IED ಮೂಲಕ ರೈಲ್ವೆ ಹಳಿ ಸ್ಫೋಟ ಯತ್ನ ಪ್ರಕರಣ: 6 ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ ಪಾಟ್ನಾ NIA ಕೋರ್ಟ್!

2016ರ ಸೆಪ್ಟೆಂಬರ್ 30ರ ರಾತ್ರಿ ಆರೋಪಿಗಳು ಹಳಿಗಳ ಮೇಲೆ ಪ್ರೆಶರ್ ಕುಕ್ಕರ್ IED ಅನ್ನು ಅಡಗಿಸಿ ಇಟ್ಟಿದ್ದರು ಎಂದು ಎನ್ಐಎ ಹೇಳಿದೆ. ನರ್ಕಟಿಯಾಗಂಜ್‌ನಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲನ್ನು ಸ್ಫೋಟಿಸುವುದು ಅವರ ಯೋಜನೆಯಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE
Updated on: 

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಘೋರಸಾಹನ್ ರೈಲು ನಿಲ್ದಾಣದ ಬಳಿ 2016ರಲ್ಲಿ ರೈಲ್ವೆ ಹಳಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಟ್ಟು ಸ್ಫೋಟಿಸುವ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯವು ಆರು ಮಂದಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಎಲ್ಲಾ ಅಪರಾಧಿಗಳಿಗೆ ಐದರಿಂದ 12 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೇಳಿಕೆ ಪ್ರಕಟಿಸಿದೆ.

2016ರ ಸೆಪ್ಟೆಂಬರ್ 30ರ ರಾತ್ರಿ ಆರೋಪಿಗಳು ಹಳಿಗಳ ಮೇಲೆ ಪ್ರೆಶರ್ ಕುಕ್ಕರ್ IED ಅನ್ನು ಅಡಗಿಸಿ ಇಟ್ಟಿದ್ದರು ಎಂದು ಎನ್ಐಎ ಹೇಳಿದೆ. ನರ್ಕಟಿಯಾಗಂಜ್‌ನಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲನ್ನು ಸ್ಫೋಟಿಸುವುದು ಅವರ ಯೋಜನೆಯಾಗಿತ್ತು. ಸ್ಥಳೀಯರು ಸಕಾಲದಲ್ಲಿ ಬಾಂಬ್ ಪತ್ತೆ ಹಚ್ಚಿದ ಬಳಿಕ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ತನಿಖೆಯ ವೇಳೆ ಸ್ಥಳೀಯ ಪೊಲೀಸರು ಉಮಾಶಂಕರ್ ರಾವುತ್ ಅಲಿಯಾಸ್ ರಾಜು ಪಟೇಲ್, ಗಜೇಂದ್ರ ಪಟೇಲ್ ಅಲಿಯಾಸ್ ಗಜೇಂದ್ರ ಠಾಕೂರ್, ರಾಕೇಶ್ ಕುಮಾರ್ ಯಾದವ್ ಅಲಿಯಾಸ್ ರಾಕೇಶ್, ಮುಖೇಶ್ ಯಾದವ್ ಅಲಿಯಾಸ್ ಮುಕೇಶ್, ಮೋತಿಲಾಲ್ ಪಾಸ್ವಾನ್ ಅಲಿಯಾಸ್ ಮೋತಿ ಮತ್ತು ರಂಜಯ್ ಕುಮಾರ್ ಶಾ ಅಲಿಯಾಸ್ ರಂಜಯ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಎನ್ಐಎ ಹೇಳಿದೆ.

ಸಂಗ್ರಹ ಚಿತ್ರ
ಪಂಜಾಬ್: ವಾಗ್ವಾದದ ವೇಳೆ AAP ನಾಯಕನಿಗೆ ಗುಂಡೇಟು!

2017ರಲ್ಲಿ ಈ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು. ಜುಲೈ 2017ರಲ್ಲಿ ಎಲ್ಲಾ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ತಪ್ಪಿತಸ್ಥರಿಗೆ ಐದರಿಂದ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಮೂರು ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X