'ಹಲ್ಲು ಕಿತ್ತ ಹಾವಂತಾಗಿದೆ ಪರಿಸರ ಕಾನೂನುಗಳು... ದಂಡ ಜಾರಿಗೊಳಸುತ್ತಿಲ್ಲ': ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಗುಣಮಟ್ಟ ಕುಸಿದು ವಾಯುಮಾಲೀನ್ಯ ಹೆಚ್ಚಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
A view of India Gate covered with thin layer of smog, in New Delhi on Tuesday.
ಮಂಗಳವಾರ ನವದೆಹಲಿಯಲ್ಲಿ ತೆಳುವಾದ ಹೊಗೆಯ ಪದರದಿಂದ ಆವೃತವಾದ ಇಂಡಿಯಾ ಗೇಟ್‌ನ ನೋಟ. ಫೋಟೋ | ANIPhoto | ANI
Updated on

ನವದೆಹಲಿ: ಪರಿಸರ ಸಂರಕ್ಷಣಾ ಕಾನೂನುಗಳ ಸಮರ್ಪಕ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಬುಧವಾರ ಕಿಡಿಕಾರಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಗುಣಮಟ್ಟ ಕುಸಿದು ವಾಯುಮಾಲೀನ್ಯ ಹೆಚ್ಚಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಪರಿಸರ ಕಾನೂನುಗಳು ಹಲ್ಲು ರಹಿತವಾಗಿದ್ದು, ದಂಡವನ್ನು ಸರಿಯಾಗಿ ಜಾರಿಗೊಳಿಸಲಾಗುತ್ತಿಲ್ಲ ಎಂದು ಹೇಳಿದೆ.

ಪ್ರಮುಖವಾಗಿ ಬೆಳೆಗಳ ಅವಶೇಷಗಳ ಸುಡುವಿಕೆಗೆ ದಂಡವನ್ನು ವಿಧಿಸುವ ಸಿಎಕ್ಯೂಎಂ ಕಾಯಿದೆಯಡಿಯಲ್ಲಿ ನಿಬಂಧನೆಯನ್ನು ಜಾರಿಗೊಳಿಸಲಾಗುತ್ತಿಲ್ಲ ಎಂದು ಹೇಳಿದೆ. ರಾಜಧಾನಿ ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳ ಕಾಯಿದೆ 2021 (ಸಿಎಕ್ಯೂಎಂ ಆಕ್ಟ್) ನಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗವು ಗಾಳಿ ಮಾಲಿನ್ಯವನ್ನು ನಿಗ್ರಹಿಸುವ ನಿಬಂಧನೆಯನ್ನು ಜಾರಿಗೆ ತರಲು ಅಗತ್ಯವಾದ ಯಂತ್ರೋಪಕರಣಗಳನ್ನು ರಚಿಸದೆ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.

A view of India Gate covered with thin layer of smog, in New Delhi on Tuesday.
ದೆಹಲಿ ಮತ್ತೆ ವಿಶ್ವದ ಅತ್ಯಂತ ಮಾಲಿನ್ಯಯುತ ರಾಜಧಾನಿ; ಕಳಪೆ ವಾಯು ಗುಣಮಟ್ಟ ಹೊಂದಿರುವ ಮೂರನೇ ರಾಷ್ಟ್ರ ಭಾರತ!

ಕೇಂದ್ರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, 10 ದಿನಗಳಲ್ಲಿ ನಿಯಮಾವಳಿಗಳನ್ನು ಹೊರಡಿಸಲಾಗುವುದರಿಂದ CAQM ಕಾಯಿದೆಯ ಸೆಕ್ಷನ್ 15 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಅಲ್ಲದೆ ಈ ಸಂಬಂಧ ನ್ಯಾಯನಿರ್ಣಯ ಅಧಿಕಾರಿಯನ್ನು ನೇಮಿಸಲಾಗುವುದು ಮತ್ತು ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ವಾಯು ಗುಣಮಟ್ಟ ನಿರ್ವಹಣಾ ಆಯೋಗವು (ಸಿಎಕ್ಯೂಎಂ) ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧಿಕಾರಿಗಳಲ್ಲದೆ ಪಂಜಾಬ್ ಮತ್ತು ಹರಿಯಾಣದ ಹಿರಿಯ ಆಡಳಿತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ ಮತ್ತು ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಅವರ ಪ್ರತಿಕ್ರಿಯೆ ಕೇಳಿದೆ ಎಂದು ಭಾಟಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಈ ವೇಳೆ ಸರ್ಕಾರದ ಕ್ರಮಕ್ಕೆ ಆಕ್ರೋಶಗೊಂಡ ಪೀಠವು, 'ಕಾನೂನಿನಡಿಯಲ್ಲಿ ಕಾರ್ಯವಿಧಾನವನ್ನು ಒದಗಿಸದ ಕಾರಣ ನಿಮ್ಮ ನೋಟಿಸ್‌ಗಳನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ದಯವಿಟ್ಟು ಈ ಅಧಿಕಾರಿಗಳಿಗೆ ಜಾಮೀನು ನೀಡಬೇಡಿ ಎಂದು ನಿಮ್ಮ ಸಿಎಕ್ಯೂಎಂ ಅಧ್ಯಕ್ಷರಿಗೆ ತಿಳಿಸಿ. ಸ್ಥಳದಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿದೆ ಎಂದು ಹೇಳಿತು.

ಈ ವೇಳೆ ತಮ್ಮ ವಾದ ಮಂಡಿಸಿದ ಭಾಟಿ ಅವರು, 'ಪಂಜಾಬ್‌ನ ಹಲವಾರು ಜಿಲ್ಲೆಗಳಾದ ಅಮೃತಸರ, ಫಿರೋಜ್‌ಪುರ, ಪಟಿಯಾಲ, ಸಂಗ್ರೂರ್ ಮತ್ತು ತರನ್ ತರಣ್‌ಗಳಲ್ಲಿ 1,000 ಕ್ಕೂ ಹೆಚ್ಚು ಹುಲ್ಲು ಸುಡುವ ಪ್ರಕರಣಗಳು ನಡೆದಿವೆ ಎಂದು ಪೀಠದ ಗಮನಸೆಳೆದರು.

ಇನ್ನು ಅಕ್ಟೋಬರ್ 16 ರಂದು, ಸುಪ್ರೀಂ ಕೋರ್ಟ್ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಉಲ್ಲಂಘಿಕರ ವಿರುದ್ಧ ಕಾನೂನು ಕ್ರಮ ಜರುಗಿಸದ ಕಾರಣ ಬೆಳೆ ಅವಶೇಷ ಸುಟ್ಟ ಆರೋಪದ ಮೇಲೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಅಕ್ಟೋಬರ್ 23 ರಂದು ವಿವರಣೆಗಾಗಿ ಹಾಜರಾಗುವಂತೆ ಸಮನ್ಸ್ ನೀಡಿತ್ತು.

ರಾಷ್ಟ್ರೀಯ ರಾಜಧಾನಿ ದೆಹಲಿ ಪ್ರದೇಶದಲ್ಲಿ (ಎನ್‌ಸಿಆರ್) ಹುಲ್ಲು ಸುಡುವುದನ್ನು ನಿಲ್ಲಿಸಲು ಸಿಎಕ್ಯೂಎಂ ಹೊರಡಿಸಿದ ನಿರ್ದೇಶನಗಳನ್ನು ಜಾರಿಗೊಳಿಸಲು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com