ಚೆನ್ನೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಲ್ಲಿ ಆತ್ಮಾವಲೋಕನ ನಡೆಯುತ್ತಿದೆ. ಕೆಲವು ನಾಯಕರು ಇವಿಎಂ ತಿರುಚಲಾಗಿದೆ ಎಂಬ ಆರೋಪ ಮಾಡಿದರೆ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
"ನಾನು 2004 ರಿಂದಲೂ ಚುನಾವಣೆಗಳಲ್ಲಿ ಭಾಗಿಯಾಗುತ್ತಿದ್ದೇನೆ, "ವೈಯಕ್ತಿಕವಾಗಿ," ಇವಿಎಂ ಟ್ಯಾಂಪರಿಂಗ್ ಅಥವಾ ತಿರುಚಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ನೋಡಿಲ್ಲ ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.
ಚಿದಂಬರಂ ಎಎನ್‌ಐ ನೊಂದಿಗೆ ಮಾತನಾಡಿದ್ದು "ನಾನು 2004 ರಿಂದ ಇವಿಎಂಗಳನ್ನು ಬಳಸಿರುವ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ವೈಯಕ್ತಿಕವಾಗಿ ಯಾವುದೇ ಕೆಟ್ಟ ಅನುಭವವಿಲ್ಲ. ಯಾವುದೇ ರೀತಿಯ ಟ್ಯಾಂಪರಿಂಗ್ ನಡೆದಿದೆ ಎಂದು ಸಾಬೀತುಪಡಿಸಲು ನನ್ನ ಬಳಿ ಯಾವುದೇ ಪುರಾವೆಗಳಿಲ್ಲ." ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆರೋಪಗಳನ್ನು ವೈಜ್ಞಾನಿಕ ಡೇಟಾದಿಂದ ಸಾಬೀತುಪಡಿಸಬೇಕು ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.
"ಯಾರಾದರೂ ವಾಸ್ತವವಾಗಿ ಟ್ಯಾಂಪರಿಂಗ್ ನಡೆದಿದೆ ಎಂದು ವೈಜ್ಞಾನಿಕ ದತ್ತಾಂಶದೊಂದಿಗೆ ಸಾಬೀತುಪಡಿಸದ ಹೊರತು, ನನ್ನ ದೃಷ್ಟಿಕೋನವನ್ನು ಬದಲಾಯಿಸಲು ನಾನು ಸಿದ್ಧನಿಲ್ಲ. ನನ್ನ ಪಕ್ಷದ ಅನೇಕರು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆಂದು ನನಗೆ ತಿಳಿದಿದೆ" ಎಂದು ಅವರು ಹೇಳಿದ್ದಾರೆ.
Advertisement