
ಪ್ಯಾಂಗೋಂಗ್: ಪ್ಯಾಂಗೊಂಗ್ ಸರೋವರದ ಉತ್ತರ ದಡದಲ್ಲಿ ಚೀನಾದ ಹೊಸ ನೆಲೆ ಉಪಗ್ರಹದ ಕಣ್ಣಿಗೆ ಬಿದ್ದಿದೆ. ಈ ಉಪಗ್ರಹ ಚಿತ್ರವನ್ನು ವಿಶ್ಲೇಷಿಸಿರುವ ಹಿರಿಯ ಭಾರತೀಯ ಸೇನಾ ಮೂಲಗಳು, ಈ ತಾಣ, ಚೀನಾದ ಬದಿಯಲ್ಲಿರುವ ಎನ್ಎಸಿ ಯ ಯಾವುದೇ ಬೇರೆ ಪ್ರದೇಶಕ್ಕಿಂತ ಭಿನ್ನವಾಗಿದೆ" ಎಂದು ಹೇಳಿದೆ.
ಈ ವರದಿಯಲ್ಲಿ ಪ್ರಕಟವಾದ ಚಿತ್ರಗಳಲ್ಲಿರುವ ಪ್ರಶ್ನಾರ್ಹ ಪ್ರದೇಶ, LAC ಯಿಂದ ಪೂರ್ವಕ್ಕೆ 36 ಕಿಲೋಮೀಟರ್ ದೂರದಲ್ಲಿ ಚೀನಾ ಹೊಂದಿರುವ ಭೂಪ್ರದೇಶದಲ್ಲಿದೆ. ಇದು ಲಡಾಖ್‌ನ ಎತ್ತರದ ಪ್ಯಾಂಗೊಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸಿದ ಹೊಸ ಸೇತುವೆಯ ಪೂರ್ವಕ್ಕೆ ಸರಿಸುಮಾರು 15 ಕಿಮೀ ದೂರದಲ್ಲಿದೆ ಮತ್ತು ಈ ಹಿಂದೆ ಆಕ್ರಮಿಸದಿರುವ ನೈಜ ನಿಯಂತ್ರಣ ರೇಖೆಯ ಸಮೀಪವಿರುವ ಪ್ರದೇಶಗಳಲ್ಲಿ ಒತ್ತಡವನ್ನು ಹೆಚ್ಚಿಸುವಲ್ಲಿ ಬೀಜಿಂಗ್‌ನ ಇತ್ತೀಚಿನ ಪ್ರಯತ್ನವನ್ನು ಗುರುತಿಸುತ್ತಿದೆ.
ಸೇನಾ ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಶೇ.70 ಕ್ಕಿಂತಲೂ ಹೆಚ್ಚಿನ ಶಾಶ್ವತ ರಚನೆಗಳಿದ್ದು, ಕ್ಷಿಪಣಿ ದಾಳಿಯ ಸಂಭಾವ್ಯ ಪರಿಣಾಮವನ್ನು ಕಡಿಮೆ ಮಾಡಲು ಇದನ್ನು ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಪ್ರದೇಶದಲ್ಲಿ ಚೀನಾದ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿರುವ ಸೈನಿಕರು ಮತ್ತು ಪೋರ್ಟರ್‌ಗಳಿಗೆ ಅವಕಾಶ ಕಲ್ಪಿಸುವುದು. ಮತ್ತು ಭಾರತದೊಂದಿಗೆ LAC ಉದ್ದಕ್ಕೂ ಸ್ಥಳಗಳಿಗೆ ಸಂಭಾವ್ಯ ವರ್ಗಾವಣೆಗಾಗಿ ಲಾಜಿಸ್ಟಿಕ್ಸ್ ನ್ನು ಸಂಗ್ರಹಿಸಲು ಸೌಲಭ್ಯವನ್ನು ಕಲ್ಪಿಸುವುದು ಈ ನಿರ್ಮಾಣಗಳ ಪ್ರಾಥಮಿಕ ಕಾರ್ಯಗಳಾಗಿವೆ, "ಪ್ರತಿ ರಚನೆಯು 6-8 ಸೈನಿಕರು ಅಥವಾ 10 ಟನ್ಗಳಷ್ಟು ಲಾಜಿಸ್ಟಿಕ್ಸ್ ಗೆ ಅವಕಾಶ ಕಲ್ಪಿಸುತ್ತದೆ" ಎಂದು ಮಿಲಿಟರಿ ತಜ್ಞರು ಹೇಳಿದ್ದಾರೆ.
ಏಪ್ರಿಲ್ 2022 ರಲ್ಲಿ, ಈ ಪ್ರದೇಶ ಖಾಲಿಯಾಗಿತ್ತು. ನಿರ್ಮಾಣ ಮಾರ್ಚ್ 2024 ರಲ್ಲಿ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.
Advertisement