ಅಜ್ಮೀರ್ ದರ್ಗಾ
ಅಜ್ಮೀರ್ ದರ್ಗಾTNIE

ಸಂಭಾಲ್ ಹಿಂಸಾಚಾರ ಬೆನ್ನಲ್ಲೆ ಅಜ್ಮೀರ್ ದರ್ಗಾ ಕುರಿತ ಅರ್ಜಿ ವಿಚಾರಣೆಗೆ ಕೋರ್ಟ್ ಸಮ್ಮತಿ; ದರ್ಗಾ ಸಮಿತಿಗೆ ಸಮನ್ಸ್

ದೆಹಲಿ ಮೂಲದ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ದರ್ಗಾದ ಸ್ಥಳದಲ್ಲಿ ಮಹಾದೇವನ ದೇವಸ್ಥಾನ ಇತ್ತು ಎಂದು ಹೇಳಿದ್ದಾರೆ. ಮೊಕದ್ದಮೆಯನ್ನು ಸ್ವೀಕರಿಸಿದ ನ್ಯಾಯಾಲಯವು ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿದೆ.
Published on

ಉತ್ತರಪ್ರದೇಶದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆಗೆ ಕೋರ್ಟ್ ಆದೇಶದ ನಂತರ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಐವರು ಮುಸ್ಲಿಮರನ್ನು ಸಾವನ್ನಪ್ಪಿದ ಕೆಲವು ದಿನಗಳಲ್ಲೆ ರಾಜಸ್ಥಾನದ ನ್ಯಾಯಾಲಯವು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿಯ ದರ್ಗಾ ಈ ಹಿಂದೆ ಹಿಂದೂ ಶಿವ ದೇವಾಲಯ ಆಗಿತ್ತು ಎಂದು ಹಿಂದೂ ಸಂಘಟನೆಯೊಂದು ಅರ್ಜಿ ಸಲ್ಲಿಸಿದ್ದು ಈ ಸಂಬಂಧ ಸಮಿತಿಗೆ ನೋಟಿಸ್ ಜಾರಿ ಮಾಡಲು ನ್ಯಾಯಾಲಯ ಆದೇಶಿಸಿದೆ.

ದೆಹಲಿ ಮೂಲದ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ದರ್ಗಾದ ಸ್ಥಳದಲ್ಲಿ ಮಹಾದೇವನ ದೇವಸ್ಥಾನ ಇತ್ತು ಎಂದು ಹೇಳಿದ್ದಾರೆ. ಮೊಕದ್ದಮೆಯನ್ನು ಸ್ವೀಕರಿಸಿದ ನ್ಯಾಯಾಲಯವು ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿದೆ.

1911ರಲ್ಲಿ ಅಜ್ಮೀರ್ ನಿವಾಸಿ ಹರ್ ವಿಲಾಸ್ ಶಾರದಾ ಅವರು ಬರೆದ ಪುಸ್ತಕವನ್ನು ಉಲ್ಲೇಖಿಸಿ ಫಿರ್ಯಾದಿ ವಿಷ್ಣು ಗುಪ್ತಾ ಅವರು ದರ್ಗಾದ ಭೂಮಿಯಲ್ಲಿ ಮೊದಲು ಶಿವನ ದೇವಾಲಯವಿತ್ತು ಎಂದು ಪ್ರತಿಪಾದಿಸಿದರು. ದರ್ಗಾ ಸಂಕೀರ್ಣದ ಬುಲಂದ್ ದರ್ವಾಜಾ ನಿರ್ಮಾಣದಲ್ಲಿ ದೇವಾಲಯದ ಅವಶೇಷಗಳ ಕುರುಹುಗಳಿವೆ ಮತ್ತು ನೆಲಮಾಳಿಗೆಯಲ್ಲಿ ಗರ್ಭಗುಡಿ ಇರುವ ಬಗ್ಗೆ ಪುರಾವೆಗಳಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಜ್ಮೀರ್ ದರ್ಗಾ
ಸಂಭಾಲ್ ಹಿಂಸಾಚಾರ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ; ಇಂಟರ್ನೆಟ್ ಸೇವೆ ಸ್ಥಗಿತ ಮುಂದುವರಿಕೆ!

ಇದಕ್ಕೂ ಮುನ್ನ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಈ ವಿಷಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದರು. ಇದಾದ ನಂತರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ಮಂಡಿಸಲಾಗಿದ್ದು, ಬುಧವಾರದ ವಿಚಾರಣೆ ವೇಳೆ ದಾವೆಯನ್ನು ಅಂಗೀಕರಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 20 ರಂದು ನಡೆಯಲಿದೆ.

X

Advertisement

X
Kannada Prabha
www.kannadaprabha.com