
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಏಳು ಪಕ್ಷೇತರ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ.
2014 ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈಗ ಏಳು ಪಕ್ಷೇತರರು ಗೆದ್ದಿದ್ದಾರೆ.
ಜಮ್ಮು ಪ್ರದೇಶದ ಛಂಬ್ ಕ್ಷೇತ್ರದಿಂದ ಕಾಂಗ್ರೆಸ್ ತೊರೆದು ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸತೇಶ್ ಶರ್ಮಾ ಅವರು ಬಿಜೆಪಿ ಅಭ್ಯರ್ಥಿ ರಾಜೀವ್ ಶರ್ಮಾ ಅವರ ವಿರುದ್ಧ 6,929 ಮತಗಳ ಅಂತರದಿಂದ ಗೆದ್ದಿದ್ದಾರೆ.
ಎರಡು ಬಾರಿ ಸಂಸದ ಹಾಗೂ ಕಾಂಗ್ರೆಸ್ ನ ಮಾಜಿ ಸಚಿವ ಮದನ್ ಲಾಲ್ ಶರ್ಮಾ ಅವರ ಪುತ್ರರಾಗಿರುವ 42 ವರ್ಷದ ಸತೇಶ್ ಶರ್ಮಾ ಅವರು 33,985 ಮತಗಳನ್ನು ಪಡೆದಿದ್ದಾರೆ.
ಈ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ತಾರಾ ಚಂದ್ ಅವರು 16,449 ಮತಗಳನ್ನು ಪಡೆದು ಮೂರನೇ ಸ್ಥಾನ ಕುಸಿದಿದ್ದಾರೆ.
ಇಂದರ್ವಾಲ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಪಯಾರೆ ಲಾಲ್ ಶರ್ಮಾ ಅವರು ಹಿರಿಯ ನಾಯಕ ಗುಲಾಮ್ ಮೊಹಮ್ಮದ್ ಸರೂರಿ ಅವರ ವಿರುದ್ಧ 643 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಶರ್ಮಾ ಅವರು 14,195 ಮತಗಳನ್ನು ಪಡೆದರೆ, ಸ್ವತಂತ್ರ ಅಭ್ಯರ್ಥಿಯೂ ಆದ ಸರೂರಿ 13,552 ಮತಗಳನ್ನು ಪಡೆದಿದ್ದಾರೆ.
Advertisement