ನವದೆಹಲಿ: ಎನ್‌ಐಎ ಮತ್ತು ಸಿಬಿಐ ನಡೆಸಿದ ಕಾರ್ಯಾಚರಣೆಯಲ್ಲಿ ಇಂಟರ್‌ಪೋಲ್ ರೆಡ್ ನೋಟಿಸ್ ಎದುರಿಸುತ್ತಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ಸದಸ್ಯನನ್ನು ರುವಾಂಡಾ ಗುರುವಾರ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರಾಷ್ಟ್ರೀಯವಾಗಿ ನಿಷೇಧಕ್ಕೆ ಒಳಗಾದ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವ ಸಲ್ಮಾನ್ ರೆಹಮಾನ್ ಖಾನ್, ಬೆಂಗಳೂರಿನಲ್ಲಿ ಮತ್ತಷ್ಟು ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ಒದಗಿಸುವಲ್ಲಿ ಸಹಾಯ ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಯೋತ್ಪಾದನೆ ಸಂಬಂಧಿತ ಅಪರಾಧಗಳಿಗಾಗಿ ಎನ್‌ಐಎ ಬಯಸಿದ ಸಲ್ಮಾನ್ ರೆಹಮಾನ್ ಖಾನ್‌ನ ರುವಾಂಡಾದಿಂದ ಭಾರತಕ್ಕೆ ವಾಪಸ್ ಕರೆತರಲು " ಸಿಬಿಐ ಜಾಗತಿಕ ಕಾರ್ಯಾಚರಣೆ ಕೇಂದ್ರ ಎನ್‌ಐಎ ಮತ್ತು ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ-ಕಿಗಾಲಿಯೊಂದಿಗೆ ನಿಕಟವಾಗಿ ಸಂಘಟಿತವಾಗಿತ್ತು ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2023 ರಲ್ಲಿ ರೆಹಮಾನ್ ವಿರುದ್ಧ ಬೆಂಗಳೂರಿನಲ್ಲಿ ಭಯೋತ್ಪಾದನೆಯನ್ನು ಹರಡಲು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿದೆ ಎಂದು ವಕ್ತಾರರು ಹೇಳಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ಈ ಹಿಂದೆ ಪೋಕ್ಸೊ ಪ್ರಕರಣದಲ್ಲಿ (20182022) ಜೈಲಿನಲ್ಲಿದ್ದ ಖಾನ್, ಭಯೋತ್ಪಾದನಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಟಿ ನಾಸೀರ್ ಜೈಲಿನಲ್ಲಿದ್ದ ಸಮಯದಲ್ಲಿ ತೀವ್ರಗಾಮಿಯಾಗಿ ಬದಲಾಗಿದ್ದ ಮತ್ತು ಉಗ್ರ ಸಂಘಟನೆಗೆ ನೇಮಕಗೊಂಡ ನಂತರ ಇತರ ಭಯೋತ್ಪಾದಕ ಆರೋಪಿಗಳಿಗೆ ಸ್ಫೋಟಕಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು ಅನುಕೂಲ ಮಾಡಿಕೊಟ್ಟಿದ್ದ ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.
ನಾಸೀರ್ ಜೈಲಿನಿಂದ ನ್ಯಾಯಾಲಯಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದಲ್ಲದೆ, ದೇಶದಲ್ಲಿ ಮತ್ತಷ್ಟು ಎಲ್‌ಇಟಿ ಕಾರ್ಯಾಚರಣೆಗಳಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದ ಸಂಸ್ಥೆ ಹೇಳಿದೆ. ಇಂಟರ್‌ಪೋಲ್‌ನ ಸಮನ್ವಯದಲ್ಲಿ ಇದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸಿ ಖಾನ್ ಮಾದರಿಯಲ್ಲೇ ಇಬ್ಬರು ಆರೋಪಿಗಳನ್ನು ಸೌದಿ ಅರೇಬಿಯಾದಿಂದ ವಾಪಸ್ ಕರೆಸಿತ್ತು.
ಇಂಟರ್‌ಪೋಲ್ ರೆಡ್ ನೋಟಿಸ್ ಹೊಂದಿದ್ದ ಬರ್ಕತ್ ಅಲಿ ಖಾನ್ 2012ರ ಗಲಭೆ ಮತ್ತು ಸ್ಫೋಟಕ ವಸ್ತುಗಳ ಬಳಕೆಯ ಪ್ರಕರಣದಲ್ಲಿ ಬೇಕಾಗಿದ್ದ. ನವೆಂಬರ್ 14 ರಂದು ಅವರನ್ನು ಸೌದಿ ಅರೇಬಿಯಾದಿಂದ ವಾಪಸ್ ಕರೆತರಲಾಗಿತ್ತು.
Advertisement