ಪಾಲ್ಗಾರ್: ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ದಹನು ( ಪರಿಶಿಷ್ಟ ಪಂಗಡ ಮೀಸಲು) ವಿಧಾನಸಭಾ ಕ್ಷೇತ್ರದಿಂದ ಸಿಪಿಐ (ಎಂ) ಅಭ್ಯರ್ಥಿ ವಿನೋದ್ ನಿಕೋಲ್ 5, 133 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ವಿನೋದ್ ನಿಕೋಲ್, ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿ ವಿನೋದ್ ಸುರೇಶ್ ಮೆಧಾ ಅವರನ್ನು ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಸಿಪಿಐ (ಎಂ) 1978 ರಿಂದ ಸತತವಾಗಿ 10ನೇ ಬಾರಿಯೂ ಗೆಲುವು ಸಾಧಿಸಿದೆ.
ಈ ಕ್ಷೇತ್ರ 2009ರಲ್ಲಿ ಪುನರ್ ವಿಂಗಡನೆಯಾಗಿ ದಹನು (ST) ಕ್ಷೇತ್ರವಾಗಿ ರಚನೆಯಾಗುವ ಮುನ್ನಾ ಜವ್ಹರ್ (ಎಸ್ ಟಿ) ಕ್ಷೇತ್ರವಾಗಿ ಹೆಸರಾಗಿತ್ತು. ಮಹಾಯುತಿ ಅಲೆಯ ನಡುವೆ ದಹನು ಕ್ಷೇತ್ರದ ಗೆಲುವು ಮಹತ್ವದ ಸಾಧನೆಯಾಗಿದೆ ಎಂದು ಸಿಪಿಐ (ಎಂ) ನಾಯಕ ಅಶೋಕ್ ದಾವಲೆ ಹೇಳಿದ್ದಾರೆ.
ಚುನಾವಣೆ ಗೆಲುವಿನ ಕ್ರೆಡಿಟ್ ದಹನು ಜನರು ಹಾಗೂ ವಿವಿಧ ಎಡಪಕ್ಷಗಳ ಕಾರ್ಯಕರ್ತರಿಗೆ ಸಲ್ಲಬೇಕು ಎಂದಿದ್ದಾರೆ. ಸಿಪಿಐ(ಎಂ) ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ ಆಘಾಡಿಯ ಮೈತ್ರಿ ಪಕ್ಷವಾಗಿತ್ತು.
Advertisement