ವಾರಣಾಸಿ ದೇವಾಲಯಗಳಿಂದ ಸಾಯಿಬಾಬಾ ಪ್ರತಿಮೆ ತೆರವು: ಹಿಂದೂ ಸಂಘಟನೆಯ ಮುಖ್ಯಸ್ಥನ ಬಂಧನ

ಹಲವು ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ಸನಾತನ ರಕ್ಷಕ ದಳದ ಸದಸ್ಯರು ತೆರವುಗೊಳಿಸಿದ ನಂತರ ಸ್ಥಳೀಯ ಸಂಘಟನೆಯ ಮುಖ್ಯಸ್ಥ ಅಜಯ್ ಶರ್ಮಾ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾರಣಾಸಿ: ವಾರಣಾಸಿಯ ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವು ಅಭಿಯಾನ ನಡೆಸುತ್ತಿದ್ದ ಸ್ಥಳೀಯ ಹಿಂದೂ ಸಂಘಟನೆಯಾದ ಸನಾತನ ರಕ್ಷಕ ದಳದ ಮುಖ್ಯಸ್ಥನನ್ನು ಶಾಂತಿ ಭಂಗದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಕಳೆದ ಮಂಗಳವಾರ ಇಲ್ಲಿನ ಹಲವು ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ಸನಾತನ ರಕ್ಷಕ ದಳದ ಸದಸ್ಯರು ತೆರವುಗೊಳಿಸಿದ ನಂತರ ಸ್ಥಳೀಯ ಸಂಘಟನೆಯ ಮುಖ್ಯಸ್ಥ ಅಜಯ್ ಶರ್ಮಾ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ.

ಶಾಂತಿ ಭಂಗದ ಆರೋಪದ ಮೇಲೆ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸ್ವಾಲ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಜ್ಞಾನವಾಪಿ ಪ್ರಕರಣ: '8 ವಾರಗಳಲ್ಲಿ ಶಿವಲಿಂಗ ಪೂಜೆ ಕುರಿತು ನಿರ್ಧರಿಸಿ'; ವಾರಣಾಸಿ ಕೋರ್ಟ್ ಗೆ ಹೈಕೋರ್ಟ್

ಲೊಹಾಟಿಯಾದ ಬಡಾ ಗಣೇಶ ದೇವಸ್ಥಾನದಲ್ಲಿರುವ ಸಾಯಿಬಾಬಾ ವಿಗ್ರಹ ಸೇರಿದಂತೆ ಇದುವರೆಗೆ 14 ದೇವಸ್ಥಾನಗಳಿಂದ ಸಾಯಿಬಾಬಾ ವಿಗ್ರಹವನ್ನು ತೆಗೆದುಹಾಕಲಾಗಿದೆ ಎಂದು ಶರ್ಮಾ ಬುಧವಾರ ಹೇಳಿದ್ದಾರೆ ಮತ್ತು ಇನ್ನೂ 50 ದೇವಾಲಯಗಳಿಂದ ಸಾಯಿಬಾಬಾ ವಿಗ್ರಹವನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ಕ್ರಮಕ್ಕೆ ಹಲವು ಸಾಯಿಬಾಬಾ ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ದೇವಾಲಯಗಳ ಭದ್ರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಯಿಬಾಬಾ ಮಂದಿರಗಳ ವ್ಯವಸ್ಥಾಪಕರು ಸಭೆ ನಡೆಸಿ ವಾತಾವರಣ ಹಾಳು ಮಾಡಲು ಯತ್ನಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು.

ಕಾಶಿಯಲ್ಲಿ ಪರಮಾತ್ಮನಾದ ಶಿವನ ಪೂಜೆ ಮಾತ್ರ ನಡೆಯಬೇಕು ಎಂದು ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com