ಮುಂಬೈ: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನಾ ಪಟೋಲೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳಿದ್ದವು.
ಈ ವದಂತಿಗಳ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ನಾನಾ ಪಟೋಲೆ, ರಾಜೀನಾಮೆ ವದಂತಿಗಳನ್ನು ಅಲ್ಲಗಳೆದಿದ್ದಾರೆ. ಅಷ್ಟೇ ಅಲ್ಲದೇ ಸೋಲಿಗೆ ಸಾಮೂಹಿಕವಾಗಿ ಮೈತ್ರಿಕೂಟ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.
"ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ನ್ನು ಮುಂಚೂಣಿಯಿಂದ ಮುನ್ನಡೆಸುತ್ತಿದ್ದರು.
ಆದ್ದರಿಂದ, ಟ್ರೆಂಡ್ ಮಹಾ ವಿಕಾಸ್ ಅಘಾಡಿಯ ಪರವಾಗಿವೆ ಎಂದು ನಮಗೆ ಖಚಿತವಾಗಿತ್ತು, ನಾಗರಿಕರು ಸಹ ಅದನ್ನು ನಂಬಿದ್ದರು, ”ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.
ನಾಂದೇಡ್ ಬಗ್ಗೆ ಹೇಳುವುದಾದರೆ ಲೋಕಸಭೆ ಉಪಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ಒಂದೇ ದಿನ ನಡೆದಿದ್ದು, ಲೋಕಸಭೆ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ. ಅಂತಹ "ದೊಡ್ಡ ವ್ಯತ್ಯಾಸ" ಇರಬಾರದು ಎಂದು ಪಟೋಲೆ ಹೇಳಿದ್ದಾರೆ.
ಇದು ಜನರಲ್ಲಿರುವ ಭಾವನೆಯೂ ಆಗಿದೆ ಮತ್ತು ಮಹಾರಾಷ್ಟ್ರದಲ್ಲಿ ಈ ಸರ್ಕಾರವನ್ನು ಅವರು ನೀಡಿರುವ ಮತದಿಂದಾಗಿ ರಚಿಸಲಾಗುತ್ತಿಲ್ಲ ಹಾಗಾಗಿ ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದ್ದೇನೆ ಎಂದು ಪಟೋಲೆ ಹೇಳಿದ್ದಾರೆ.
Advertisement