ಸಂಭಾಲ್ ಹಿಂಸಾಚಾರ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ; ಇಂಟರ್ನೆಟ್ ಸೇವೆ ಸ್ಥಗಿತ ಮುಂದುವರಿಕೆ!

ಮೊಘಲರ ಕಾಲದ ಮಸೀದಿಯೊಂದು ಮೂಲತಃ ಹರಿಹರ ದೇವಸ್ಥಾನ ಎಂದು ಅರ್ಜಿ ಸಲ್ಲಿಸಿದ್ದು ಮಸೀದಿ ಸರ್ವೇಗೆ ನ್ಯಾಯಾಲಯದ ಆದೇಶ ನೀಡಿದ ನಂತರ ಸಂಭಾಲ್ ನಲ್ಲಿ ಅಶಾಂತಿ ಉಂಟಾಗಿತ್ತು.
ಸಂಭಾಲ್ ಹಿಂಸಾಚಾರ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ; ಇಂಟರ್ನೆಟ್ ಸೇವೆ ಸ್ಥಗಿತ ಮುಂದುವರಿಕೆ!
TNIE
Updated on

ಸಂಭಾಲ್: ಜಾಮಾ ಮಸೀದಿ ಸರ್ವೇ ಕಾರ್ಯಾಚರಣೆ ವೇಳೆ ಭುಗಿಲೆದ್ದ ಹಿಂಸಾಚಾರ ಇದೀಗ ಸಹಜ ಸ್ಥಿತಿಯತ್ತ ಮರಳಲು ಆರಂಭಿಸಿದ್ದರೂ ಸಂಭಾಲ್‌ನಲ್ಲಿ ಭಾನುವಾರ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ.

ಶಾಲೆಗಳು ಪುನರಾರಂಭಗೊಂಡಿದ್ದು ದೈನಂದಿನ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಇಂದು ಮತ್ತೆ ಓಪನ್ ಆಗಿವೆ. ಆದಾಗ್ಯೂ, ಸತತ ಮೂರನೇ ದಿನವೂ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮೊಘಲರ ಕಾಲದ ಮಸೀದಿಯೊಂದು ಮೂಲತಃ ಹರಿಹರ ದೇವಸ್ಥಾನ ಎಂದು ಅರ್ಜಿ ಸಲ್ಲಿಸಿದ್ದು ಮಸೀದಿ ಸರ್ವೇಗೆ ನ್ಯಾಯಾಲಯದ ಆದೇಶ ನೀಡಿದ ನಂತರ ಸಂಭಾಲ್ ನಲ್ಲಿ ಅಶಾಂತಿ ಉಂಟಾಗಿತ್ತು.

ಮೂಲಗಳ ಪ್ರಕಾರ, ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಪರಿಸ್ಥಿತಿಯನ್ನು ಸಂಪೂರ್ವವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿವೆ. ಪ್ರಮುಖ ಜಾಗಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ರಾಪಿಡ್ ಆಕ್ಷನ್ ಫೋರ್ಸ್ (RAF) ತಂಡಗಳು ಸೂಕ್ಷ್ಮ ಪ್ರದೇಶಗಳಲ್ಲಿ ಬೀಡುಬಿಟ್ಟಿವೆ. ಮುನ್ನೆಚ್ಚರಿಕ ಕ್ರಮವಾಗಿ ನವೆಂಬರ್ 30ರವರೆಗೆ ಸಂಭಾಲ್‌ಗೆ ಹೊರಗಿನವರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧಗಳನ್ನು ವಿಧಿಸಿದೆ. ಜಿಲ್ಲೆಯ ಬಹುತೇಕ ಭಾಗಗಳು ಶಾಂತವಾಗಿದ್ದರೆ, ಶಾಹಿ ಜಾಮಾ ಮಸೀದಿ ಸುತ್ತಮುತ್ತಲಿನ ಪ್ರದೇಶಗಳು ನಿರ್ಜನವಾಗಿ ಕಂಡುಬಂದಿವೆ.

ಸಂಭಾಲ್ ಹಿಂಸಾಚಾರ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ; ಇಂಟರ್ನೆಟ್ ಸೇವೆ ಸ್ಥಗಿತ ಮುಂದುವರಿಕೆ!
ಸಂಭಾಲಾ ಹಿಂಸಾಚಾರ: SP ಸಂಸದ ಜಿಯಾ-ಉರ್-ರೆಹಮಾನ್, ಶಾಸಕ ಸೇರಿದಂತೆ 2500 ಜನರ ವಿರುದ್ಧ FIR; 25 ಮಂದಿ ಬಂಧನ!

ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಸಮಾಜವಾದಿ ಪಕ್ಷದ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಮತ್ತು ಶಾಸಕ ನವಾಬ್ ಇಕ್ಬಾಲ್ ಮಹಮೂದ್ ಅವರ ಪುತ್ರ ನವಾಬ್ ಸುಹೇಲ್ ಇಕ್ಬಾಲ್ ಸೇರಿದಂತೆ 2,500 ಜನರ ವಿರುದ್ಧ ಪೊಲೀಸರು 7 ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಸಮೀಕ್ಷೆಯನ್ನು ವಿರೋಧಿಸಿದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕಲ್ಲು ತೂರಾಟ ನಡೆಸಿದ್ದು ನಂತರ ಘರ್ಷಣೆಯ ಘಟನೆಗಳು ನಡೆದಿದ್ದವು. ಹಿಂಸಾಚಾರದಲ್ಲಿ ಭಾಗಿಯಾಗಿರುವ ಜನರನ್ನು ಗುರುತಿಸಲು ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಂಭಾಲ್ ಎಸ್ಪಿ ಕೃಷ್ಣ ಕುಮಾರ್ ಬಿಷ್ಣೋಯ್ ಹೇಳಿದ್ದಾರೆ. ಈವರೆಗೆ 25 ಮಂದಿಯನ್ನು ಬಂಧಿಸಲಾಗಿದ್ದು, ಹಲವು ಮನೆಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com