ನವದೆಹಲಿ: ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದ ಯುವಕರು ರಾಜಕೀಯ ಸೇರುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ. ಇಂತಹ ಸುಮಾರು 1 ಲಕ್ಷ ಯುವಕರು ರಾಜಕೀಯಕ್ಕೆ ಎಂಟ್ರಿ ಆಗಲು ವಿಶೇಷ ಅಭಿಯಾನವನ್ನು ಘೋಷಿಸಿದ್ದಾರೆ.
ತಮ್ಮ ಆಕಾಶವಾಣಿಯ ಮನ್ ಕೀ ಬಾತ್ ನ 116 ನೇ ಆವೃತ್ತಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಯೊಂದಿಗಿನ ವರ್ಷಗಳನ್ನು ನೆನಪಿಸಿಕೊಂಡರು. ಅದು ಹೇಗೆ ಅವರ ವ್ಯಕ್ತಿತ್ವವನ್ನು ರೂಪಿಸಿತು ಎಂಬುದನ್ನು ವಿವರಿಸಿದರು. ತಮ್ಮ ಸ್ವಾತಂತ್ರ್ಯ ದಿನದ ಭಾಷಣವನ್ನು ಉಲ್ಲೇಖಿಸಿದ ಮೋದಿ, ರಾಜಕೀಯ ಹಿನ್ನೆಲೆ ಇಲ್ಲದ ಯುವಕರು ರಾಜಕೀಯಕ್ಕೆ ಸೇರುವಂತೆ ಒತ್ತಾಯಿಸಿದರು. ಈ ಪ್ರಯತ್ನದ ಭಾಗವಾಗಿ ' ವಿಕಸಿತ ಭಾರತ ಯುವ ನಾಯಕರ ಸಂವಾದ (Dialogue) ದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ದೇಶ ಮತ್ತು ವಿದೇಶಗಳ ತಜ್ಞರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಕ್ತಿಗಳು ಸಂವಾದಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಆಯ್ದು 2,000 ಯುವಕರು ತಮ್ಮ ಆಲೋಚನೆಗಳನ್ನು ನೇರವಾಗಿ ಪ್ರಸ್ತುತಪಡಿಸಲು ಸರ್ಕಾರ ಅವಕಾಶ ಒದಗಿಸುತ್ತದೆ. ಅವರ ಆಲೋಚನೆಗಳನ್ನು ದೇಶದ ಭವಿಷ್ಯಕ್ಕಾಗಿ ಗಟ್ಟಿಯಾದ ಮಾರ್ಗಸೂಚಿಯಾಗಿ ಅಭಿವೃದ್ಧಿಪಡಿಸಲಾಗುವುದು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಲು ಯುವಜನರರಿಗೆ ಆಹ್ವಾನ ನೀಡಿದರು.
ಸ್ವಾಮಿ ವಿವೇಕಾನಂದರ 162ನೇ ಜನ್ಮದಿನಾಚರಣೆಯೊಂದಿಗೆ ಜನವರಿ 11 ಮತ್ತು 12 ರಂದು ದೆಹಲಿಯ ಭಾರತ ಮಂಟಪದಲ್ಲಿ ' ವಿಕಸಿತ ಭಾರತ ಯುವ ನಾಯಕರ ಸಂವಾದ ನಡೆಯಲಿದೆ. ಎನ್‌ಸಿಸಿ ದಿನದಂದು ಮೋದಿ 5,000 ಹೊಸ ಶಾಲೆಗಳು ಮತ್ತು ಕಾಲೇಜುಗಳ ವಿಸ್ತರಣೆಯನ್ನು ಪರಿಗಣಿಸಿದ ಮೋದಿ, ಮಹಿಳೆಯರ ಭಾಗವಹಿಸುವಿಕೆಯಲ್ಲಿ ಶೇ. 25 ರಿಂದ ಶೇ. 40 ರಷ್ಟು ಗಮನಾರ್ಹ ಏರಿಕೆಯಾಗಿದೆ ಎಂದರು.
ಹಿರಿಯ ನಾಗರಿಕರ ಜೀವನವನ್ನು ಸುಧಾರಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಿ, ವಿಶೇಷವಾಗಿ ಪಿಂಚಣಿ ಪ್ರಕ್ರಿಯೆಗಳನ್ನು ಸರಳೀಕರಿಸಿದ ಡಿಜಿಟಲ್ ಜೀವನ ಪ್ರಮಾಣ ಪತ್ರ ಕುರಿತು ಮಾತನಾಡಿದರು. ಚೆನ್ನೈನಲ್ಲಿ 'ಪ್ರಕೃತ್ ಅರಿವಾಗಂ' ಗ್ರಂಥಾಲಯದ ಯಶಸ್ಸನ್ನು ಹಂಚಿಕೊಂಡ ಪ್ರಧಾನಿ, ಇದು ಯುವಕರಿಗೆ ಸೃಜನಶೀಲತೆಯನ್ನು ಉತ್ತೇಜಿಸಿದೆ ಎಂದು ಹೇಳಿದರು.
ಭಾರತ ಮತ್ತು ಕೆರಿಬಿಯನ್ ರಾಷ್ಟ್ರದ ನಡುವಿನ ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಂಬಂಧಗಳಿಗೆ ಒತ್ತು ನೀಡಿದ ಅವರ ಗಯಾನಾ ಭೇಟಿ ಕುರಿತು ಮಾತನಾಡಿದ ಪ್ರಧಾನಿ, ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರು ತಮ್ಮ ಹೃದಯದಲ್ಲಿ ಭಾರತವನ್ನು ಹೊಂದಿದ್ದಾರೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ರಾಷ್ಟ್ರದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಇತಿಹಾಸವನ್ನು ಸಂರಕ್ಷಣೆ ಕುರಿತು ಒತ್ತಿ ಹೇಳಿದ ಅವರು, ವಿಭಜನೆ ಪೀಡಿತ ಜನರ ಅನುಭವಗಳನ್ನು ಸಂಗ್ರಹಿಸುವ ‘ಮೌಖಿಕ ಇತಿಹಾಸ ಯೋಜನೆ’ಯನ್ನು ಪ್ರಸ್ತಾಪಿಸಿದರು. ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಸ್ಲೋವಾಕಿಯಾದಲ್ಲಿ ಮಾಡಿದ ಪ್ರಯತ್ನಗಳನ್ನು ಚರ್ಚಿಸಿದರು.
Advertisement