ಆರೋಪಿಯಾದ ಮಾತ್ರಕ್ಕೆ 'ಬುಲ್ಡೋಜರ್ ನ್ಯಾಯ' ಸರಿಯಲ್ಲ; ಸುಪ್ರೀಂ ಅಸಮಾಧಾನ; ಉತ್ತರ ಪ್ರದೇಶದ ಬಗ್ಗೆ ಶ್ಲಾಘನೆ!

ಒಬ್ಬ ವ್ಯಕ್ತಿ ಕೇವಲ ಆರೋಪಿ ಎಂಬ ಕಾರಣಕ್ಕಾಗಿ ಹೇಗೆ ಆತನಿಗೆ ಸಂಬಂಧಪಟ್ಟ ಆಸ್ತಿಯನ್ನು ಧ್ವಂಸಗೊಳಿಸುವುದು ಸಾಧ್ಯ? ಎಂದು ನ್ಯಾ. ಬಿಆರ್ ಗವಾಯಿ ಹಾಗೂ ಕೆವಿ ವಿಶ್ವನಾಥನ್ ಅವರಿದ್ದ ಪೀಠ ಪ್ರಶ್ನಿಸಿದೆ.
supreme court
ಸುಪ್ರೀಂ ಕೋರ್ಟ್ online desk
Updated on

ನವದೆಹಲಿ: ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವವರ ಮನೆಯನ್ನು ಧ್ವಂಸಗೊಳಿಸುವ ಪರಿಪಾಠವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಆಕ್ಷೇಪಿಸಿದೆ.

ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮುಂದಿನ ದಿನಗಳಲ್ಲಿ ತಾನೇ ಮಾರ್ಗಸೂಚಿಗಳನ್ನು ಪ್ರಕಟಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಒಬ್ಬ ವ್ಯಕ್ತಿ ಕೇವಲ ಆರೋಪಿ ಎಂಬ ಕಾರಣಕ್ಕಾಗಿ ಹೇಗೆ ಆತನಿಗೆ ಸಂಬಂಧಪಟ್ಟ ಆಸ್ತಿಯನ್ನು ಧ್ವಂಸಗೊಳಿಸುವುದು ಸಾಧ್ಯ? ಎಂದು ನ್ಯಾ. ಬಿಆರ್ ಗವಾಯಿ ಹಾಗೂ ಕೆವಿ ವಿಶ್ವನಾಥನ್ ಅವರಿದ್ದ ಪೀಠ ಪ್ರಶ್ನಿಸಿದೆ.

ಅಕ್ರಮವಾಗಿ ಆಸ್ತಿಗಳನ್ನು ಧ್ವಂಸ ಮಾಡುತ್ತಿರುವ ವಿಷಯವಾಗಿ ಕಳವಳ ವ್ಯಕ್ತವಾಗುತ್ತಿದ್ದು, ಇದನ್ನು ಬಗೆಹರಿಸಲು ದೇಶಾದ್ಯಂತ ಅನ್ವಯವಾಗುವ ರೀತಿಯಲ್ಲಿ ಮಾರ್ಗಸೂಚಿಗಳನ್ನು ವಿಧಿಸುವುದಾಗಿ ಕೋರ್ಟ್ ಇದೇ ವೇಳೆ ತಿಳಿಸಿದೆ.

ಅಚ್ಚರಿಯೆಂಬಂತೆ ಸುಪ್ರೀಂ ಕೋರ್ಟ್ ಬುಲ್ಡೋಜರ್ ಪ್ರಯೋಗದ ವಿಷಯವಾಗಿ ಉತ್ತರ ಪ್ರದೇಶ ರಾಜ್ಯದಲ್ಲಿನ ಕ್ರಮವನ್ನು ಮೆಚ್ಚಿದೆ. "ನಾವು ಉತ್ತರ ಪ್ರದೇಶ ರಾಜ್ಯ ತೆಗೆದುಕೊಂಡಿರುವ ನಿಲುವನ್ನು ಪ್ರಶಂಸಿಸುತ್ತೇವೆ". ದೇಶಾದ್ಯಂತ ಅನ್ವಯವಾಗುವ ಮಾರ್ಗಸೂಚಿಗಳನ್ನು ನ್ಯಾಯಾಲಯವು ರೂಪಿಸಲು ಕಕ್ಷಿದಾರರ ವಕೀಲರು ಸಲಹೆಗಳನ್ನು ನೀಡುವುದು ಸೂಕ್ತವೆಂದು ನಾವು ಕಂಡುಕೊಂಡಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಜಸ್ಥಾನದ ರಶೀದ್ ಖಾನ್ ಮತ್ತು ಮಧ್ಯಪ್ರದೇಶದ ಮೊಹಮ್ಮದ್ ಹುಸೇನ್ ಅವರು ತಮ್ಮ ಆಸ್ತಿಗಳನ್ನು ಕಾನೂನುಬಾಹಿರವಾಗಿ ಮತ್ತು ಅಧಿಕಾರಿಗಳು "ಸೇಡಿನ" ರೂಪದಲ್ಲಿ ಕೆಡವಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

supreme court
NEET-UG ಪರೀಕ್ಷೆ ಸಮಗ್ರತೆ ಕುರಿತು ಆಗಸ್ಟ್ 2ರ ಆದೇಶ: ಸುಪ್ರೀಂ ಕೋರ್ಟ್ ನಲ್ಲಿ ಮರು ಪರಿಶೀಲನಾ ಅರ್ಜಿ

60 ವರ್ಷದ ಆಟೋ ರಿಕ್ಷಾ ಚಾಲಕ ಖಾನ್ ಅವರ ಬಾಡಿಗೆ ಮನೆಯನ್ನು ಉದಯಪುರ ಜಿಲ್ಲಾಡಳಿತ ನೆಲಸಮಗೊಳಿಸಿದೆ, ಖಾನ್ ಅವರ ಮಗ, 15 ವರ್ಷದ ಶಾಲಾ ಬಾಲಕ ತನ್ನ ಸಹಪಾಠಿಯನ್ನು ಇರಿದ ಆರೋಪದ ಮೇಲೆ ಹಿಂದೂಗಳೊಂದಿಗೆ ನಗರದಲ್ಲಿ ಹಿಂಸಾಚಾರ ಆರಂಭವಾಗಿತ್ತು. ಸ್ವತ್ತುಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಮತ್ತೊಬ್ಬ ಅರ್ಜಿದಾರ ಮೊಹಮ್ಮದ್ ಹುಸೇನ್ ತನ್ನ ಮನೆ ಮತ್ತು ಅಂಗಡಿಯನ್ನು ಮಧ್ಯಪ್ರದೇಶದ ಆಡಳಿತವು ಅಕ್ರಮವಾಗಿ ನೆಲಸಮಗೊಳಿಸಿದೆ ಎಂದು ಆರೋಪಿಸಿದ್ದರು.

ಹರ್ಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರದ ನಂತರ ಜಮಿಯತ್ ಉಲಾಮಾ-ಇ-ಹಿಂದ್ ಮುಸ್ಲಿಂ ಮನೆಗಳನ್ನು ಕೆಡವುವುದರ ವಿರುದ್ಧ ಈ ಹಿಂದೆ ಸಲ್ಲಿಸಿದ್ದ ಪ್ರಕರಣದಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಹಿರಿಯ ವಕೀಲರಾದ ದುಶ್ಯಂತ್ ದವೆ (ಜಮಿಯತ್ ಉಲಾಮಾ-ಇ-ಹಿಂದ್ ಪರ ವಾರ) ಮತ್ತು ಸಿಯು ಸಿಂಗ್ (ಅರ್ಜಿದಾರರ ಪರ ಹಾಜರಾಗಿದ್ದಾರೆ) ಹಲವಾರು ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ಶಿಕ್ಷೆಯ ವಿಧಾನವಾಗಿ ನಡೆಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com