
ಮುಂಬೈ: ನಿಮ್ಮ ಪ್ರಭಾವ ಬಳಸಿ ಬಿಗ್ ಬಾಸ್ 18 ರ ಸೆಟ್‌ನಿಂದ ಕತ್ತೆಯನ್ನು ಹೊರಹಾಕುವಂತೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(PETA) ಇಂಡಿಯಾ ಬುಧವಾರ ಆಗ್ರಹಿಸಿದೆ.
ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ 18 ರ ಆವೃತ್ತಿಯಲ್ಲಿ 19ನೇ ಸ್ಪರ್ಧಿಯಾಗಿ ಗಧ್‌ರಾಜ್ ಆಗಿ ಕತ್ತೆಯನ್ನು ಪರಿಚಯಿಸಲಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ PETA ಇಂಡಿಯಾ, ಸಲ್ಮಾನ್ ಖಾನ್‌ಗೆ ಪತ್ರ ಬರೆದು, ಕತ್ತೆಯ ಬಳಕೆಯ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕರ ಕಳವಳವನ್ನು ಎತ್ತಿ ತೋರಿಸಿದೆ.
"ಬಿಗ್ ಬಾಸ್ ಮನೆಯಲ್ಲಿ ಕತ್ತೆಯನ್ನು ಸಾಕಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿವೆ. ಅವರ ಕಳವಳಗಳನ್ನು ನಿರ್ಲಕ್ಷಿಸಬಾರದು" ಎಂದು ಪೇಟಾ ಹೇಳಿದೆ.
"ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದನ್ನು ತಪ್ಪಿಸಲು, ತಮ್ಮ ಪ್ರಭಾವ ಬಳಿಸಿ, ಕತ್ತೆಯನ್ನು ಹೊರಹಾಕುವಂತೆ ಪ್ರದರ್ಶನದ ನಿರ್ಮಾಪಕರಿಗೆ ಹೇಳಿ ಎಂದು" ಪೇಟಾ ಪ್ರತಿನಿಧಿ ಶೌರ್ಯ ಅಗರವಾಲ್ ಅವರು ಸಲ್ಮಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ.
Advertisement