ಅದಾನಿ ಲಂಚ ಪ್ರಕರಣ ಗದ್ದಲ: ಸತತ ನಾಲ್ಕನೇ ದಿನ ಸಂಸತ್ತು ಕಲಾಪ ಮುಂದೂಡಿಕೆ

ನೀವು ಕಲಾಪ ಸುಗಮವಾಗಿ ನಡೆಯಲು ಬಿಡದಿದ್ದರೆ ನಿಯಮ 267 ನ್ನು ಅಡ್ಡಿಪಡಿಸುವ ಕಾರ್ಯವಿಧಾನವಾಗಿ ಅಸ್ತ್ರಗೊಳಿಸಲಾಗತ್ತದೆ ಎಂದು ಸಭಾಪತಿಗಳು ಹೇಳಿದರು.
Opposition MPs protest over Adani and 'Sambhal issues in Lok Sabha during the Winter Session of Parliament in New Delhi.
ದೆಹಲಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅದಾನಿ ಮತ್ತು 'ಸಂಭಾಲ್ ವಿಷಯಗಳ ಕುರಿತು ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದರು.
Updated on

ನವದೆಹಲಿ: ಗೌತಮ್ ಅದಾನಿ ಲಂಚದ ಆರೋಪ ಮತ್ತು ಇತರ ವಿಷಯಗಳ ಕುರಿತು ವಿರೋಧ ಪಕ್ಷದ ಸದಸ್ಯರು ಇಂದು ಶುಕ್ರವಾರವೂ ಪ್ರತಿಭಟನೆಯನ್ನು ಮುಂದುವರೆಸಿದ್ದರಿಂದ ಸಂಸತ್ತಿನ ಉಭಯ ಸದನಗಳಲ್ಲಿ ಚಳಿಗಾಲದ ಅಧಿವೇಶನದ ಕಲಾಪ ಸತತ ನಾಲ್ಕನೇ ದಿನವೂ ಸ್ಥಗಿತಗೊಂಡಿದೆ.

ರಾಜ್ಯಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು, ಆದರೆ ಪ್ರತಿಪಕ್ಷಗಳ ಸಂಸದರು ಸಮಸ್ಯೆಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದರಿಂದ ಲೋಕಸಭೆಯನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ಇಂದು ಬೆಳಗ್ಗೆ ರಾಜ್ಯಸಭೆ ಕಲಾಪ ಆರಂಭಗೊಂಡಾಗ ಸಭಾಪತಿ ಜಗದೀಪ್ ಧನಕರ್ ಅವರು ಸದನದ ನಿಯಮ 267 ರ ಅಡಿಯಲ್ಲಿ ನಿಗದಿತ ವ್ಯವಹಾರವನ್ನು ಮುಂದೂಡಲು 17 ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು.

ಅದಾನಿ ಗ್ರೂಪ್ ವಿರುದ್ಧದ ಭ್ರಷ್ಟಾಚಾರ ಮತ್ತು ಅಕ್ರಮಗಳ ಆರೋಪಗಳು, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಕೋಮು ಹಿಂಸಾಚಾರ ಮತ್ತು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳ ಕುರಿತು ಚರ್ಚೆಗಾಗಿ ಪ್ರತಿಪಕ್ಷಗಳ ಸಂಸದರು ನೊಟೀಸ್ ಜಾರಿ ಮಾಡಿದರು. ಎಲ್ಲಾ ನೋಟಿಸ್‌ಗಳನ್ನು ತಿರಸ್ಕರಿಸುತ್ತಿರುವುದಾಗಿ ಸಭಾಪತಿ ಹೇಳಿದರು. ಇದು ಹಲವು ವಿರೋಧ ಪಕ್ಷದ ಸಂಸದರ ಪ್ರತಿಭಟನೆಗೆ ಕಾರಣವಾಗಿ ಅವರು ಘೋಷಣೆಗಳನ್ನು ಎತ್ತಲು ಪ್ರಾರಂಭಿಸಿದರು.

ನೀವು ಕಲಾಪ ಸುಗಮವಾಗಿ ನಡೆಯಲು ಬಿಡದಿದ್ದರೆ ನಿಯಮ 267 ನ್ನು ಅಡ್ಡಿಪಡಿಸುವ ಕಾರ್ಯವಿಧಾನವಾಗಿ ಅಸ್ತ್ರಗೊಳಿಸಲಾಗತ್ತದೆ ಎಂದು ಸಭಾಪತಿಗಳು ಹೇಳಿದರು. ಈ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸಂಸದರು ವಿರೋಧ ವ್ಯಕ್ತಪಡಿಸಿದರು. ಕಲಾಪ ಮುಂದುವರಿಸಲಾಗದೆ ಸಭಾಧ್ಯಕ್ಷರು ಸದನದ ಕಲಾಪವನ್ನು ಡಿಸೆಂಬರ್ 2ಕ್ಕೆ ಮುಂದೂಡಿದರು.

Opposition MPs protest over Adani and 'Sambhal issues in Lok Sabha during the Winter Session of Parliament in New Delhi.
ಅದಾನಿ, ಸಂಭಾಲ್ ಹಿಂಸಾಚಾರ ಗದ್ದಲ; ಸಂಸತ್ತಿನಲ್ಲಿ ಕೋಲಾಹಲ; ಉಭಯ ಸದನ ಕಲಾಪ ನಾಳೆಗೆ ಮುಂದೂಡಿಕೆ

ಅದಾನಿ ವಿವಾದ ಮತ್ತು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತು ವಿರೋಧ ಪಕ್ಷದ ಸದಸ್ಯರ ಗದ್ದಲದ ನಂತರ ಲೋಕಸಭೆಯ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಸದನವು ದಿನದ ಮಟ್ಟಿಗೆ ಸಭೆ ಸೇರಿದ ತಕ್ಷಣ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ವಿವಿಧ ವಿಷಯಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದರು. ಬಹುತೇಕ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕೆಲ ಸದಸ್ಯರು ಕೂಡ ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು.

ಸಭಾಪತಿ ಓಂ ಬಿರ್ಲಾ ಅವರು ಸದನ ನಡೆಸಲು ಅವಕಾಶ ನೀಡಬೇಕು ಮತ್ತು ಪ್ರಶ್ನೋತ್ತರ ಅವಧಿ ಸದಸ್ಯರ ಸಮಯ ಎಂದು ಹೇಳಿದರು. ಸುಮಾರು 10 ನಿಮಿಷಗಳ ಕಾಲ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಎರಡು ಪ್ರಶ್ನೆಗಳನ್ನು ತೆಗೆದುಕೊಳ್ಳಲಾಯಿತು. ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com