
ಕರ್ಬಿ ಅಂಗ್ಲಾಂಗ್: ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ 10 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಮಣಿಪುರದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ಸಂಜೆ ದಿಲ್ಲೈ ಟಿನಿಯಾಲಿ ಪ್ರದೇಶದಲ್ಲಿ ವಾಡಿಕೆಯ ತಪಾಸಣೆ ಸಂದರ್ಭದಲ್ಲಿ ನಿಷೇಧಿತ ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ನಮ್ಮ ತಂಡವು ವಾಹನವನ್ನು ತೀವ್ರ ತಾಪಸಣೆ ನಡೆಸಿದೆ. ಈ ವೇಳೆ ಹಿಡನ್ ಚೇಂಬರ್ ನಲ್ಲಿ ಇರಿಸಲಾಗಿದ್ದ 25 ಬಂಡಲ್ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಬಂಡಲ್‌ಗಳು 50,000 ಮಾತ್ರೆಗಳನ್ನು ಒಳಗೊಂಡಿದ್ದು, ಇವುಗಳ ಮೌಲ್ಯ ಸುಮಾರು 10 ಕೋಟಿ ರೂಪಾಯಿ ಎಂದು ಅವರು ಹೇಳಿದ್ದಾರೆ.
ವಾಹನದಲ್ಲಿದ್ದ ಮಣಿಪುರದ ದಂಪತಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement