
ನರ್ಮದಾ ಜಿಲ್ಲೆ(ಗುಜರಾತ್): ಭಾರತದ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಮತ್ತು ಜಗತ್ತಿನಲ್ಲಿ ಭಾರತ ದೇಶದ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸಲು ಅರಾಜಕತೆಯನ್ನು ಹರಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಭಾರತದ ಮೊದಲ ಗೃಹ ಸಚಿವ ಹಾಗೂ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆ ಬಳಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
2014 ರಿಂದ, ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ಅಕ್ಟೋಬರ್ 31 ರಂದು 'ರಾಷ್ಟ್ರೀಯ ಏಕತಾ ದಿವಸ್' ಅಥವಾ ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲಾಗುತ್ತದೆ.
ಭಾರತದ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಮತ್ತು ಜಗತ್ತಿನಲ್ಲಿ ರಾಷ್ಟ್ರದ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸಲು ಅರಾಜಕತೆಯನ್ನು ಹರಡಲು ಪ್ರಯತ್ನಿಸುತ್ತಿವೆ. ಅವರು ದೇಶವನ್ನು ಜಾತಿಯ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ಅದು ಅಭಿವೃದ್ಧಿ ಹೊಂದಿದ ಭಾರತಕ್ಕೆ ವಿರುದ್ಧವಾಗಿದ್ದಾರೆ ಎಂದು ಹೇಳಿದರು.
ದೇಶವನ್ನು ಒಡೆಯಲು ಪ್ರಯತ್ನಿಸುತ್ತಿರುವ ನಗರ ನಕ್ಸಲರ ನಂಟನ್ನು ಗುರುತಿಸಿ ಅದನ್ನು ಬೇರುಸಮೇತ ಕಿತ್ತೆಸೆಯುವ ಪ್ರಯತ್ನವಾಗಬೇಕು ಎಂದು ಅವರು ದೇಶದ ಜನರನ್ನು ಒತ್ತಾಯಿಸಿದರು.
ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ಸಮಸ್ಯೆ ಕಡಿಮೆಯಾಗುತ್ತಿದ್ದಂತೆ ಹೊಸ ಮಾದರಿಯ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ, ಒಗ್ಗಟ್ಟಾಗಿ ಇದ್ದರೆ ಸುರಕ್ಷಿತವಾಗಿರುತ್ತೀರಿ ಎಂದು ಹೇಳುವವರನ್ನೂ ಇಂದು ಅರ್ಬನ್ ನಕ್ಸಲರು ಟಾರ್ಗೆಟ್ ಮಾಡುತ್ತಿದ್ದಾರೆ, ನಗರ ನಕ್ಸಲರನ್ನು ಗುರುತಿಸಿ ಅವರ ಮುಖವಾಡ ಕಳಚಬೇಕಿದೆ ಎಂದರು. .
ಭಾರತದ ಏಕೀಕರಣದ ಬಗ್ಗೆ ಸಂಶಯ ವ್ಯಕ್ತಪಡಿಸುವ ಜನರಿದ್ದರೂ ಸರ್ದಾರ್ ಪಟೇಲ್ ಅದನ್ನು ಸಾಧ್ಯವಾಗಿಸಿದ್ದಾರೆ ಎಂದ ಮೋದಿ, ಮುಂದಿನ ಎರಡು ವರ್ಷಗಳ ಕಾಲ ದೇಶವು ಪಟೇಲ್ ಅವರ 150 ನೇ ಜಯಂತಿಯನ್ನು ಆಚರಿಸಲಿದೆ ಎಂದು ಹೇಳಿದರು.
ನಮ್ಮ ರಾಷ್ಟ್ರವು ನಮ್ಮ ದೇಶವನ್ನು ಬಲಪಡಿಸುವ 'ಒಂದು ರಾಷ್ಟ್ರ, ಒಂದು ಜಾತ್ಯತೀತ ನಾಗರಿಕ ಸಂಹಿತೆ' ಅನುಷ್ಠಾನದತ್ತ ಸಾಗುತ್ತಿದೆ. ನಾವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಒಂದು ರಾಷ್ಟ್ರ, ಒಂದು ಚುನಾವಣೆ' ಉಪಕ್ರಮವನ್ನು ತರಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು.
ಕಳೆದ 70 ವರ್ಷಗಳಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಕಳೆದ 10 ವರ್ಷಗಳಲ್ಲಿ ಸರ್ಕಾರದ ಪ್ರಯತ್ನದಿಂದಾಗಿ ನಕ್ಸಲಿಸಂ ಭಾರತದಲ್ಲಿ ಕೊನೆಯಾಗುತ್ತಿದೆ ಎಂದರು.
ಇದೇ ವೇಳೆ ಪ್ರತಿಪಕ್ಷಗಳನ್ನು ಟೀಕಿಸಿದ ಪ್ರಧಾನಿ ಮೋದಿ, 70 ವರ್ಷಗಳಿಂದ ಡಾ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತಂದಿಲ್ಲ, ಸಂವಿಧಾನದ ಹೆಸರನ್ನು ಜಪಿಸುವವರು ಅಪಮಾನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರ ಒಂದು ದೇಶ, ಒಂದು ಸಂವಿಧಾನ ಎಂಬ ಸಂಕಲ್ಪ ಈಡೇರಿರುವುದಕ್ಕೆ ಇಂದು ಇಡೀ ದೇಶವೇ ಸಂತಸ ವ್ಯಕ್ತಪಡಿಸಿದೆ. ಇದು ಸರ್ದಾರ್ ಪಟೇಲ್ ಅವರಿಗೆ ನಾನು ಸಲ್ಲಿಸುವ ಅತಿ ದೊಡ್ಡ ಗೌರವ. 70 ವರ್ಷಗಳಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಇಡೀ ದೇಶದಲ್ಲಿ ಜಾರಿಯಾಗಿಲ್ಲ. ಸಂವಿಧಾನದ ಹೆಸರನ್ನು ಜಪಿಸುವವರು ಅದನ್ನು ತುಂಬಾ ಅವಮಾನಿಸಿದ್ದಾರೆ ಎಂದರು.
ಈ ವೈಫಲ್ಯಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿನ "ಆರ್ಟಿಕಲ್ 370 ರ ಗೋಡೆ" ಕಾರಣ ಎಂದು ಅವರು ಹೇಳಿದರು, "ಆರ್ಟಿಕಲ್ 370 ನ್ನು ಶಾಶ್ವತವಾಗಿ ಸಮಾಧಿ ಮಾಡಲಾಗಿದೆ" ಎಂದು ಆರೋಪಿಸಿದರು.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯ ಗೋಡೆಯೇ ಕಾರಣ. 370ನೇ ವಿಧಿಯನ್ನು ಶಾಶ್ವತವಾಗಿ ಹೂತುಹಾಕಲಾಗಿದೆ. ಇದೇ ಮೊದಲ ಬಾರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಾರತಮ್ಯವಿಲ್ಲದೆ ಮತದಾನ ಮಾಡಲಾಗಿದೆ.ಪ್ರಥಮ ಬಾರಿಗೆ ಅಲ್ಲಿನ ಮುಖ್ಯಮಂತ್ರಿ ಭಾರತದ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದರು.
ಇದಕ್ಕೂ ಮುನ್ನ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ವಾರ್ಷಿಕೋತ್ಸವದಂದು ಏಕತಾ ಪ್ರತಿಮೆಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ಪಟೇಲ್ ಅವರ ಕೆಲಸವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಪಟೇಲ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದ ನಂತರ ಏಕತಾ ಪ್ರಮಾಣ ವಚನ ಬೋಧಿಸಿದರು. ಕೆವಾಡಿಯಾದ ಪರೇಡ್ ಮೈದಾನದಲ್ಲಿ ನಡೆದ 'ರಾಷ್ಟ್ರೀಯ ಏಕತಾ ದಿವಸ್' ಪರೇಡ್‌ನಲ್ಲಿ ಭಾಗವಹಿಸಿದರು.
Advertisement