊಲಾಬಾ ಕ್ಷೇತ್ರವನ್ನು 48,581 ಮತಗಳಿಂದ ಗೆದ್ದಿರುವ ರಾಜ್ಯ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಮತ್ತು ಸತಾರಾದಿಂದ ಶಿವೇಂದ್ರರಾಜೇ ಭೋಂಸ್ಲೆ ಅವರು ಬಿಜೆಪಿಯಿಂದ ಗೆದ್ದ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
Advertisement