ಮುಂಬೈ: ಮುಂಬೈ ನಲ್ಲಿ ತಾಪಮಾನ 16 ಡಿಗ್ರಿಗೆ ತಾಪಮಾನ ಕುಸಿತವಾಗಿದೆ. ನವೆಂಬರ್ ತಿಂಗಳಲ್ಲಿ 8 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಅತ್ಯಂತ ಚಳಿ ದಾಖಲಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ತನಕ ಸಾಂತಾಕ್ರೂಜ್ ವೀಕ್ಷಣಾಲಯ ಈ ತಾಪಮಾನವನ್ನು ದಾಖಲಿಸಿದೆ.
ಇದಕ್ಕೂ ಮೊದಲು, ಈ ಹವಾಮಾನ ಕೇಂದ್ರ ನವೆಂಬರ್ 11, 2016 ರಂದು ಕನಿಷ್ಠ 16.3 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿತ್ತು ಎಂದು ಐಎಂಡಿ ಮುಂಬೈನ ವಿಜ್ಞಾನಿ ಸುಷ್ಮಾ ನಾಯರ್ ಹೇಳಿದ್ದಾರೆ. ಸಾಂತಾಕ್ರೂಜ್ ವೀಕ್ಷಣಾಲಯ ಮುಂಬೈನ ಉಪನಗರಗಳಿಗೆ ಹವಾಮಾನ ನಿಯತಾಂಕಗಳನ್ನು ದಾಖಲಿಸುತ್ತದೆ.
ದ್ವೀಪ ನಗರಕ್ಕೆ ಹವಾಮಾನ ನಿಯತಾಂಕಗಳನ್ನು ದಾಖಲಿಸುವ ಮಹಾನಗರದಲ್ಲಿರುವ ಕೊಲಾಬಾ ವೀಕ್ಷಣಾಲಯ ಅದೇ ಅವಧಿಯಲ್ಲಿ 21.4 ಡಿಗ್ರಿ ಸೆಲ್ಸಿಯಸ್‌ನ ಕನಿಷ್ಠ ತಾಪಮಾನವನ್ನು ದಾಖಲಿಸಿದೆ.
ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ಮಹಾರಾಷ್ಟ್ರದಲ್ಲಿ ಶೀತ ಅಲೆಯ ಎಚ್ಚರಿಕೆ ಇಲ್ಲ ಮತ್ತು ತಾಪಮಾನವು ಹೆಚ್ಚಾಗಲಿದೆ ಎಂದು ನಾಯರ್ ಹೇಳಿದ್ದಾರೆ.
Advertisement