ಅಕ್ರಮ ಮೀನುಗಾರಿಕೆ ಆರೋಪ: ಶ್ರೀಲಂಕಾ ನೌಕ ಪಡೆಯಿಂದ 12 ಭಾರತೀಯ ಮೀನುಗಾರರ ಬಂಧನ

ಉತ್ತರ ಪ್ರಾಂತ್ಯದ ಜಾಫ್ನಾ, ಪೆಡ್ರೊ ಕರಾವಳಿಯಲ್ಲಿ ಮೀನುಗಾರರನ್ನು ಬಂಧಿಸಿದ್ದು, ಅವರ ಬೋಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಕೊಲಂಬೊ: ಸಮುದ್ರದ ಗಡಿ ದಾಟಿ ಮೀನುಗಾರಿಕೆಯಲ್ಲಿ ತೊಡಗಿದ ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾ ನೌಕಾಪಡೆಯು ಭಾನುವಾರ 12 ಭಾರತೀಯ ಮೀನುಗಾರರನ್ನು ಬಂಧಿಸಿ ಅವರ ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಇದರೊಂದಿಗೆ ಶ್ರೀಲಂಕಾದಲ್ಲಿ ಈ ವರ್ಷ ಬಂಧನಕ್ಕೆ ಒಳಗಾದ ಭಾರತೀಯ ಮೀನುಗಾರರ ಸಂಖ್ಯೆ 462ಕ್ಕೆ ಏರಿಕೆಯಾಗಿದೆ.

ಉತ್ತರ ಪ್ರಾಂತ್ಯದ ಜಾಫ್ನಾ, ಪೆಡ್ರೊ ಕರಾವಳಿಯಲ್ಲಿ ಮೀನುಗಾರರನ್ನು ಬಂಧಿಸಿದ್ದು, ಅವರ ಬೋಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ 12 ಮೀನುಗಾರರನ್ನು ಕಂಕಸಂತುರೈ ಬಂದರಿಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕಾ ಇನ್ ಸ್ಪೆಕ್ಟರ್ ಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಇದೇ ವರ್ಷ ಇಲ್ಲಿಯವರೆಗೆ 62 ಭಾರತೀಯ ಮೀನುಗಾರಿಕೆ ದೋಣಿಗಳನ್ನು ವಶಕ್ಕೆ ಪಡೆದಿದೆ ಮತ್ತು 462 ಭಾರತೀಯ ಮೀನುಗಾರರನ್ನು ಬಂಧಿಸಿ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ ಎಂದು ಶ್ರೀಲಂಕಾ ನೌಕಾಪಡೆ ಮಾಹಿತಿ ನೀಡಿದೆ

ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯದಲ್ಲಿ ಮೀನುಗಾರರ ಸಮಸ್ಯೆ ವಿವಾದವಾಗಿ ಪರಿಣಮಿಸಿದೆ. ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ಲಂಕಾ ನೌಕಾಪಡೆಯ ಸಿಬ್ಬಂದಿ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿರುವ ಘಟನೆಯೂ ನಡೆದಿದೆ. ಹಲವಾರು ಘಟನೆಗಳಲ್ಲಿ ಭಾರತೀಯ ಮೀನುಗಾರರ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.

Casual Images
ಶ್ರೀಲಂಕಾದಿಂದ ಬಿಡುಗಡೆಯಾದ ಹತ್ತು ಭಾರತೀಯ ಮೀನುಗಾರರು ಚೆನ್ನೈಗೆ ಆಗಮನ

ಪುನರಾವರ್ತಿತ ಸಮಸ್ಯೆಯ ಕುರಿತು ಚರ್ಚಿಸಲು 12 ಸದಸ್ಯರ ಭಾರತೀಯ ತಂಡ ಮಂಗಳವಾರ ಕೊಲಂಬೊಗೆ ಆಗಮಿಸಲಿದೆ ಎಂದು ಶ್ರೀಲಂಕಾದ ಮೀನುಗಾರಿಕೆ ಸಚಿವಾಲಯ ಪ್ರಕಟಿಸಿದೆ. ಪಾಕ್ ಜಲಸಂಧಿಯು ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸಲಿದ್ದು, ಎರಡೂ ದೇಶಗಳ ಮೀನುಗಾರರಿಗೆ ಪ್ರಮುಖ ಮೀನುಗಾರಿಕೆ ಕೇಂದ್ರವಾಗಿದೆ. ಉಭಯ ದೇಶಗಳ ಮೀನುಗಾರರು ಅಜಾಗರೂಕತೆಯಿಂದ ಪರಸ್ಪರರ ಗಡಿ ದಾಟಿ ಮೀನುಗಾರಿಕೆ ನಡೆಸಿದ ಕಾರಣಕ್ಕಾಗಿ ಆಗಾಗ್ಗೆ ಬಂಧನಕ್ಕೊಳಗಾಗುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com