ಫಲವತ್ತತೆಯಲ್ಲಿ ಇಳಿಕೆ: ದಕ್ಷಿಣ ಭಾರತದಲ್ಲಿ ಶಿಶುಗಳ ಜನನ ಪ್ರಮಾಣ ಕುಸಿತ; ದೀರ್ಘಾವಧಿಯಲ್ಲಿ ಎಲ್ಲಾ ಸ್ತರಗಳ ಮೇಲೆ ಪರಿಣಾಮ!

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಜನನ ಪ್ರಮಾಣದಲ್ಲಿ ರಾಷ್ಟ್ರೀಯ ಸರಾಸರಿ ಶೇಕಡಾ 2.1 ಕ್ಕಿಂತ ಕಡಿಮೆ ದರ ಹೊಂದಿದೆ. ತಮಿಳುನಾಡು ಶೇಕಡಾ 1.4 ಕ್ಕಿಂತ ಕಡಿಮೆ, ಆಂಧ್ರ ಪ್ರದೇಶ (AP), ತೆಲಂಗಾಣ ಮತ್ತು ಕೇರಳದಲ್ಲಿ ಕ್ರಮವಾಗಿ 1.5 ಮತ್ತು ಕರ್ನಾಟಕದಲ್ಲಿ 1.6 ಇದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದಕ್ಷಿಣ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಿಶುಗಳ ಜನನ ದರ ಕುಸಿಯುತ್ತಿದ್ದು, ಸಂಶೋಧಕರು ಎಚ್ಚರಿಕೆಯ ಗಂಟೆ ಮೊಳಗಿದ್ದಾರೆ. ಇದು ಜನಸಂಖ್ಯೆ, ಆರ್ಥಿಕತೆ, ಸಾಮಾಜಿಕ ಸ್ಥಿತಿಗತಿ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ.

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಜನನ ದರದಲ್ಲಿ ರಾಷ್ಟ್ರೀಯ ಸರಾಸರಿ ಶೇಕಡಾ 2.1 ಕ್ಕಿಂತ ಕಡಿಮೆ ದರ ಹೊಂದಿದೆ. ತಮಿಳುನಾಡು ಶೇಕಡಾ 1.4 ಕ್ಕಿಂತ ಕಡಿಮೆ, ಆಂಧ್ರಪ್ರದೇಶ (AP), ತೆಲಂಗಾಣ ಮತ್ತು ಕೇರಳದಲ್ಲಿ ಕ್ರಮವಾಗಿ 1.5 ಮತ್ತು ಕರ್ನಾಟಕದಲ್ಲಿ 1.6 ಇದೆ.

ಇದರಿಂದ ಸಂಸತ್ತಿನಲ್ಲಿ ಈ ರಾಜ್ಯಗಳ ಜನಸಂಖ್ಯೆಶಾಸ್ತ್ರ, ಆರ್ಥಿಕತೆ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಫಲವತ್ತತೆ ಮತ್ತು ಸಾಮಾಜಿಕ ಜನಸಂಖ್ಯಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ್ ಗೋಲಿ ಹೇಳುತ್ತಾರೆ. ಇದು ಮುಂಬೈಯ ಐಐಪಿಎಸ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.

ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS5) ಮಾಹಿತಿಯ ಪ್ರಕಾರ, ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ - ಕೇವಲ ಮೂರು ರಾಜ್ಯಗಳು ಮಾತ್ರ ಒಟ್ಟು ಶಿಶುಗಳ ಜನನ ದರಗಳನ್ನು ಹೊಂದಿವೆ (ಮಹಿಳೆ ತನ್ನ ಜೀವನದಲ್ಲಿ ಹೊಂದಿರುವ ಜನನ ಸರಾಸರಿ ಸಂಖ್ಯೆ) ಬದಲಿ ಮಟ್ಟಕ್ಕಿಂತ ಹೆಚ್ಚು 2.1ರಷ್ಟಿದೆ.

Representational image
ಐಸಿಎಸ್‌ಐ ಫಲವಂತಿಕೆ ಚಿಕಿತ್ಸೆ ಅಥವಾ ICSI Fertility Treatment (ಕುಶಲವೇ ಕ್ಷೇಮವೇ)

ಇತ್ತೀಚೆಗೆ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಸಿಎಮ್ ಎಂ.ಕೆ. ಸ್ಟಾಲಿನ್ ತಮ್ಮ ರಾಜ್ಯಗಳಲ್ಲಿ ಶಿಶುಗಳ ಜನನ ಪ್ರಮಾಣ ಕುಸಿಯುವ ಬಗ್ಗೆ ಮಾತನಾಡಿದ್ದರು. ಕುಟುಂಬಗಳು ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕೆಂದು ಕರೆ ನೀಡಿದ್ದರು.

ಪೋಷಕರು ಮಕ್ಕಳನ್ನು ಹೊಂದಲು ಭಾರಿ ಹಣಕಾಸಿನ ಸ್ಥಿತಿಗತಿ ಹೊಂದಿದ್ದರೂ ಶಿಶುಗಳ ಜನನ ಸಂಖ್ಯೆಯಲ್ಲಿ ಕೊರತೆ ಇರುವುದರಿಂದ ಕೇಂದ್ರದ ಸೌಲಭ್ಯ ಪಡೆಯಲು ದೇಶದ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಭಾರತೀಯರು ಹಿನ್ನಡೆ ಕಾಣುತ್ತಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳು ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿವೆ, ಆದರೆ ತಲಾ ಆದಾಯ, ಜೀವನ ಮಟ್ಟ ಮತ್ತು ಆರೋಗ್ಯ ಮತ್ತು ಶಿಕ್ಷಣದಂತಹ ಮಾನವ ಅಭಿವೃದ್ಧಿ ಸೂಚಕಗಳ ವಿಷಯದಲ್ಲಿ ಅಲ್ಲ ಎನ್ನುತ್ತಾರೆ ಓರ್ವ ಜನಸಂಖ್ಯಾಶಾಸ್ತ್ರಜ್ಞರು.

Representational image
ಡ್ರ‍್ಯಾಗನ್ ಫ್ರೂಟ್: ಆರೋಗ್ಯ ಪ್ರಯೋಜನಗಳು, ಮತ್ತು ಅದನ್ನು ತಿನ್ನುವುದು ಹೇಗೆ? (ಕುಶಲವೇ ಕ್ಷೇಮವೇ)

ದೇಶದ ಖಜಾನೆಗೆ ಅವರ ಕೊಡುಗೆ ಭಾರತದ ಉಳಿದ ಭಾಗಗಳಿಗಿಂತ ಹೆಚ್ಚಿನದಾಗಿದ್ದರೂ, ಅವರ ಕಡಿಮೆ ಜನಸಂಖ್ಯೆಯಿಂದಾಗಿ ಅವರು ಕೇಂದ್ರದಿಂದ ತಮ್ಮ ಆದಾಯದ ಷೇರುಗಳನ್ನು ಕಳೆದುಕೊಂಡಿದ್ದಾರೆ. 1.8 ಕ್ಕಿಂತ ಕಡಿಮೆ ಶಿಶುಗಳ ಜನನ ಪ್ರಮಾಣವು ಅವರ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜನಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ.

ಭಾರತದಂತಹ ಹೆಚ್ಚು ಪಿತೃಪ್ರಧಾನ ಸಮಾಜದಲ್ಲಿ, ಶೀಘ್ರದಲ್ಲೇ ಎಲ್ಲಿಯಾದರೂ ಲಿಂಗ ಸಮತಾವಾದವನ್ನು ಖಚಿತಪಡಿಸಿಕೊಳ್ಳುವುದು ಸುಲಭವಲ್ಲ ಎಂದು ಸಂಶೋಧಕರು ಹೇಳುತ್ತಾರೆ. ದಕ್ಷಿಣ ಭಾರತದ ರಾಜ್ಯಗಳು “ಆರೋಗ್ಯ ಸುಧಾರಣೆಗಳು ಮತ್ತು ಸಾಮಾಜಿಕ ಭದ್ರತೆಯ ಮೂಲಕ ಆರೋಗ್ಯವನ್ನು ಬೆಳೆಸಿಕೊಳ್ಳುವುದರಲ್ಲಿ ಸಕ್ರಿಯಗೊಳಿಸುವಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com