ಮೇಘಾಲಯದಲ್ಲಿ ಪ್ರವಾಹ, ಭೂಕುಸಿತ; 10 ಮಂದಿ ಸಾವು: ಪರಿಸ್ಥಿತಿ ಪರಿಶೀಲಿಸಿದ ಸಿಎಂ ಸಂಗ್ಮಾ

ಗಾರೋ ಹಿಲ್ಸ್‌ನ ಎಲ್ಲಾ ಐದು ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಪಶ್ಚಿಮ ಗಾರೋ ಹಿಲ್ಸ್(ಮೂರು) ಮತ್ತು ದಕ್ಷಿಣ ಗ್ಯಾರೋ ಹಿಲ್ಸ್(ಏಳು)ನಲ್ಲಿ ಸಾವುಗಳು ವರದಿಯಾಗಿವೆ.
ಮೇಘಾಲಯದಲ್ಲಿ ಪ್ರವಾಹ
ಮೇಘಾಲಯದಲ್ಲಿ ಪ್ರವಾಹ
Updated on

ಗುವಾಹಟಿ: ಮೇಘಾಲಯದ ಗಾರೋ ಹಿಲ್ಸ್ ಪ್ರದೇಶದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಶನಿವಾರ ಕನಿಷ್ಠ 10 ಜನ ಮೃತಪಟ್ಟಿದ್ದಾರೆ.

ಗಾರೋ ಹಿಲ್ಸ್‌ನ ಎಲ್ಲಾ ಐದು ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಪಶ್ಚಿಮ ಗಾರೋ ಹಿಲ್ಸ್(ಮೂರು) ಮತ್ತು ದಕ್ಷಿಣ ಗ್ಯಾರೋ ಹಿಲ್ಸ್(ಏಳು)ನಲ್ಲಿ ಸಾವುಗಳು ವರದಿಯಾಗಿವೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಇಂದು ಬೆಳಗ್ಗೆ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಶುಕ್ರವಾರ ಮಧ್ಯರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಲು ಪ್ರದೇಶ ಹಾಗೂ ಪಶ್ಚಿಮ ಗಾರೋ ಬೆಟ್ಟಗಳ ಬಯಲು ಸೀಮೆಯಲ್ಲಿ ಪ್ರವಾಹ ಉಂಟಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮೇಘಾಲಯದಲ್ಲಿ ಪ್ರವಾಹ
ಮೇಘಾಲಯ: ಅತ್ಯಾಚಾರ ಯತ್ನದ ಆರೋಪದ ಮೇಲೆ ಇಬ್ಬರನ್ನು ಹೊಡೆದು ಕೊಂದ ಜನ!

ದಕ್ಷಿಣ ಗಾರೋ ಹಿಲ್ಸ್‌ನಲ್ಲಿರುವ ಗಾಸುಪಾರಾದಲ್ಲೂ ಪ್ರವಾಹ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ಅಲ್ಲಿ ಸೇತುವೆಯೊಂದು ಕೊಚ್ಚಿಹೋಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿದೆ.

“ದಲುವಿನಲ್ಲಿ ಮೂವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದು, ಮೃತರ ಸಂಬಂಧಿಕರಿಗೆ(ಮೃತರ) ಸೂಕ್ತ ಪರಿಹಾರ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು, ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ.

“ಗಸುವಾಪಾರ ಪೊಲೀಸ್ ಠಾಣೆ ವ್ಯಾಪ್ತಿಯ ಹತಿಯಾಸಿಯಾ ಸಂಗ್ಮಾ ಎಂಬ ಗ್ರಾಮದಲ್ಲಿ ಏಳು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com