ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಮಹತ್ವದ ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ

ಅ.18 ರಂದು ಈ ಗುಂಪಿನ ಮೊದಲ ಸಭೆ ಪ್ರಧಾನಮಂತ್ರಿ ಕಚೇರಿಯಲ್ಲಿ ನಡೆದಿದ್ದು ರೈಲ್ವೆ ಮಂಡಳಿ ಅಧ್ಯಕ್ಷರು ಸೇರಿದಂತೆ ಭಾರತ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳೂ ಹೈಬ್ರಿಡ್ ಮೋಡ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು.
Shivraj Chouhan- Narendra Modi
ಶಿವರಾಜ್ ಸಿಂಗ್ ಚೌಹಾಣ್- ನರೇಂದ್ರ ಮೋದಿonline desk
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೆಚ್ಚಿನ ಅಧಿಕಾರದೊಂದಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿದ್ದಾರೆ.

ಕೃಷಿ, ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲ್ವಿಚಾರಣಾ ಗುಂಪು ರಚಿಸಿದ್ದು, ಇದು ಬಜೆಟ್ ನಲ್ಲಿ ಘೋಷಿಸಲಾದ ಯೋಜನೆಗಳು ಹಾಗೂ ಪ್ರಧಾನಿ ಮೋದಿ ಅವರಿಂದ ಘೋಷಿಸಲಾದ ಯೋಜನೆಗಳು, ಮೂಲಸೌಕರ್ಯ ಯೋಜನೆಗಳ ಜಾರಿಯನ್ನು ಪರಿಶೀಲಿಸಲಿದೆ.

ಅ.18 ರಂದು ಈ ಗುಂಪಿನ ಮೊದಲ ಸಭೆ ಪ್ರಧಾನಮಂತ್ರಿ ಕಚೇರಿಯಲ್ಲಿ ನಡೆದಿದ್ದು ರೈಲ್ವೆ ಮಂಡಳಿ ಅಧ್ಯಕ್ಷರು ಸೇರಿದಂತೆ ಭಾರತ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳೂ ಹೈಬ್ರಿಡ್ ಮೋಡ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು.

ಮಧ್ಯಪ್ರದೇಶದಲ್ಲಿ 3 ಬಾರಿ ಮುಖ್ಯಮಂತ್ರಿಯಾಗಿದ್ದ ಚೌಹಾಣ್ ಅಧ್ಯಕ್ಷತೆಯ ಮೇಲ್ವಿಚಾರಣಾ ಗುಂಪು ಪ್ರತಿ ತಿಂಗಳು ಸೌತ್ ಬ್ಲಾಕ್‌ನಲ್ಲಿರುವ PMO ನಲ್ಲಿ ಎಲ್ಲಾ ಸರ್ಕಾರಿ ಯೋಜನೆಗಳನ್ನು ಪರಿಶೀಲಿಸಲು ಮತ್ತು ಫಲಪ್ರದತೆಯ ಕಡೆಗೆ ಕೊಂಡೊಯ್ಯಲು ಆಗಬೇಕಿರುವುದನ್ನು ಚರ್ಚಿಸಲು ಸಭೆ ಸೇರುತ್ತದೆ.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಪ್ರಕಾರ, 2014 ರಲ್ಲಿ ತಮ್ಮ ಅಡಿಯಲ್ಲಿ ಮೊದಲ ಎನ್‌ಡಿಎ ಸರ್ಕಾರ ರಚನೆಯಾದಾಗಿನಿಂದ ಘೋಷಣೆಗೊಂಡ ಯೋಜನೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರಧಾನಿ ಮೋದಿ ಅವರು ಕೇಂದ್ರ ಸಚಿವ ಚೌಹಾಣ್‌ಗೆ ಅಧಿಕಾರವನ್ನು ವಹಿಸಿದ್ದಾರೆ. ಪ್ರಧಾನಮಂತ್ರಿ ಘೋಷಿಸಿದ ವಿವಿಧ ಯೋಜನೆಗಳಿಗೆ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೇಲ್ವಿಚಾರಣಾ ಗುಂಪಿನ ಸಭೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಸರ್ಕಾರ ಮೇಲ್ವಿಚಾರಣಾ ಗುಂಪಿನ ಬಗ್ಗೆ ಯಾವುದೇ ಮಾಹಿತಿ ನೀಡದೇ ಇದ್ದರೂ, ಪ್ರಧಾನಮಂತ್ರಿಯವರ ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾದ ಪ್ರಕಟಣೆಗಳು, ಮೋದಿಯವರು ಅಡಿಗಲ್ಲು ಹಾಕಿದ ಯೋಜನೆಗಳು, ಬಜೆಟ್ ಘೋಷಣೆಗಳು, ಅಧೀನ ಶಾಸನಗಳು ಅಥವಾ ನಿಯಮಗಳ ಮೇಲೆ ಇನ್ನೂ ರೂಪಿಸಬೇಕಾದ ಕಾನೂನುಗಳು; ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ಚೌಹಾಣ್ ಪರಿಶೀಲಿಸುವ ನಿರೀಕ್ಷೆಯಿದೆ.

Shivraj Chouhan- Narendra Modi
ಯಾರಾಗ್ತಾರೆ ಬಿಜೆಪಿ ರಾಷ್ಟ್ರಾಧ್ಯಕ್ಷ?: ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಗೆ RSS ಮಣೆ; ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್ ಗೆ ಪ್ರಧಾನಿ ಒಲವು

ಯೋಜನೆಗಳ ಅವಲೋಕನದ ಹೊರತಾಗಿ, ಯಾವುದೇ ಯೋಜನೆಯು ಮಂದಗತಿಯಲ್ಲಿ ಕಂಡುಬಂದಲ್ಲಿ ಅಥವಾ ಉನ್ನತ ಕಚೇರಿಯಿಂದ ಅಂತರ-ಸಚಿವಾಲಯದ ಬೆಂಬಲದ ಅಗತ್ಯವಿದ್ದರೆ, ಚೌಹಾಣ್ ಅವರು ಸಂಬಂಧಿಸಿದ ಕಾರ್ಯದರ್ಶಿಗಳಿಗೆ ಪ್ರಧಾನಿ ಕಾರ್ಯಾಲಯದ ನಿರೀಕ್ಷೆಗಳನ್ನು ತಿಳಿಸುತ್ತಾರೆ.

ದಿನನಿತ್ಯದ ಆಡಳಿತ ಮತ್ತು ಜಾಗತಿಕ ವ್ಯವಹಾರಗಳೆರಡರಲ್ಲೂ ಪಾಲ್ಗೊಳ್ಳುವಿಕೆಯಿಂದಾಗಿ, ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ಸಮಯದ ವಿಳಂಬದ ಬಗ್ಗೆ ಪ್ರಧಾನಮಂತ್ರಿ ಕಾಳಜಿ ವಹಿಸಿದ್ದಾರೆ ಮತ್ತು ಆಗಾಗ್ಗೆ ತಮ್ಮ ಕಾರ್ಯದರ್ಶಿಗಳೊಂದಿಗೆ, ಉನ್ನತ PMO ಅಧಿಕಾರಿಗಳೊಂದಿಗಿನ ನಿಕಟ ಸಭೆಗಳಲ್ಲಿ ತಮ್ಮ ಆತಂಕಗಳನ್ನು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಳಂಬವಾಗದಂತೆ ಎಚ್ಚರ ವಹಿಸಲು ದಕ್ಷ ನಿರ್ವಾಹಕರಾಗಿ ವ್ಯಾಪಕವಾಗಿ ಕಂಡುಬರುವ ಚೌಹಾಣ್, 65 ರ ನೇತೃತ್ವದ ಈ ಮೇಲ್ವಿಚಾರಣಾ ಗುಂಪು ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com