ಸಂಭಾಲ್‌ನಲ್ಲಿ ಶಾಹಿ ಜಾಮಾ ಮಸೀದಿ ಸಮೀಕ್ಷೆ ವೇಳೆ ಹಿಂಸಾತ್ಮಕ ಘರ್ಷಣೆ; ಪೊಲೀಸರ ಗುಂಡಿಗೆ ಮೂವರು ಬಲಿ!

ಮೃತರನ್ನು ನಯೀಮ್ ಖಾನ್, ಬಿಲಾಲ್ ಮತ್ತು ನೋಮನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯ ವೇಳೆ ಮೂವರು ಸಾವನ್ನಪ್ಪಿದ್ದಾರೆ.
ಹಿಂಸಾಚಾರದ ದೃಶ್ಯ
ಹಿಂಸಾಚಾರದ ದೃಶ್ಯPTI
Updated on

ಸಂಭಾಲಾ: ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆಯ ಸಮಯದಲ್ಲೇ ಸಂಭಾಲ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದಿದ್ದು ಇದರ ಪರಿಣಾಮವಾಗಿ ಮೂರು ಜನರು ಸಾವನ್ನಪ್ಪಿದರು ಮತ್ತು ವ್ಯಾಪಕ ಅಶಾಂತಿ ಹರಡಿದೆ.

ಮೃತರನ್ನು ನಯೀಮ್ ಖಾನ್, ಬಿಲಾಲ್ ಮತ್ತು ನೋಮನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯ ವೇಳೆ ಮೂವರು ಸಾವನ್ನಪ್ಪಿದ್ದಾರೆ. ನಯೀಮ್ ಖಾನ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದು ನಂತರ ಪ್ರತಿಭಟನೆ ಮತ್ತು ಆಕ್ರೋಶ ಹೆಚ್ಚಾಯಿತು.

ಬೆಳಿಗ್ಗೆ 11:00ರ ಸುಮಾರಿಗೆ ಹಿಂಸಾಚಾರ ಪ್ರಾರಂಭವಾಯಿತು. ಪೊಲೀಸ್ ತಂಡವು ಸಮೀಕ್ಷೆಯ ಸಮಯದಲ್ಲಿ ಮಸೀದಿಯ ಬಳಿ ನೆರೆದಿದ್ದ ಗುಂಪನ್ನು ಚದುರಿಸಲು ಪ್ರಯತ್ನಿಸಿತ್ತು. ನಯೀಮ್ ಖಾನ್ ಅವರ ಕುಟುಂಬದ ಪ್ರಕಾರ, ಸ್ಥಳೀಯ ಸಿಇಒ ಅವರ ಸಮ್ಮುಖದಲ್ಲಿ ಪೊಲೀಸರು ಗುಂಡು ಹಾರಿಸಿದ್ದು ಒಂದು ಗುಂಡು ನಯೀಮ್‌ಗೆ ತಗುಲಿದ್ದು ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ. ನಯೀಮ್ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಅಂಗಡಿಗೆ ಸಂಸ್ಕರಿಸಿದ ಎಣ್ಣೆಯನ್ನು ಖರೀದಿಸಲು ಹೋಗುತ್ತಿದ್ದಾಗ ಗುಂಡು ತಗುಲಿ ಮೃತಪಟ್ಟಿದ್ದಾನೆ ಎಂದು ಕುಟುಂಬ ಆರೋಪಿಸಿದೆ.

ಸ್ಥಳೀಯ ವರದಿಗಳ ಪ್ರಕಾರ ಬಿಲಾಲ್ ಮತ್ತು ನೋಮನ್ ಕೂಡ ಘರ್ಷಣೆಯ ಸುತ್ತಮುತ್ತಲ ಪ್ರದೇಶದಲ್ಲಿದ್ದ ಕಾರಣ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮೂವರು ಪುರುಷರು ಮಸೀದಿಯ ಹಿಂಭಾಗದ ರಸ್ತೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಹಿಂಸಾಚಾರದ ದೃಶ್ಯ
ಉತ್ತರ ಪ್ರದೇಶ: ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ; ಪೊಲೀಸರಿಂದ ಅಶ್ರುವಾಯು ಪ್ರಯೋಗ, 10 ಮಂದಿ ಬಂಧನ

ಶಾಹಿ ಜಾಮಾ ಮಸೀದಿಯಲ್ಲಿ ಬೆಳಿಗ್ಗೆ 7:30ರ ಸುಮಾರಿಗೆ ಶಾಂತಿಯುತವಾಗಿ ಪ್ರಾರಂಭವಾದ ಸಮೀಕ್ಷೆಯು, ಸುಮಾರು 1,000 ಜನರ ಗುಂಪು ಆ ಪ್ರದೇಶದಲ್ಲಿ ಜಮಾಯಿಸಿದ್ದು ಶೀಘ್ರದಲ್ಲೇ ಉದ್ವಿಗ್ನಗೊಂಡಿತು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು ವಾಹನಗಳಿಗೆ ಬೆಂಕಿ ಹಚ್ಚಿದರು. ಪ್ರತಿಯಾಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿಚಾರ್ಜ್ ಮಾಡಬೇಕಾಯಿತು. ಹಿಂಸಾಚಾರ ಹರಡುತ್ತಿದ್ದಂತೆ ಪೊಲೀಸರು ಗುಂಪನ್ನು ಚದುರಿಸಲು ಗುಂಡು ಹಾರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com