
ಮುಂಬೈ: ಅಶ್ಲೀಲತೆ ಕಾರಣದಿಂದಾಗಿ ಹಿಂದಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಿಲ್ಲಿಸಬೇಕು ಎಂದು ಶಿವಸೇನಾ ಎಂಎಲ್ ಸಿಯೊಬ್ಬರು ಸೋಮವಾರ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆಯ ವಕ್ತಾರರೂ ಆಗಿರುವ ಮನೀಶಾ ಕಯಾಂಡೆ ಅವರು ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜುಲೈ 18 ರಂದು ಪ್ರಸಾರವಾದ ಸಂಚಿಕೆಯಲ್ಲಿ ಬಿಗ್ ಬಾಸ್ ಬೆಡ್ ರೂಂನಲ್ಲಿ ಕವರ್ ಅಡಿಯಲ್ಲಿ ಕೃತಿಕಾ ಮಲಿಕ್ ಅವರೊಂದಿಗೆ ಸ್ಪರ್ಧಿ ಅರ್ಮಾನ್ ಮಲಿಕ್ ಅಶ್ಲೀಲವಾಗಿ ಕಾಣಿಸಿಕೊಂಡಿದ್ದಾರೆ. ಅವರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಎಂದು ಅವರು ಹೇಳಿದ್ದಾರೆ.
"ಮಕ್ಕಳು ಸಹ ಪ್ರದರ್ಶನವನ್ನು ವೀಕ್ಷಿಸುತ್ತಾರೆ. ಅದು ಅವರ ಮೇಲೆ ಪರಿಣಾಮ ಬೀರುತ್ತದೆ. ಪ್ರದರ್ಶನವನ್ನು ನಿಲ್ಲಿಸಬೇಕು ಮತ್ತು ಅದನ್ನು ಪ್ರಸಾರ ಮಾಡುವ ಕಂಪನಿಯ ಶೋ ನಿರ್ಮಾಪಕರು ಮತ್ತು ಸಿಇಒ ವಿರುದ್ಧ ಸೈಬರ್ ಕ್ರೈಂ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಕಯಾಂಡೆ ಒತ್ತಾಯಿಸಿದ್ದಾರೆ.
"ಬಿಗ್ ಬಾಸ್ ಇನ್ನು ಮುಂದೆ ಫ್ಯಾಮಿಲಿ ಶೋ ಅಲ್ಲ. ಅರ್ಮಾನ್ ಮಲಿಕ್ ಮತ್ತು ಕೃತಿಕಾ ಮಲಿಕ್ ಎಲ್ಲಾ ಇತಿ ಮಿತಿಗಳನ್ನು ದಾಟಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement