
ಬಾಂಗ್ಲಾದೇಶದ ರಾಜಧಾನಿ ಢಾಕಾದ ತಂತಿಬಜಾರ್‌ನಲ್ಲಿರುವ ಪೂಜಾ ಮಂದಿರದ ಮೇಲಿನ ದಾಳಿ ಮತ್ತು ಸತ್ಖೈರಾದ ಪ್ರತಿಷ್ಠಿತ ಜೆಶೋರೇಶ್ವರಿ ಕಾಳಿ ದೇವಸ್ಥಾನದ ಕಳ್ಳತನವನ್ನು ಖಂಡಿಸಿರುವ ವಿದೇಶಾಂಗ ಸಚಿವಾಲಯವು, ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶ ಸರ್ಕಾರಕ್ಕೆ ಕರೆ ನೀಡಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. 'ಬಾಂಗ್ಲಾದೇಶದ ಪೂಜಾ ಮಂದಿರದ ಮೇಲಿನ ದಾಳಿ ಮತ್ತು ಹಿಂದೂ ದೇವಾಲಯಗಳನ್ನು ಅಪವಿತ್ರಗೊಳಿಸುವಿಕೆ ಮತ್ತು ಹಾನಿ ಕುರಿತು ನಮ್ಮ ಖಂಡನೆ ಎಂದು ಬರೆದಿದ್ದಾರೆ.
ಬಾಂಗ್ಲಾದೇಶದ ಹಿಂದೂ ದೇವಾಲಯಗಳ ಮೇಲಿನ ದಾಳಿ ಮತ್ತು ಕಳ್ಳತನವನ್ನು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರವಾಗಿ ಖಂಡಿಸಿ ಈ ಹೇಳಿಕೆ ಪ್ರಕಟಿಸಿದೆ. ಬಾಂಗ್ಲಾದೇಶ ಸರ್ಕಾರವು ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕರೆ ನೀಡಿದೆ. ಢಾಕಾದ ತಂತಿಬಜಾರ್‌ನಲ್ಲಿರುವ ಪೂಜಾ ದೇವಾಲಯದ ಮೇಲಿನ ದಾಳಿ ಮತ್ತು ಸತ್ಖಿರಾದ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ನಡೆದ ಕಳ್ಳತನದ ಘಟನೆ ತೀವ್ರ ಕಳವಳ ಉಂಟು ಮಾಡಿದೆ. ಇವು ಖಂಡನೀಯ ಘಟನೆಗಳು. ದೇವಸ್ಥಾನಗಳು ಮತ್ತು ದೇವತೆಗಳಿಗೆ ಅಪವಿತ್ರಗೊಳಿಸುವ ಮತ್ತು ಹಾನಿ ಮಾಡುವಲ್ಲಿ ಅವರು ವ್ಯವಸ್ಥಿತ ಮಾದರಿಯನ್ನು ಅನುಸರಿಸುವುದನ್ನು ನಾವು ಕಳೆದ ಹಲವಾರು ದಿನಗಳಿಂದ ನೋಡುತ್ತಿದ್ದೇವೆ ಎಂದು ಬರೆದಿದೆ.
ಬಾಂಗ್ಲಾದೇಶದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನಡೆಯುತ್ತಿರುವ ದುರ್ಗಾ ಪೂಜೆಯಲ್ಲಿ ಸುಮಾರು 35 ಅಹಿತಕರ ಘಟನೆಗಳು ನಡೆದಿರುವುದನ್ನು ಗಮನಿಸಬಹುದು. ಈ ಸಂಬಂಧ ಸ್ಥಳೀಯ ಪೊಲೀಸರು 17 ಮಂದಿಯನ್ನು ಬಂಧಿಸಿದ್ದಾರೆ. ಬಾಂಗ್ಲಾದೇಶದಲ್ಲಿನ ಸತ್ಖಿರಾದ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದ ಚಿನ್ನದ ಕಿರೀಟವನ್ನು ಕದ್ದೊಯ್ದಿರುವ ಬಗ್ಗೆ ಪೊಲೀಸರು 12ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. 2021ರ ಮಾರ್ಚ್ ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಿರೀಟವನ್ನು ದೇವಾಲಯಕ್ಕೆ ಅರ್ಪಿಸಿದ್ದರು.
Advertisement